ಬೆಂಗಳೂರು;ಕ್ರಿಸ್‌ಮಸ್ ಹಬ್ಬವು ಕ್ರೈಸ್ತ(Chirst) ಧರ್ಮೀಯರು ಆಚರಿಸುವ ಬಹುಶ್ರೇಷ್ಠವಾದ ಹಬ್ಬಗಳಲ್ಲಿ ಒಂದಾಗಿದೆ.ಕ್ರಿಸ್‌ಮಸ್(Christmas) ಹಬ್ಬವೆಂದರೆ ಅದು ಸಂಭ್ರಮ ಹಾಗೂ ಹರ್ಷದಿಂದ ಆಚರಿಸಲ್ಪಡುವಂತಹ ಹಬ್ಬವಾಗಿದೆ. ಕ್ರೈಸ್ತ ಧರ್ಮಿಯರ ಪಾಲಿಗೆ ಇದು ಬಹಳ ಸಂಭ್ರಮದ ದಿನ. ಕ್ರಿಸ್ಮಸ್ ಹಬ್ಬದ ವೇಳೆ ಕೆಲವೊಂದು ವಿಚಾರಗಳಿಗೆ ತುಂಬಾ ಮಹತ್ವ ನೀಡಲಾಗುತ್ತದೆ.ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಕ್ರಿಸ್‌ಮಸ್ ಹಬ್ಬದ ತಯಾರಿಯಲ್ಲಿದ್ದಾರೆ.ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಳ್ಳುವ, ಹಬ್ಬಕ್ಕೆ ರುಚಿ ರುಚಿಯಾದ ತಿಂಡಿಗಳನ್ನು ಮಾಡುವ, ಗೆಸ್ಟ್‌ಗಳನ್ನು ಆಹ್ವಾನಿಸುವ, ಕ್ರಿಸ್ ಮಸ್ ಟ್ರೀ ಅಲಂಕರಿಸುವ ಬ್ಯುಸಿಯಲ್ಲಿದ್ದಾರೆ. ಮನೆಯ ಸುತ್ತ ಮುತ್ತ ದೀಪದ ಅಲಂಕಾರ, ರುಚಿಕರವಾದ ಆಹಾರ, ಸಂಗೀತ ಮತ್ತು ಅತ್ಯಾಕರ್ಷಕ ಉಡುಗೊರೆಗಳನ್ನು ಎದುರು ನೋಡುತ್ತಿದ್ದಾರೆ.ಪ್ರತಿ ವರ್ಷ ಡಿಸೆಂಬರ್ 25(December) ರಂದು ಈ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸಾಮಾನ್ಯವಾಗಿ ಮನೆಯನ್ನು ಅಲಂಕಾರ ಮಾಡುತ್ತಾರೆ, ಮುಖ್ಯವಾಗಿ ಕ್ರಿಸ್‌ಮಸ್ ಟ್ರೀ ಅಲಂಕಾರ(Decoration) ಎಲ್ಲರ ಗಮನ ಸೆಳೆಯುತ್ತದೆ. ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಮನೆಗಳನ್ನು ಸುಂದರವಾಗಿ ಅಲಂಕಾರ (Decoration) ಮಾಡಲಾಗುತ್ತದೆ. ಆದರೆ ವಿಶೇಷವಾಗಿ ಈ ಕ್ರಿಸ್ಮಸ್ ಟ್ರೀಯನ್ನು ಅಲಂಕಾರ ಮಾಡುತ್ತಾರೆ. ಪ್ರತಿವರ್ಷವೂ ಹೊಸತನ ತರುವ ಈ ಟ್ರೀ ಅಲಂಕಾರ ಮಾಡಲು ಇಷ್ಟಪಡುತ್ತೇವೆ.
ಕ್ರಿಸ್‌ಮಸ್ ಟ್ರೀ (Christmas Tree) ಡೆಕೊರೇಟ್ ಮಾಡಲು ಕೆಲ ಐಡಿಯಾಗಳು ಹೀಗಿವೆ.
ಕ್ರಿಸ್ಮಸ್ ಹಬ್ಬದ ಆಚರಣೆಯ ವೇಳೆ ಬಹುತೇಕ ಎಲ್ಲರ ಮನೆಯಲ್ಲಿ ಕ್ರಿಸ್ಮಸ್ ಟ್ರೀ ಇರುತ್ತದೆ. ಇದಕ್ಕೆ ತನ್ನದೇ ಆದ ಮಹತ್ವ ಹಾಗೂ ವಿಶೇಷತೆ ಇದೆ. ಯೇಸು(Jesus) ಕ್ರಿಸ್ತ ಹುಟ್ಟುವ ಸಮಯದಲ್ಲಿ ಒಂದು ವಿಶಿಷ್ಟ ಹಾಗೂ ವಿಭಿನ್ನ ರೀತಿಯ ಮರವನ್ನು ಅಲ್ಲಿ ಸಿಂಗಾರ ಮಾಡಿ ಇಡಲಾಗಿತ್ತಂತೆ.ಹಾಗಾಗಿ ಆ ಮರವನ್ನು ಕ್ರಿಸ್ಮಸ್ ಟ್ರೀ ಎಂದು ಕರೆಯಲಾಗುತ್ತದೆ ಹಾಗೂ ಈ ವಿಶೇಷ ದಿನದಂದು ಮರವನ್ನು ಅಲಂಕರಿಸಲಾಗುತ್ತದೆ. 18 ನೇ ಶತಮಾನದಲ್ಲಿ ಮೇಣದಬತ್ತಿಗಳು ಮತ್ತು ನಂತರ ಕ್ರಿಸ್ಮಸ್ ದೀಪಗಳಿಂದ ಬದಲಾಯಿಸಲಾಯಿತು.ಕ್ರಿಸ್ಮಸ್ ಮರವು ತ್ರಿಕೋನಾಕಾರದಲ್ಲಿರುವುದರಿಂದ ಮನೆಯಲ್ಲಿ ಸಂಪತ್ತು ಹಾಗೂ ನೆಮ್ಮದಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ
*ಕ್ರಿಸ್ಮಸ್ ಹಬ್ಬದ ವೇಳೆ ಈ ಮರವನ್ನು ಚಾಕೊಲೇಟ್, ಉಡುಗೊರೆ(Gift) ಬಾಕ್ಸ್ಗಳು, ಆಕರ್ಷಕ ಬಣ್ಣದ ದೀಪಗಳ ಮೂಲಕ ಅಲಂಕರಿಸಬಹುದು.
*ಸೇಬು, ಬೀಜಗಳು, ಚಾಕಲೇಟ್ ಮತ್ತು ಇತರ ಕೆಲವೊಂದು ಆಹಾರ ಸಾಮಗ್ರಿಗಳನ್ನು ಬಳಕೆ ಮಾಡಿ. ಕ್ರಿಸ್ಮಸ್ ಟ್ರೀ ನೋಡುಗರಿಗೆ ಆಹಾರ ಖಜಾನೆಯಂತೆ ಇರಲಿ.
* ಮೂರಕ್ಕಿಂತ ಹೆಚ್ಚು ಸ್ಪ್ರಿಂಗ್‌ಗಳಿಗೆ ಬಲ್ಬ್ ಸಂಪರ್ಕ ಕಲ್ಪಿಸಬಾರದು. ಬಲ್ಬ್‌ಗಳಲ್ಲಿರುವ ಸ್ಕ್ರೂಗಳು ಗರಿಷ್ಠ 50 ಬಲ್ಬ್‌ಗಳಿಗೆ ಸಂಪರ್ಕ ಕಲ್ಪಿಸುತ್ತವೆ.
*ಕ್ರಿಸ್ಮಸ್ ಟ್ರೀಯನ್ನು ಕ್ಯಾಂಡಿಯಿಂದ ಸಹ ಮಾಡಬಹುದು
*ಗೋಲ್ಡ್ ಮತ್ತು ವೈಟ್ ರೀತಿಯೇ ರೆಡ್ ಮತ್ತು ವೇಟ್ ಬಣ್ಣದ ಮಿಶ್ರಣ ಕೂಡ ಬಹಳ ಚೆಂದ ಕಾಣುತ್ತದೆ. ಅದರಲ್ಲೂ ಕ್ರಿಸ್ಮಸ್ ಸಮಯದಲ್ಲಿ ಈ ಬಣ್ಣ ಹೆಚ್ಚು ಉತ್ತಮ
* ಅಲಂಕಾರಕ್ಕೆ ತಾಜಾವಾಗಿರುವ ಹಸಿರು, ಚಿಕ್ಕ ಗಿಡಗಳಿದ್ದಲ್ಲಿ ಉತ್ತಮ. ಏಕೆಂದರೆ ಒಣಗಿದ ಎಲೆ, ಗಿಡಗಳು ಅತಿ ಸುಲಭವಾಗಿ ವಿದ್ಯುತ್‌ನ ಬೆಂಕಿಗೆ ತುತ್ತಾಗುತ್ತವೆ.
*ಪೈನ್ ಕೋನ್ ಗಳಿಗೆ ಹಸಿರು ಬಣ್ಣವನ್ನು ಹಚ್ಚಿಕೊಂಡು, ಅದನ್ನು ಕ್ರಿಸ್ಮಸ್ ಟ್ರೀಗೆ ನೇತಾಡಿಸಿದರೆ ಆಗ ಅದು ತುಂಬಾ ಸುಂದರವಾಗಿ ಕಾಣಿಸುವುದು
*ಸಮುದ್ರ ಬದಿಯಲ್ಲಿ ಸಿಗುವಂತಹ ಚಿಪ್ಪುಗಳು ಹಾಗೂ ಶಂಖಗಳನ್ನು ಬಳಸಿಕೊಳ್ಳಿ. ಇದು ಯಾವುದೇ ಗಾತ್ರ, ಬಣ್ಣ ಮತ್ತು ಆಕಾರದ್ದು ಆಗಿರಬಹುದು.
*ಸಣ್ಣ ಸಣ್ಣ ಗಿಫ್ಟ್ಗಳನ್ನು, ಬಣ್ಣ ಬಣ್ಣದ ಬಾಕ್ಸ್ನಲ್ಲಿ ಹಾಕಿ, ಟ್ರೀ ಸುತ್ತ ಡೆಕೊರೇಟ್. ಅಲ್ಲದೇ ಮಕ್ಕಳಿಗೆ ಅವರ ಹೆಸರಿನ ಗಿಫ್ಟ್ ಹುಡುಕಲು ಹೇಳಿ
*ಪೈನ್ ಕೋನ್ ಗಳಿಗೆ ಹಸಿರು ಬಣ್ಣವನ್ನು ಹಚ್ಚಿಕೊಂಡು, ಅದನ್ನು ಕ್ರಿಸ್ಮಸ್ ಟ್ರೀಗೆ ನೇತಾಡಿಸಿದರೆ ಆಗ ಅದು ತುಂಬಾ ಸುಂದರವಾಗಿ ಕಾಣಿಸುವುದು