ಹೊಸದೆಹಲಿ ಮೇ 1: ಪ್ರತಿ ತಿಂಗಳು ಒಂದನೇ ತಾರೀಕು ಸಿಲಿಂಡರ್ ಬೆಲೆಯಲ್ಲಿ ಏರಿಕೆ – ಇಳಿಕೆಯಾಗುತ್ತದೆ. ಅದೇ ರೀತಿ, ಮೇ 1, 2023 ರ ಸೋಮವಾರ ಸಹ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸವಾಗಿದೆ,ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ (Commercial Cylinder) ಬೆಲೆ ಭಾರೀ ಇಳಿಕೆ ಕಂಡಿದ್ದು, 171. 50 ರೂ. ಕಡಿತಗೊಂಡಿದೆ. ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದೆ.ಈ ಬೆಲೆ ಇಳಿಕೆ ಕೇವಲ 19 ಕೆಜಿಯ ವಾಣಿಜ್ಯ ಬಳಕೆ ಸಿಲಿಂಡರ್ಗಳಿಗೆ ಮಾತ್ರ ಅನ್ವಯವಾಗಲಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.2023ರ ಏಪ್ರಿಲ್ 1ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ 91.50 ರೂ. ಕಡಿತ ಮಾಡಿದ್ದವು. ಆಗ ದಿಲ್ಲಿಯಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ದರ 2,028 ರೂ. ಇತ್ತು. ಕಳೆದ ಮಾರ್ಚ್ 1ರಂದು ತೈಲ ಮಾರುಕಟ್ಟೆ ಕಂಪನಿಗಳು ಕಮರ್ಶಿಯಲ್ ಎಲ್ಪಿಜಿ ಸಿಲಿಂಡರ್ ದರದಲ್ಲಿ 350.50 ರೂ. ಏರಿಕೆ ಮಾಡಿತ್ತು. ಡೊಮೆಸ್ಟಿಕ್ ಎಲ್ಪಿಜಿ ಸಿಲಿಂಡರ್ ದರದಲ್ಲಿ 50 ರೂ. ಏರಿಸಲಾಗಿತ್ತು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 1856.50 ರೂ. ಆಗಿದೆ. ಈ ಹಿಂದೆ 2,028 ರೂ. ಇತ್ತು. ಅದೇ ರೀತಿ ಮುಂಬೈನಲ್ಲಿ (Mumbai) ಈ ಮೊದಲು 1,980 ರೂ. ಇದ್ದು, ಇದೀಗ ಇದರ ಬೆಲೆ 1,808.50 ರೂ. ಆಗಿದೆ. ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ ಈ ಮೊದಲು 2,192.50 ರೂ. ಇದ್ದು, ಇದೀಗ 2,021.50 ರೂ. ಆಗಿದೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1856 ರೂಪಾಯಿ ಆಗಿದೆ.19 ಕೆ.ಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಇಳಿಕೆಯಿಂದ ಹೋಟೆಲ್, ರೆಸ್ಟೊರೆಂಟ್, ಉದ್ದಿಮೆಗಳಿಗೆ ಅನುಕೂಲವಾಗಲಿದೆ. ಹಣದುಬ್ಬರ ನಿಯಂತ್ರಿಸಲು ಕೂಡ ಸಹಕಾರಿಯಾಗುವ ನಿರೀಕ್ಷೆ ಇದೆ
ಯಾವ ನಗರದಲ್ಲಿ ಎಷ್ಟು ಬೆಲೆ (ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ)
*ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ 1856.50 ರೂ.
*ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1808.50 ರೂ.,
*ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1960.50 ಮತ್ತು
*ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2021.50 ರೂ.