27.9 C
Bengaluru
Saturday, July 6, 2024

ಮಹಿಳೆಯರು ಗೃಹ ಸಾಲ ಪಡೆಯಲು ಸಿಟಿ, ಐಸಿಐಸಿಐ, ಎಚ್‌ ಡಿಎಫ್‌ ಸಿ, ಎಸ್‌ ಬಿಐ ಬ್ಯಾಂಕ್‌ ಗಳಲ್ಲಿ ಯಾವುದು ಬೆಸ್ಟ್?

ಬೆಂಗಳೂರು, ಜು. 10 : ಮಹಿಳೆಯರಿಗೆ ವಿಶೇಷವಾಗಿ ಕೆಲ ಬ್ಯಾಂಕ್‌ ಗಳಲ್ಲಿ ಗೃಹ ಸಾಲ ಪಡೆಯಲು ಕಡಿಮೆ ಬಡ್ಡಿ ಅನ್ನು ನೀಡುತ್ತದೆ. ಸರ್ಕಾರ ಮಹಿಳೆಯರು ಆಸ್ತಿ ಖರೀದಿಸಲು ಉತ್ತೇಜನ ನೀಡುತ್ತದೆ. ಮಹಿಳಾ ಗೃಹ ಸಾಲದ ಅರ್ಜಿದಾರರಿಗೆ ಯಾವ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯುವುದು ಉತ್ತಮ. ಮಹಿಳೆಯರಿಗೆ ಬಡ್ಡ ದರ ಕಡಿಮೆಯೇ..? ಯಾವುದರಲ್ಲಿ ಎಷ್ಟು ಬಡ್ಡಿ ದರವಿದೆ ಎಂಬುದನ್ನು ಈ ಲೇಖನದಿಂದ ತಿಳಿಯಿರಿ.

ಎಸ್ ಬಿಐ ಬ್ಯಾಂಕ್ ನಲ್ಲಿ ಸಂಬಳ ಪಡೆಯುವ ಮಹಿಳೆಯರಿಗೆ ಕನಿಷ್ಠ ಶೇ.7.55 ರಷ್ಟು ಗರಿಷ್ಠ ಶೇ. 8.05 ರಷ್ಟು ಬಡ್ಡಿ ದರ ವಿಧಿಸಿದರೆ, ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ ಕನಿಷ್ಠ ಶೇ. 7.55 ರಷ್ಟು ಮತ್ತು ಗರಿಷ್ಠ ಶೇ.9.70 ರಷ್ಟು ಬ್ಯಾಂಕ್ ಬಡ್ಡಿ ದರವನ್ನು ವಿಧಿಸುತ್ತದೆ. ಸಾಲದ ಮೊತ್ತದ ಮೇಲೆ 0.40%, ಕನಿಷ್ಠ ರೂ 10,000 ಮತ್ತು ಗರಿಷ್ಠ ರೂ 30,000 ಗೆ GST ಯೊಂದಿಗೆ ಸಂಸ್ಕರಣಾ ಶುಲ್ಕವನ್ನು ಪಡೆಯುತ್ತದೆ. 30 ವರ್ಷಗಳ ದೀರ್ಘಾವಧಿಗೆ ಸಾಲವನ್ನು ನೀಡುತ್ತದೆ.

ಐಸಿಐಸಿಐ ಬ್ಯಾಂಕ್ ನಲ್ಲಿ 30 ವರ್ಷಗಳ ದೀರ್ಘಾವಧಿಗೆ ಗೃಹ ಸಾಲವನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್ ನಲ್ಲಿ ಸಂಬಳ ಪಡೆಯುವ ಮಹಿಳೆಯರಿಗೆ ಶೇ. 8.60 ರಷ್ಟು ನೀಡಿದರೆ, ಸತ ಉದ್ದಿಮೆ ಮಾಡುವ ಮಹಿಳೆಯರಿಗೆ ಶೇ. 8.65 ರಷ್ಟು ಬಡ್ಡಿ ದರವನ್ನು ವಿಧಿಸುತ್ತದೆ. ಗೃಹ ಸಾಲದ ಮೊತ್ತದ 0.50%, ರೂ 1,100 ರಿಂದ ಸಂಸ್ಕರಾ ಶುಲ್ಕ ಪ್ರಾರಂಭವಾಗುತ್ತದೆ. ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಿದೆ.

ಗೃಹ ಸಾಲ ಪಡೆಯಲು ಸಂಬಳ ಪಡೆಯುವ ಮಹಿಳೆಯರಿಗೆ ಶೇ. 7.90 ರಷ್ಟು ಹಾಗೂ ಸ್ವಯಂ ಉದ್ಯೋಗಿ ಮಹಿಳೆಯರಿಗೆ ಶೇ. 7.90 ರಷ್ಟು ಬಡ್ಡಿ ದರವನ್ನು ಬ್ಯಾಂಕ್ ವಿಧಿಸುತ್ತದೆ. 30 ವರ್ಷಗಳ ದೀರ್ಘಾವಧಿಗೆ ಗೃಹ ಸಾಲವನ್ನು ನೀಡುತ್ತದೆ. ಸಂಸ್ಕರಣಾ ಶುಲ್ಕವನ್ನು ಗೃಹ ಸಾಲದ ಮೊತ್ತದ 0.50% ವರೆಗೆ ಅಥವಾ ರೂ 3,000 ಅನ್ನು ಪಡೆಯುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ವಿಶೇಷವೆಂದರೆ, ಮಹಿಳೆಯರಿಗೆ 70 ವರ್ಷ ವಯಸ್ಸಿನವರಿಗೂ ಗೃಹ ಸಾಲವನ್ನು ನೀಡುತ್ತದೆ.

ಈ ಬ್ಯಾಂಕ್ ನಲ್ಲಿ ಗೃಹ ಸಾಲವನ್ನು ಪಡೆಯಲು ಸಂಬಳ ಪಡೆಯುವ ಮಹಿಳೆಯರಿಗೆ ಶೇ. 7.40 ರಷ್ಟು ಬಡ್ಡಿ ದರವಿದ್ದರೆ, ಸ್ವಯಂ ಉದ್ಯೋದ ಮಾಡುವ ಮಹಿಳೆಯರಿಗೆ ಶೇ. 7.45 ರಷ್ಟಿದೆ. 30 ವರ್ಷಗಳ ದೀರ್ಘಾವಧಿಗೆ ಗೃಹ ಸಾಲವನ್ನು ನೀಡುತ್ತದೆ. ಸಂಸ್ಕರಣಾ ಶುಲ್ಕವನ್ನು ಪ್ರಸ್ತುತ ವಿಧಿಸುತ್ತಿಲ್ಲ. ಆಕ್ಸಿಸ್ ಬ್ಯಾಂಕ್ ನಲ್ಲಿ ಹೋಮ್ ಲೋನ್ ಮೇಲೆ ಸಂಬಳ ಪಡೆಯುವ ಮಹಿಳೆಯರಿಗೆ ಕನಿಷ್ಠ ಶೇ.6.90 ರಷ್ಟು ಗರಿಷ್ಠ ಶೇ. 8.40 ರಷ್ಟು ಹಾಗೂ ಸ್ವಂತ ಬಿಸಿನೆಸ್ ಮಾಡುವ ಮಹಿಳೆಯರಿಗೆ ಕನಿಷ್ಠ ಶೇ. 7 ರಷ್ಟು ಹಾಗೂ ಗರಿಷ್ಠ ಶೇ. 8.55ರಷ್ಟು ಬಡ್ಡಿಯನ್ನು ವಿಧಿಸುತ್ತದೆ.

ಸಾಲದ ಮೊತ್ತದ 1% ವರೆಗೆ, ಕನಿಷ್ಠ 10,000 ರೂ. ಅಪ್ಲಿಕೇಶನ್ ಲಾಗಿನ್ ಸಮಯದಲ್ಲಿ ಮುಂಗಡ ಪ್ರಕ್ರಿಯೆ ಶುಲ್ಕ 5,000 ಮತ್ತು GST ಅನ್ನು ಸಂಸ್ಕರಣಾ ಶುಲ್ಕವನ್ನು ಆಕ್ಸಿಸ್ ಬ್ಯಾಂಕ್ ವಿಧಿಸುತ್ತದೆ. ಸಿಟಿ ಬ್ಯಾಂಕ್ ನಲ್ಲಿ ಮಹಿಳೆಯರಿಗೆ ಗೃಹ ಸಾಲವನ್ನು ನೀಡುತ್ತದೆ. ಸಂಬಳ ಪಡೆಯುವ ಮಹಿಳೆಯರಿಗೆ ಶೇ. 6.75 ರಷ್ಟು ಬಡ್ಡಿ ಹೇರುತ್ತದೆ. ಗೃಹ ಸಾಲಕ್ಕೆ ಗರಿಷ್ಠ ಅಧಿಕಾರಾವಧಿ 25 ವರ್ಷಗಳಾಗಿದೆ. ಇತರೆ ಬ್ಯಾಂಕ್ ಗಳೀಗೆ ಹೋಲಿಸಿದರೆ, ಸಿಟಿ ಬ್ಯಾಂಕ್ ನಲ್ಲಿ ಗೃಹ ಸಾಲದ ದೀರ್ಘಾವಧಿ ಸಮಯ 5 ವರ್ಷಗಳ ಕಾಲ ಕಡಿಮೆ ಇದೆ.

Related News

spot_img

Revenue Alerts

spot_img

News

spot_img