ನವ ದೆಹಲಿ;ಇಂದಿನಿಂದ ಅಂದರೆ ಆಗಸ್ಟ್ 1 ರಿಂದ ಎಲ್ಪಿಜಿ ಬೆಲೆಯಲ್ಲಿ ಬದಲಾವಣೆಗಳನ್ನು ಘೋಷಿಸಿವೆ.ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಇಳಿಸಿವೆ. ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರವನ್ನು ರೂ.100 ರೂ. ಕಡಿತಗೊಳಿಸಲಾಗಿದೆ. ದರ ಕಡಿತದ ಬಳಿಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ 1,680 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 1640 ರೂ. ಮತ್ತು ಚೆನ್ನೈನಲ್ಲಿ 1852 ರೂ. ಬೆಲೆಯಿದೆ. ಕರ್ನಾಟಕದಲ್ಲಿ ದರ ಬದಲಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.ಈ ತಿಂಗಳು ಗೃಹ ಬಳಕೆಯ ಸಿಲಿಂಡರ್ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ತೈಲ ಕಂಪನಿಗಳು ಕೇವಲ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಮಾಡಿವೆ. ಗೃಹಬಳಕೆಯ (14.2 ಕೆಜಿ )ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಸಿಲಿಂಡರ್ ಬೆಲೆಯಲ್ಲಿನ ಬದಲಾವಣೆಯನ್ನು ನೀವೇ ಪರಿಶೀಲಿಸಲು ಬಯಸಿದರೆ, https://iocl.com/prices-of-petroleum-products ಲಿಂಕ್ಗೆ ಭೇಟಿ ನೀಡಿ.