#Check # document #before #purchasing property
ಬೆಂಗಳೂರು;ಇಂದಿನ ದಿನಗಳಲ್ಲಿ ಆಸ್ತಿ ಖರೀದಿಸುವುದು ಸುಲಭದ ಮಾತಲ್ಲ,ಜಮೀನನ್ನು ಖರೀದಿ ಮಾಡುವುದು ಉತ್ತಮ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಆಸ್ತಿ ಖರೀದಿ ವೇಳೆ ಆದಷ್ಟು ಅರಿವು ವಹಿಸುವುದು ಅತ್ಯಗತ್ಯ. ನಿವೇಶನ ಖರೀದಿ(Purchase of land) ಮಾಡುವ ಮುನ್ನ ದಾಖಲೆಗಳನ್ನು(Documents) ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು.ಜಮೀನನ್ನು ಖರೀದಿಮಾಡುವಾಗ ಈ ವಿಷಯವನ್ನು ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯ ಏಕೆಂದರೆ ಅನೇಕ ಬಾರಿ ಜನರು ರೈಲ್ವೆ ಮತ್ತು ಅರಣ್ಯ ಇಲಾಖೆಯ ಭೂಮಿಯನ್ನು ತಮ್ಮದೆಂದು ಮಾರಾಟ ಮಾಡುತ್ತಾರೆ. ಜಮೀನು ಖರೀದಿಸುವ ಮೊದಲು, ನೀವು ಖರೀದಿಸುವ ಭೂಮಿ ಸರ್ಕಾರಿ ಸ್ವಾಮ್ಯ(Government owned) ಅಲ್ಲ ಎಂಬುದನ್ನು ನೋಡಿ. ಭಾರತೀಯ ನೋಂದಣಿ ಕಾಯಿದೆ 1908 ರ ಪ್ರಕಾರ ಪ್ರತಿಯೊಬ್ಬ ಆಸ್ತಿ ಮಾಲೀಕರು ತಮ್ಮ ಆಸ್ತಿಯನ್ನು ತಮ್ಮ ಜಿಲ್ಲೆಯ ಭೂ ಕಂದಾಯ ಕಚೇರಿಯಲ್ಲಿ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಿಕೊಳ್ಳುವುದು ಮುಖ್ಯವಾಗಿದೆ.ನೀವು ಯಾರಿಂದ ಜಮೀನು ಖರೀದಿಸುತ್ತೀರೋ ಅವರು ಆ ಜಮೀನನ್ನು ಬೇರೆಯವರಿಂದ ಪಡೆದಿದ್ದಾರೆ, ಅವರಿಗೆ ಮಾಲೀಕತ್ವ ಹೇಗೆ ಬಂತು, ಈ ಎಲ್ಲಾ ವಿಷಯಗಳನ್ನು ಮೊದಲೇ ತಿಳಿದುಕೊಳ್ಳಿ.
ಕೃಷಿ ಭೂಮಿ ಖರೀದಿಗೆ ಅಗತ್ಯವಾದ ದಾಖಲೆಗಳು
*ಮಾರಾಟ ಪತ್ರ
*ಆರ್‌ಟಿಸಿ(RTC)
*ಎನ್ಕಂಬರೆನ್ಸ್ ಪ್ರಮಾಣಪತ್ರ(Encumbrance Certificate)
*ಟೈಟಲ್ ಡೀಡ್ಸ್
*ತೆರಿಗೆ ಪಾವತಿ ರಸೀದಿಗಳು
*ವಂಶ ವೃಕ್ಷ
*ಪವರ್ ಆಫ್ ಅಟಾರ್ನಿ
*ಆಸ್ತಿ ತೆರಿಗೆ ರಶೀದಿ
*ಆಕಾರ ಬಂಧು
*ಸರ್ವೆ ನಕ್ಷೆ
*ಮೂಲ ಕ್ರಯ ಹಾಗೂ ಇನ್ನಿತರ ನೋಂದಾಯಿಸಿರುವ ದಾಖಲೆ ಪ್ರಮಾಣ ಪತ್ರಗಳು.
* ಸಾಲ ತೀರುವಳಿ ಪತ್ರಗಳು
*ಋಣಭಾರ ಪ್ರಮಾಣಪತ್ರ
*ಎನ್‌ಆರ್‌ಐಗಳಿಂದ ಆಸ್ತಿ ಖರೀದಿ
*ಸಂಬಂಧಪಟ್ಟ ವ್ಯಕ್ತಿಗಳ ಆಧಾರ್ , ಅಥವಾ ಚುನಾವಣಾ ಗುರುತಿನ ಚೀಟಿ, ಅಥವಾ ಪಾನ್ ಕಾರ್ಡ್ ಇನ್ನಿತರ ಅಧಿಕೃತ ದಾಖಲೆಗಳು