20 C
Bengaluru
Sunday, December 22, 2024

ಎಲ್‌ಪಿಜಿ ಸಬ್ಸಿಡಿ ಲಭ್ಯವಾಗುತ್ತಿದೆಯೇ, ಹೀಗೆ ಚೆಕ್ ಮಾಡಿ

#Check #whether #LPG #subsidy #available
ಪ್ರತಿ ಮನೆಯಲ್ಲೂLPG ಗ್ಯಾಸ್ ಬಳಸುತ್ತೇವೆ. ಗ್ಯಾಸ್ ನ ಅವಶ್ಯಕೆತೆ ತುಂಬ ಇದ್ದು ಜನ ಸಾಮಾನ್ಯರಿಗೆ ಖರೀದಿ ಮಾಡುವುದು ಕಷ್ಟಕರವಾಗಿದೆ ಏಕೆಂದರೆ LPG ಗ್ಯಾಸ್ ಬೆಲೆ ಈಗಾಗಲೇ ಗಗನಕ್ಕೆ ಏರಿದೆ. ಗೃಹ ಬಳಕೆಯ LPG ಗ್ಯಾಸ್ ಗೆ ಕೇಂದ್ರ ಸರಕಾರ ಗ್ಯಾಸ್ ಸಬ್ಸಿಡಿ ಹಣ 200 ರೂಪಾಯಿ ನೀಡುವುದಾಗಿ ತಿಳಿಸಿತು. ಸರ್ಕಾರವು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಬದಲಾಯಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂಡೇನ್, ಎಚ್‌ಪಿ ಮತ್ತು ಭಾರತ್ ಗ್ಯಾಸ್‌ನ ಗ್ರಾಹಕರು ತಮ್ಮ ಖಾತೆಗೆ ಸಬ್ಸಿಡಿ ಬರುತ್ತಿದೆಯೇ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು. ಬ್ಯಾಂಕ್ ಖಾತೆಗೆ ಸಬ್ಸಿಡಿ ಜಮೆಯಾಗಿದೆಯೇ ಎಂದು ತಿಳಿಯಲು ಬ್ಯಾಂಕ್‌ ಗೇ ಹೋಗುವ ಅಗತ್ಯವಿಲ್ಲ. ಇದನ್ನು ಮನೆಯಲ್ಲಿ ಕುಳಿತೇ ಪತ್ತೆ ಹಚ್ಚಬಹುದು. ಗೃಹ ಬಳಕೆಯ LPG ಸಿಲಿಂಡರ್ ಗೆ 200 ರೂಪಾಯಿ ಹಾಗೂ ಉಜ್ವಲ ಯೋಜನೆಯಡಿ ಸಿಲಿಂಡರ್ ಸೌಲಭ್ಯ ಪಡೆದಿರುವವರಿಗೆ ಈಗಾಗಲೇ ಸಿಗುತ್ತಿರುವ 200 ರೂಪಾಯಿ ಸಹಾಯಧನ ಜೊತೆಗೆ ಹೆಚ್ಚುವರಿ 200 ರೂಪಾಯಿ ಅಂದರೆ ಒಟ್ಟಾರೆಯಾಗಿ 400 ರೂಪಾಯಿ ಸಬ್ಸಿಡಿ ಸಿಗಲಿದೆ.

LPG ಗ್ಯಾಸ್ ಸಬ್ಸಿಡಿ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿ :

*LPG ಸಬ್ಸಿಡಿ ಹಣ ಬಂದಿರುವುದನ್ನು ಮೊಬೈಲ್ ಮೂಲಕವೇ ನೀವು ಹೀಗೆ ಚೆಕ್ ಮಾಡಬಹುದು, ಮೊಬೈಲ್ ನಲ್ಲಿhttps://www.mylpg.in ವೆಬ್ ಸೈಟ್ ಅನ್ನು ತೆರೆಯಬೇಕು .

* ಗ್ಯಾಸ್ ಕಂಪನಿಗಳ ಗ್ಯಾಸ್ ಸಿಲಿಂಡರ್ ಗಳ ಫೋಟೋ ಸೈಟ್ನಲ್ಲಿ ಕಾಣಿಸುತ್ತದೆ. ಇಲ್ಲಿ ನಿಮ್ಮ ಸರ್ವಿಸ್ ಪ್ರೊವೈಡರ್ ಮೇಲೆ ಟ್ಯಾಪ್ ಮಾಡಿ.

*ವಿಂಡೋ ತೆರೆದಾಗ, ”Give your feedback online’ ಮೇಲೆ ಕ್ಲಿಕ್ ಮಾಡಿ.

*ನಿಮ್ಮಲ್ಲಿ ಆಧಾರ್ ಸಂಖ್ಯೆ ಇಲ್ಲವಾದರೆ DBTL ಆಯ್ಕೆ ಮೇಲೆ ಕ್ಲಿಕ್ ಮಾಡಿ

* ಎಲ್‌ಪಿಜಿ ಪೂರೈಕೆದಾರರ ಅಧಿಕೃತ ವೆಬ್‌ಸೈಟ್ ತೆರೆಯಲಿದೆ

* ಅಲ್ಲಿ complaint box ಇರಲಿದೆ, ಇಲ್ಲಿ ನೀವು ಸಬ್ಸಿಡಿ ಸ್ಟೇಟಸ್ ಚೆಕ್ ಮಾಡಬಹುದು

* ಹೊಸ ಬಳಕೆದಾರ ಎಂದು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ LPG ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ ಮುಂದುವರೆಯಿರಿ ಹಾಗು ಮುಂದೆ ಮೊಬೈಲ್ ಗೆ OTP ಬರುತ್ತದೆ

*Click here to generate OTP ಎನ್ನುವ ಆಯ್ಕೆ ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.ಮತ್ತೊಂದು OTP ಬರುತ್ತದೆ ಅದನ್ನು ಕೂಡ ಎಂಟ್ರಿ ಮಾಡಿಬೇಕು.

Related News

spot_img

Revenue Alerts

spot_img

News

spot_img