22.9 C
Bengaluru
Friday, July 5, 2024

ಕೇಂದ್ರ ಬಜೆಟ್: ಅಧಿಕಾರದ ಗುರಿ ತಲುಪಲು ಕರ್ನಾಟಕ ರಾಜ್ಯಕ್ಕೆ ಬಂಪರ್‌ ಗಿಫ್ಟ್‌ ಸಿಗಲಿದ್ಯಾ..?

ಬೆಂಗಳೂರು, ಫೆ. 01 : 2023-2024ರ ಕೇಂದ್ರ ಬಜೆಟ್‌ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಧಾಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಈ ಬಾರಿಯ ಬಜೆಟ್‌ ವಿಶೇಷವಾಗಿರಲಿದೆ. ಕರ್ನಾಟಕ ಸೇರಿದಂತೆ ಒಟ್ಟು 8 ರಾಜ್ಯಗಳಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಅನ್ನು ಸಂಸತ್‌ ನಲ್ಲಿ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ ಮೇಲೆ ಭಾರೀ ನಿರೀಕ್ಷೆಗಳಿವೆ. ಆತ್ಮ ನಿರ್ಬರಕ್ಕೆ ಒತ್ತು, ಆಮದು ಆಗುತ್ತಿರುವ ವಸ್ತುಗಳನ್ನು ನಮ್ಮಲ್ಲೇ ತಯಾರಿಸುವ ಯೋಜನೆ, ಆರ್ಥಿಕತೆ ಸಧೃಢತೆಗೆ ಮಂತ್ರ, ಕೃಷಿ ಕ್ಷೇತ್ರಕ್ಕೆ ಹೊಸ ಯಂತ್ರದ ಪರಿಚಯ, ರೈತರಿಗೆ ಬಂಪರ್‌ ಕೊಡುಗೆಯನ್ನು ನಿರೀಕ್ಷಿಸಲಾಗಿದೆ.

ಇನ್ನು ವಿಧಾನಸಭಾ ಚುನಾವಣೆ ನಡೆಯುವ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಜೆಟ್‌ ನಲ್ಲಿ ಬಂಪರ್‌ ಆಫರ್‌ ಗಳು ದೊರೆಯುವ ಸಾಧ್ಯತೆ ಇದೆ. ಅದರಲ್ಲೂ ಕರ್ನಾಟಕ ರಾಜ್ಯದ ಮೇಲೆ ಹೆಚ್ಚು ಗಮನಹರಿಸಿರುವುದು ಯಾವ ಗಿಫ್ಟ್‌ ಸಿಗಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಹಲವು ವರ್ಷಗಳಿಂದ ಕೇಂದ್ರದ ಎದುರು ಬೇಡಿಕೆ ಇಟ್ಟಿರುವ ಏಮ್ಸ್‌ ಅನ್ನು ರಾಜ್ಯಕ್ಕೂ ಘೋಷಿಸುವ ನಿರೀಕ್ಷೆ ಇದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾನ್ಯತೆ ನೀಡುವ ನಿರೀಕ್ಷೆ ಇದೆ. ಇನ್ನು ರೈಲ್ವೇ ಕಾಮಗಾರಿಗಳಿಗೆ ಅನುದಾನವನ್ನು ಘೋಷಿಸಬಹುದು ಎಂದು ಯೋಜಿಸಲಾಗಿದೆ.

ರಾಜ್ಯದ ಕೆಲ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸರಿಯಾದ ಅನುದಾನ ಬಂದಿಲ್ಲ. ಜೊತೆಗೆ ರಾಜ್ಯಕ್ಕೆ ಬರಬೇಕಿರುವ ಜಿಎಸ್‌ ಟಿ ಪಾಲು ಕೂಡ ಬಂದಿಲ್ಲ. ಚುನಾವಣೆಯ ನೆಪದಲ್ಲಾದರೂ ಅನುದಾನಗಳು ಬರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಉಕ್ಕಿನ ಪೂರೈಕೆಗೆ ಅವಕಾಶ ಸಿಗಬಹುದು. ಹೆಚ್ಚಿನ ಅನುದಾನಗಳನ್ನು ಘೋಷಿಸಬಹುದು. ಮೆಟ್ರೋ ವಿಸ್ತರಣೆಗೆ ಹಣಕಾಸು ನೆರವು, ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್‌ ರೈಲ್ವೆಗೆ ಅನುದಾನ, ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ಸಿಗುವ ಸಾಧ್ಯತೆ ಇದೆ. ಭದ್ರಾ ಮೇಲ್ದಂಡೆ, ಮಹದಾಯಿ ಹಾಗೂ ಎತ್ತಿನ ಹೊಳೆ ಯೋಜೆನೆಗಳಿಗೆ ಕೇಂದ್ರ ಸರ್ಕಾರ ಶೇ.90 ರಷ್ಟು ಅನುದಾನ ಒದಗಿಸುವ ನಿರೀಕ್ಷೆ ಇದೆ.

 

ಈ ವರ್ಷದ ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಸಹಜವಾಗಿಯೇ ಕರ್ನಾಟಕ್ಕೆ ಈ ಬಾರಿಯ ಬಜೆಟ್‌ಲ್ಲಿ ವಿಶೇಷ ಒತ್ತು ನೀಡುವುದು ಖಚಿತವಾಗಿದೆ. ಕೇಂದ್ರದಿಂದ ಚುನಾವಣಾ ಪ್ಯಾಕೇಜ್ ಸಿಗುವ ನಿರೀಕ್ಷೆ ಇದ್ದು, ಡಬಲ್ ಇಂಜಿನ್ ಸಂದೇಶ ನೀಡಲು ಕೇಂದ್ರ ಯತ್ನಿಸಲಿದೆ. ವಿಶೇಷ ಪ್ಯಾಕೇಜ್ ಮೂಲಕ ಮತ ಸೆಳೆಯಲು ತಂತ್ರ ರೂಪಿಸುವ ಸಾಧ್ಯತೆ ಹೇರಳವಾಗಿದೆ. ಅಭಿವೃದ್ಧಿ ಮಂತ್ರದ ಮೂಲಕ ವಿಪಕ್ಷಗಳಿಗೆ ಕಡಿವಾಣ ಹಾಕಲು ಪ್ಲಾನ್‌ ಮಾಡಿಕೊಳ್ಳಲಾಗಿದೆ. ಎಲೆಕ್ಷನ್ ಹಿನ್ನೆಲೆ ರಾಜ್ಯಕ್ಕೆ ಭಾರೀ ಅನುದಾನ ಘೋಷಣೆ ಸಾಧ್ಯತೆ ಇದೆ. ಅಧಿಕಾರದ ಗುರಿ ತಲುಪಲು ಬಜೆಟ್ ಮೂಲಕ ಬುನಾದಿ ಹಾಕು ನಿರೀಕ್ಷೆ ಇದೆ.

Related News

spot_img

Revenue Alerts

spot_img

News

spot_img