20.5 C
Bengaluru
Tuesday, July 9, 2024

ಪ್ಲಾಟ್ ಖರೀದಿಸಬೇಕಾ? 146 ಕೋಟಿ ರೂ.ಗಳ 14 ಪ್ಲಾಟ್‌ಗಳು ಮಾರಾಟಕ್ಕಿದೆ!

ನವಿ ಮುಂಬೈನ ಯೋಜನಾ ಪ್ರಾಧಿಕಾರವಾದ ಮಹಾರಾಷ್ಟ್ರದ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ (ಸಿಡ್ಕೊ) 23,000 ಚದರ ಮೀಟರ್‌ಗಿಂತ ಹೆಚ್ಚಿನ 14 ಪ್ಲಾಟ್‌ಗಳನ್ನು 146 ಕೋಟಿ ರೂ.ಗಳ ಮೂಲ ಬೆಲೆಗೆ ಇ-ಹರಾಜು ಮಾಡಲು ನಿರ್ಧರಿಸಿದೆ.

14 ಪ್ಲಾಟ್‌ಗಳು ನವಿ ಮುಂಬೈನ ಐರೋಲಿ, ಕಲಾಂಬೋಲಿ, ಕಾಮೋಥೆ, ಕೋಪರ್ ಖೈರಾನೆ ಮತ್ತು ಪನ್‌ವೆಲ್ ಪ್ರದೇಶಗಳಲ್ಲಿವೆ. 14 ಪ್ಲಾಟ್‌ಗಳಲ್ಲಿ 10 ಪನ್‌ವೆಲ್ ನಲ್ಲಿವೆ. ಪ್ಲಾಟ್‌ಗಳ ಗಾತ್ರವು 300 ಚದರ ಮೀಟರ್‌ಗಳಿಂದ 5,000 ಚದರ ಮೀಟರ್‌ಗಳ ನಡುವೆ ಇದೆ.

ಪನ್‌ವೆಲ್ ನಲ್ಲಿ 5,300 ಚದರ ಮೀಟರ್ ಇರುವ ಅತಿದೊಡ್ಡ ಪ್ಲಾಟ್ ಇದ್ದು, ಮೂಲ ಬೆಲೆ ಪ್ರತಿ ಚದರ ಮೀಟರ್‌ಗೆ ರೂ 75,999, ಪ್ಲಾಟ್‌ನ ಒಟ್ಟು ವೆಚ್ಚ ರೂ 40 ಕೋಟಿ ಇರಲಿದೆ. ಇದನ್ನು ವಸತಿ ಮತ್ತು ವಾಣಿಜ್ಯ ಕಾರ್ಯಕ್ಕಾಗಿ ಉದ್ದೇಶಿಸಲಾಗಿದೆ. 360 ಚದರ ಮೀಟರ್‌ ಅಳತೆಯ ಚಿಕ್ಕ ಪ್ಲಾಟ್‌ಗಳು ಪನ್‌ವೆಲ್‌ನಲ್ಲಿವೆ. ಪ್ರತಿ ಚದರ ಮೀಟರ್‌ಗೆ ಮೂಲ ಬೆಲೆ 41,283 ರೂ.ಗಳಾಗಿದ್ದು, ಒಟ್ಟು ವೆಚ್ಚ 1.48 ಕೋಟಿ ರೂ. ಈ ಪ್ಲಾಟ್‌ಗಳು ವಸತಿಗೆ ಮಾತ್ರ ಮೀಸಲಾಗಿದೆ.

ಐರೋಲಿಯಲ್ಲಿ, ಪ್ಲಾಟ್ 1,278 ಚದರ ಮೀಟರ್ ಇದ್ದು, ಮೂಲ ಬೆಲೆ 10 ಕೋಟಿ ರೂ ಇದೆ. ಕೋಪರ್ ಖೈರಾನೆಯಲ್ಲಿ ಪ್ಲಾಟ್ ಗಾತ್ರ 1,854 ಚದರ ಮೀಟರ್ ಆಗಿದ್ದು, ಇದರ ಮೂಲ ಬೆಲೆ 15.40 ಕೋಟಿ ರೂ. ಇನ್ನು ಕಾಮೋಥೆಯಲ್ಲಿ 3,024 ಚದರ ಮೀಟರ್‌ಗೆ 17.50 ಕೋಟಿ ರೂ., ಮತ್ತು ಕಲಾಂಬೋಲಿಯಲ್ಲಿ 1,534 ಚದರ ಮೀಟರ್‌ಗೆ 8.88 ಕೋಟಿ ರೂ. ಇದೆ.

ಹರಾಜಾಗುತ್ತಿರುವ ಒಟ್ಟು 14 ಪ್ಲಾಟ್‌ಗಳಲ್ಲಿ ಏಳು ಪ್ಲಾಟ್‌ಗಳು ವಸತಿ ಮತ್ತು ವಾಣಿಜ್ಯ ಎರಡಕ್ಕೂ ಮೀಸಲಾಗಿದೆ. ಉಳಿದವು ವಸತಿ ಬಳಕೆಗೆ ಮಾತ್ರ ಯೋಗ್ಯವಾಗಿವೆ.

ಇ-ಹರಾಜು ದಾಖಲೆಗಳ ಮಾರಾಟ ಮತ್ತು ಅರ್ಜಿ ಸಲ್ಲಿಕೆಯು ಆಗಸ್ಟ್ 15 ರಂದು ಪ್ರಾರಂಭವಾಗಿದ್ದು, ಸೆಪ್ಟೆಂಬರ್ 6ರವರೆಗೆ ಮುಂದುವರಿಯಲಿದೆ. ಸಿಡ್ಕೋ ಹಂಚಿಕೊಂಡ ವೇಳಾಪಟ್ಟಿಯ ಪ್ರಕಾರ ಹರಾಜಿನ ಫಲಿತಾಂಶಗಳನ್ನು ಸೆಪ್ಟೆಂಬರ್ 8 ರಂದು ಫಲಿತಾಂಶ ಪ್ರಕಟಿಸಲಾಗುವುದು. ಕಳೆದ ತಿಂಗಳು ಸಹ ಸಿಡ್ಕೋ ನವಿ ಮುಂಬೈನಲ್ಲಿ 16 ಪ್ಲಾಟ್‌ಗಳ ಇ-ಹರಾಜನ್ನು ಘೋಷಿಸಿತ್ತು, ಇದರ ಸುಮಾರು ಅಂದಾಜು ವೆಚ್ಚ 300 ಕೋಟಿ ರೂ.

Related News

spot_img

Revenue Alerts

spot_img

News

spot_img