22.9 C
Bengaluru
Saturday, July 6, 2024

ರಾಜ್ಯದ ಬರ ಅಧ್ಯಯನಕ್ಕೆ ಆಗಮಿಸಿದ ಕೇಂದ್ರ ತಂಡ‌

ಬೆಂಗಳೂರು;ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬರ ಅಧ್ಯಯನ ತಂಡವನ್ನು ಕರ್ನಾಟಕಕ್ಕೆ ಕಳುಹಿಸಿದ್ದು, ಗುರುವಾರ ರಾಜ್ಯಕ್ಕೆ ಅಧಿಕಾರಿಗಳು ಆಗಮಿಸಿದ್ದಾರೆ. ಒಟ್ಟು 10 ಜನರ ಅಧಿಕಾರಿಗಳು ತಂಡದಲ್ಲಿದ್ದು, 13 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿದೆ.ಒಟ್ಟು ಆರು ದಿನಗಳ ಕಾಲ ಅಧ್ಯಯನ ನಡೆಸಲಿದೆ. ಮೂರು ತಂಡಗಳಲ್ಲಿ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿರುವ ಅಧ್ಯಯನ ತಂಡವು, ಆಯಾ ಜಿಲ್ಲೆಯ ಬರ ಪರಿಸ್ಥಿತಿಗಳ ಬಗ್ಗೆ ಈ ತಂಡ ಅಧ್ಯಯನ ನಡೆಸಲಿದೆ.ಆ ನಂತರ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಬರಪರಿಸ್ಥಿತಿ ಕುರಿತು ಪೂರ್ವಭಾವಿ ಸಮಾಲೋಚನೆ ನಡೆಸಿತು. ಮೊದಲ ತಂಡ ಶುಕ್ರವಾರ ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಹಾಗೂ , 7 ರಂದು ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಬರ ಪರಿಶೀಲನೆ ನಡೆಸಲಿದೆ.ಎರಡನೇ ತಂಡ ದಿ. 6 ರಂದು ಗದಗ, ಕೊಪ್ಪಳ ಮತ್ತು 7 ರಂದು ವಿಜಯನಗರ, ಬಳ್ಳಾರಿ ಜಿಲ್ಲೆಗಳ ಬರ ಪರಿಸ್ಥಿತಿ ಅಧ್ಯಯನ ಮಾಡಿ, 8 ರಂದು ಬೆಂಗಳೂರಿಗೆ ಆಗಮಿಸಲಿದೆ. ಮೂರನೇ ತಂಡ ದಿ. 6 ರಂದು ಚಿಕ್ಕಬಳ್ಳಾಪುರ, ತುಮಕೂರು ಹಾಗೂ 7 ರಂದು ಚಿತ್ರದುರ್ಗ ಮತ್ತು ದಾವಣಗೆರೆ, 8 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ,ಬರಪರಿಸ್ಥಿತಿ ಅಧ್ಯಯನ ಮಾಡಲಿದೆ. 8 ರಂದು ಬೆಂಗಳೂರಿಗೆ ಆಗಮಿಸಿ, 9 ರಂದು ಬೆಂಗಳೂರಿನಲ್ಲಿ ಮತ್ತೊಮ್ಮೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದೆ,ರಾಜ್ಯಕ್ಕೆ ಬರ ಪರಿಹಾರಕ್ಕಾಗಿ 4,860 ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಕೃಷ್ಣಬೈರೇಗೌಡ ಮನವಿ ಮಾಡಿದ್ದಾರೆ

Related News

spot_img

Revenue Alerts

spot_img

News

spot_img