ಹೊಸದಿಲ್ಲಿ ಮೇ 31: ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಗಳಿಗೆ ಸಂಬಂಧಿಸಿ ಕೇಂದ್ರ ಸರಕಾರ ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ(FEMA) ಕ್ಕೆ ತಿದ್ದುಪಡಿ ತಂದ ನಂತರ `20% ಟಿಸಿಎಸ್’ ಎಂಬ ಪದ ಬಹಳ ಪ್ರಚಲಿತಕ್ಕೆ ಬಂದಿದೆ. ಟ್ವಿಟರ್ ನಲ್ಲಂತೂ ಬಹಳ ಟ್ರೆಂಡ್ ಆಗಿಬಿಟ್ಟಿದೆ.
ಇದೀಗ ಏಕಾಏಕಿ 20% ಟಿಸಿಎಸ್ ಎಂಬ ಪದ ಬಹಳ ಟ್ರೆಂಡ್ ಆಗಿದೆ. ಕೇಂದ್ರ ಸರಕಾರ ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆಗೆ(FEMA) ತಿದ್ದುಪಡಿ ತಂದಿರುವುದೇ ಇದಕ್ಕೆ ಕಾರಣ. ಇದರ ಪ್ರಕಾರ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಗಳನ್ನು ವಿದೇಶದಲ್ಲಿ ಬಳಸಿದಾಗ ಟಿಸಿಎಸ್ ಅನ್ವಯವಾಗುತ್ತದೆ. ಜೂನ್ 1ರ ಬಳಿಕ ಇದು ಜಾರಿಗೆ ಬರಲಿದೆ. ಹಾಗಿದ್ದರೆ ಏನಿದು 20% ಟಿಸಿಎಸ್? ಈ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ(FEMA) ಕ್ಕೆ ತಿದ್ದುಪಡಿ ತಂದ ಕೇಂದ್ರ ಸರಕಾರ
ಹೀಗಾಗಿ ವಿದೇಶದಲ್ಲಿ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ 20% ಟಿಸಿಎಸ್ ಅನ್ವಯ
2023ರ ಜೂನ್ 1ರ ಬಳಿಕ ಜಾರಿಯಾಗಲಿದ್ದು ಒಬ್ಬನಿಗೆ ವರ್ಷಕ್ಕೆ 2.5 ಲಕ್ಷ ಯುಎಸ್ ಡಾಲರ್ ಮಿತಿ
ಆರ್ ಬಿಐ ನ ಉದಾರೀಕೃತ ಹಣ ರವಾನೆ ಯೋಜನೆ(LRS) ಅಡಿ ಬರುವ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್(ICC) ಗಳ ಬಳಕೆಗೆ ಸಂಬಂಧಿಸಿ ಕೇಂದ್ರ ಸರಕಾರ ಈ ತಿದ್ದುಪಡಿಯನ್ನು ತಂದಿದೆ. 2023ರ ಜೂನ್ 1ರ ಬಳಿಕ ಈ ಕ್ರೆಡಿಟ್ ಕಾರ್ಡಿನಡಿ ಮಾಡುವ ವ್ಯವಹಾರಕ್ಕೆ 20 % ತೆರಿಗೆ ಕಟ್ಟಲೇ ಬೇಕು. ಈ ಬಗ್ಗೆ ಗ್ರಾಹಕರಲ್ಲಿಯೂ ಸಣ್ಣ ಮಟ್ಟಿನ ಗೊಂದಲವಿದೆ.
ಹಾಗಿದ್ದರೆ ನಿಜವಾಗಿಯೂ ಈ 20% ಟಿಸಿಎಸ್ ಅಂದರೇನು? ಇದು ಭಾರತೀಯರ ವಿದೇಶ ಪ್ರವಾಸದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಾವು ತಿಳಿದುಕೊಳ್ಳೋಣ.
ಮಂಗಳವಾರದಂದು ಕೇಂದ್ರ ಸರಕಾರ ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆಯ 7 ನಿಯಮಗಳ ತಿದ್ದುಪಡಿಯನ್ನು ಮಾಡಿತು. ಇದರ ಪ್ರಕಾರ ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಬಳಸಲ್ಪಡುವ ವಿದೇಶಿ ವಿನಿಮಯ ಉದಾರಿಕೃತ ಹಣ ರವಾನೆ ಯೋಜನೆ(LRS)ಯಡಿ ಪರಿಗಣಿಸಲ್ಪಡುತ್ತದೆ. ಇದಕ್ಕೆ ಒಬ್ಬ ವರ್ಷಕ್ಕೆ 2.5 ಲಕ್ಷ ಯುಎಸ್ ಡಾಲರ್ ನ ಮಿತಿಯನ್ನು ಹೇರಲಾಗಿದ್ದು ಇದು ಟಿಸಿಎಸ್ ನಡಿ ತೆರಿಗೆ ಸಂಗ್ರಹಕ್ಕೊಳಪಡುತ್ತದೆ.
LRS ಅನ್ನು ಆರ್ ಬಿಐ 2004ರಲ್ಲಿ ಜಾರಿಗೆ ತಂಗಿತ್ತು. ಒಂದು ವಾರ್ಷಿಕ ವರ್ಷದಲ್ಲಿ ಅನಿವಾಸಿ ಭಾರತೀಯರಿಗೆ 2.5 ಲಕ್ಷ ಅಮೆರಿಕನ್ ಡಾಲರ್ ವರೆಗಿನ ವಹಿವಾಟಿಗೆ ವಿನಾಯಿತಿ ನೀಡಲಾಗಿತ್ತು.
ಟಿಡಿಎಸ್ ಮತ್ತು ಟಿಸಿಎಸ್ ವ್ಯತ್ಯಾಸ
ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಟಿಡಿಎಸ್(TDS) ಅಥವಾ ಟಿಸಿಎಸ್(TCS) ಎಂಬ ಪದವನ್ನು ಖಂಡಿತ ಕೇಳಿರುತ್ತೀರಿ. ಬಹಳಷ್ಟು ಬಾರಿ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಹಲವು ವಿಷಯಗಳ ಅರ್ಥ ಮತ್ತು ವ್ಯತ್ಯಾಸಗಳು ನಮ್ಮ ಅರಿವಿಗೆ ಬಂದಿರುವುದಿಲ್ಲ. ಅನೇಕ ಮಂದಿಯನ್ನು ಗೊಂದಲಕ್ಕೀಡು ಮಾಡುವ ಇವೆರಡರ ವಿಷಯವೂ ಹಾಗೆ. ಹಾಗಿದ್ದರೆ ಇವುಗಳ ನಡುವಿನ ವ್ಯತ್ಯಾಸವೇನೆಂದು ಸರಳವಾಗಿ ತಿಳಿಯೋಣ ಬನ್ನಿ.
ಆದಾಯದ ಮೂಲದಿಂದ ಕಡಿತಗೊಳಿಸುವ ಮೊತ್ತವನ್ನು ಟಿಡಿಎಸ್ ಎಂದು ಹೇಳುತ್ತಾರೆ. ಇದೇ ರೀತಿಯ ಮತ್ತೊಂದು ತೆರಿಗೆ ಕಡಿತ ಟಿಸಿಎಸ್ ಎಂದು ಕರೆಯಲಾಗುತ್ತದೆ. ಇವೆರಡು ಸಹ ಸರ್ಕಾರದ ಮುಖ್ಯ ಆದಾಯದ ಮೂಲಗಳು. ಆದರೆ ತೆರಿಗೆದಾರರು ತಮ್ಮ ಆದಾಯ ತೆರಿಗೆ ಪಾವತಿಯ ಮೇಲೆ ದಂಡ ಉಳಿಸಲು ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.
TDS ಎಂದರೇನು?
ಟಿಡಿಎಸ್ ಎಂದರೆ ಮೂಲದಲ್ಲಿ ಕಡಿತಗೊಳ್ಳುವ ತೆರಿಗೆಯಾಗಿದೆ. ಇಂಗ್ಲಿಷಿನಲ್ಲಿ ಇದನ್ನು Tax Deducted at Source ಎಂದು ಕರೆಯುತ್ತಾರೆ. ಅರ್ಥವೇ ಹೇಳುವಂತೆ ಇದು ಯಾವುದೇ ಮೂಲದಲ್ಲಿ ತೆರಿಗೆ ಕಡಿತಗೊಳಿಸುವುದು. ಈ ಟಿಡಿಎಸ್ (TDS) ದರಗಳನ್ನು ಸರಕಾರ ಆದಾಯ ತೆರಿಗೆ ಕಾಯಿದೆಯಡಿ ನಿರ್ಧಾರ ಮಾಡುತ್ತದೆ. ಇದರಲ್ಲಿ, ಕಂಪನಿ ಅಥವಾ ವೈಯಕ್ತಿಕವಾಗಿ ಟಿಡಿಎಸ್ ಕಡಿತಗೊಳಿಸುವುದನ್ನು ಕಡಿತಗಾರ ಎಂದು ಹೇಳಲಾಗುತ್ತದೆ. ಅಂದ್ರೆ ಪಾವತಿಯನ್ನು ಸ್ವೀಕರಿಸುವ ಕಂಪನಿ ಅಥವಾ ವ್ಯಕ್ತಿಯನ್ನು ಕಡಿತಗಾರ ಎಂದು ಕರೆಯಲಾಗುತ್ತದೆ.
ರಾಯಲ್ಟಿ, ತಾಂತ್ರಿಕ ಸೇವೆ, ಲೀಗಲ್ ಫೀಸ್, ಸಮಾಲೋಚನೆ, ಬಾಡಿಗೆ, ಸಂಬಳ, ಬ್ರೋಕರೇಜ್, ವೃತ್ತಿಪರ ಶುಲ್ಕಗಳು ಇತ್ಯಾದಿಗಳಿಗೆ ಟಿಡಿಎಸ್ ಅನ್ವಯವಾಗುತ್ತದೆ.
TCS ಎಂದರೇನು?
ಇದೇ ಟಿಸಿಎಸ್ TCS ಅಂದರೆ ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆಯು ಮಾರಾಟಗಾರನು ಯಾವುದೇ ಸರಕಿನ ಮೇಲೆ ವಿಧಿಸುವ ತೆರಿಗೆಯಷ್ಟೇ. ಸರಕುಗಳ ಮಾರಾಟದ ಮೇಲಿನ ಟಿಸಿಎಸ್ ಮಿತಿ 50 ಲಕ್ಷ ರೂಪಾಯಿಯಾಗಿದೆ.