21.1 C
Bengaluru
Monday, July 8, 2024

ಚಿಂಟೆಲ್ಸ್ ಹೌಸಿಂಗ್ ಸೊಸೈಟಿ: ಎಂಟು ಕಟ್ಟಡ ತೆರವಿಗೆ ಶಿಫಾರಸು

ಕಳೆದ ಫೆಬ್ರುವರಿಯಲ್ಲಿ ಗುರುಗ್ರಾಮದ ಚಿಂಟೆಲ್ಸ್ ಹೌಸಿಂಗ್ ಸೊಸೈಟಿಯಲ್ಲಿ ವಸತಿ ಸಮುಚ್ಚಯ ಕುಸಿದು ಇಬ್ಬರು ಮೃತಪಟ್ಟ ಪ್ರಕರಣದ ತನಿಖೆಗೆ ನೇಮಕಗೊಂಡಿದ್ದ ಸಮಿತಿಯು, ಆಗ ನಿವಾಸಿಗಳ ಸಂಘ ಮತ್ತು ನಿವಾಸಿಗಳು ಮುಂದಿಟ್ಟ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಡೆವಲಪರ್ಗಳು ನಿರ್ಲಕ್ಷ್ಯ ವಹಿಸಿದ್ದರು ಎಂದು ಬಹಿರಂಗಪಡಿಸಿದೆ.

ಕುಸಿತ ಉಂಟಾದ ʻಡಿʼ ಕಟ್ಟಡವನ್ನು (ಟಬರ್ ಡಿ) ನೆಲಸಮ ಮಾಡಲು ಸಮಿತಿ ಶಿಫಾರಸು ಮಾಡಿರುವುದಲ್ಲದೇ, ನಿವಾಸಿಗಳ ಸುರಕ್ಷತೆ ದೃಷ್ಟಿಯಿಂದ ಶೀಘ್ರವೇ ಉಳಿದ ಎಂಟು ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದೂ ಹೇಳಿದೆ.

ʻಸಮಿತಿಯು ಸಲ್ಲಿಸಿದ ವರದಿಯ ಪ್ರಕಾರ, ಟವರ್-ಡಿ ರಚನೆಯು ವಾಸಕ್ಕೆ ಸುರಕ್ಷಿತವಲ್ಲ ಮತ್ತು ಕಟ್ಟಡಕ್ಕೆ ಬಳಸಿದ ಕಾಂಕ್ರೀಟ್ನಲ್ಲಿ ಹೆಚ್ಚಿನ ಕ್ಲೋರೈಡ್ ಅಂಶ ಇದೆ ಎಂಬುದು ಸ್ಪಷ್ಟವಾಗಿದೆ; ತಾಂತ್ರಿಕ ಮತ್ತು ಆರ್ಥಿಕವಾಗಿ ಯಾವುದೇ ರೀತಿಯ ದುರಸ್ತಿಯು ಕಾರ್ಯಸಾಧ್ಯವಲ್ಲʼ ಎಂದು ಗುರುಗ್ರಾಮ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ತಿಳಿಸಿದ್ದಾರೆ. ಇದರೊಂದಿಗೆ ಅವರು ಕಟ್ಟಡವನ್ನು ಕೆಡವಲು ಆದೇಶಿಸಿದ್ದಾರೆ.

ʻಟವರ್-ಎಫ್ ನಲ್ಲಿನ ಒಂದು ಫ್ಲಾಟ್ನ ಬಾಲ್ಕನಿ ಕುಸಿಯುತ್ತಿದೆ ಮತ್ತು ಟವರ್-ಇ ಮತ್ತು ಎಫ್ನಲ್ಲಿರುವ ಇತರ ಫ್ಲಾಟ್ಗಳ ಮಹಡಿಗಳಲ್ಲಿ ಇತರ ಕೆಲವು ತೊಂದರೆಗಳಿವೆ ಎಂದು ಸಮಿತಿಯು ನನ್ನ ಗಮನಕ್ಕೆ ತಂದಿದೆ. ತಕ್ಷಣವೇ ಇವೆರಡೂ ಕಟ್ಟಡಗಳನ್ನು ತೆರವುಗೊಳಿಸುವಂತೆ ಶಿಫಾರಸು ಮಾಡಿದೆʼ ಎಂದು ಅವರು ತಿಳಿಸಿದ್ದಾರೆ.

ʻಚಿಂಟೆಲ್ಸ್ ಇಂಡಿಯಾ ಪ್ರೈ.ಲಿ. ಮತ್ತು ಮನೀಷ್ ಸ್ವಿಚ್ಗಿಯರ್ ಅಂಡ್ ಕನ್ಸ್ಟ್ರಕ್ಷನ್ ಸಂಸ್ಥೆಗಳು ದುರಸ್ತಿ ಕಾರ್ಯದ ಸೂಕ್ತ ಮೇಲ್ವಿಚಾರಣೆ ನಡೆಸಿರಲಿಲ್ಲ, ಸುರಕ್ಷತಾ ಕ್ರಮ ಕೈಗೊಂಡಿಲ್ಲ ಮತ್ತು ಟವರ್ ಡಿ ಕುಸಿತದ ಸಂದರ್ಭದಲ್ಲಿ ಜಿ-102 ಫ್ಲಾಟ್ನಲ್ಲಿ ಮಾರ್ಪಡಿಸುವ ಕಾರ್ಯ ನಡೆಯುತ್ತಿತ್ತು. ಕುಸಿತದ ಮರಕ್ಷಣವೇ ಅದನ್ನು ನಿಲ್ಲಿಸಲಾಗಿದೆʼ ಎಂದು ವರದಿಯಲ್ಲಿ ತಿಳಿಸಿದೆ.

ʻಅತಿಯಾಗಿ ತುಕ್ಕು ಹಿಡಿದ ಉಕ್ಕಿನ ತುಕ್ಕು ಮರೆಮಾಚಲು ಹಳದಿ ಬಣ್ಣ ಬಳಿಯಲಾಗಿದೆ ಎಂದು ಸಮಿತಿಯು ಗಮನಿಸಿದೆ. ಈ ಲೋಪವನ್ನು ದೆಹಲಿಯ ಐಐಟಿ ವರದಿಯು ಮತ್ತಷ್ಟು ದೃಢಪಡಿಸುತ್ತದೆʼ ಎಂದು ಸಮಿತಿಯು ತನಿಖಾ ವರದಿಯಲ್ಲಿ ಹೇಳಿದೆ.

ಆರನೇ ಮಹಡಿಯ ಕೆಳಗಿರುವ ಮಹಡಿಗಳ ಚಪ್ಪಡಿ ಕುಸಿದಿರುವ ರೀತಿಯು ಡಿ ಟವರ್ನ ಒಟ್ಟಾರೆ ನಿರ್ಮಾಣದಲ್ಲಿ ರಚನಾತ್ಮಕ ನ್ಯೂನತೆಗಳಿವೆ ಎಂದು ಸೂಚಿಸುತ್ತದೆ.

ʻಕಾಂಕ್ರೀಟ್ನಲ್ಲಿ ಹೆಚ್ಚಿನ ಪ್ರಮಾಣದ ಕ್ಲೋರೈಡ್ ಇದ್ದ ಕಾರಣ ಕಬ್ಬಿಣಗಳಿಗೆ ಬೇಗ ತುಕ್ಕು ಹಿಡಿದಿದೆ. ಇದೇ ಲಕ್ಷಣಗಳು ಈ ನಿರ್ಮಾಣ ಯೋಜನೆಯ ಎಲ್ಲ ಕಟ್ಟಡಗಳಲ್ಲೂ ಕಾಣಸಿಗುತ್ತಿವೆʼ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

ʻಚಿಂಟೆಲ್ಸ್ ಸಂಸ್ಥೆಯು ಡಿ ಟವರ್ನ ನಿವಾಸಿಗಳ ಎಲ್ಲ ರೀತಿಯ ನಷ್ಟಗಳನ್ನು ಭರಿಸಬೇಕಾಗುತ್ತದೆ. ಅದಕ್ಕಾಗಿ ಫ್ಲಾಟ್ಗಳ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಲು ಎರಡು ಸ್ವತಂತ್ರ ಮೌಲ್ಯಮಾಪಕ ಸಂಸ್ಥೆಗಳನ್ನು ಸಮಿತಿ ನಿಯೋಜಿಸಿತ್ತು. ನಿವಾಸಿಗಳೊಂದಿಗೆ ಪರಸ್ಪರ ಒಪ್ಪಿತವಾದ ನಷ್ಟದ ಮೌಲ್ಯವನ್ನು ಡೆವಲಪರ್ಗಳು ಕಾಲಮಿತಿಯೊಳಗೆ ಭರಿಸಬೇಕು. ಮೌಲ್ಯಮಾಪನ ಸಂಸ್ಥೆಗಳು ನಿರ್ಧರಿಸಿದ್ದಕ್ಕಿಂತ ಕಡಿಮೆ ಮೊತ್ತವನ್ನು ಡೆವಲಪರ್ಗಳು ನಿವಾಸಿಗಳಿಗೆ ನೀಡುವಂತಿಲ್ಲʼ ಎಂದೂ ತಿಳಿಸಿದೆ.

ʻಪ್ರಗತಿಯಲ್ಲಿರುವ ತನಿಖೆಯು ಪೂರ್ಣಗೊಳ್ಳುವವರೆಗೆ ಟವರ್ ಎ, ಬಿ, ಸಿ, ಇ, ಎಫ್, ಜಿ, ಎಚ್ ಮತ್ತು ಜೆ ಗಳಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸಬೇಕು ಎಂದೂ ಐಐಟಿ ದೆಹಲಿಯ ಅಂತಿಮ ವರದಿಯಲ್ಲಿ ತಿಳಿಸಲಾಗಿದೆ. ಇವರೆಲ್ಲರಿಗೆ ಕೂಡಲೇ ಪುನರ್ ವಸತಿ ಕಲ್ಪಿಸುವಂತೆ ಡೆವಲಪರ್ಗಳಿಗೆ ನಿರ್ದೇಶನ ನೀಡಬೇಕುʼ ಎಂದು ವರದಿಯಲ್ಲಿ ತಿಳಿಸಿದೆ.

ಇ, ಎಫ್ ಮತ್ತು ಇತರ ಟವರ್ಗಳ ಮಾದರಿ ಸಂಗ್ರಹ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಮಿತಿಯು ಶ್ರೀರಾಮ್ ಸಂಸ್ಥೆಗೆ ಕೋರಿದೆ.

Related News

spot_img

Revenue Alerts

spot_img

News

spot_img