21.1 C
Bengaluru
Tuesday, July 9, 2024

ಡಿಕೆಶಿ ಹೂಡಿಕೆ ಕೇರಳದ ಚಾನೆಲ್‌ಗೆ ಸಿಬಿಐ ಸಂಕಷ್ಟ

ನವದೆಹಲಿ: DCM ಡಿಕೆಶಿ(ಡಿಕೆ ಶಿವಕುಮಾರ್) ಕೇರಳದ ‘ಜೈಹಿಂದ್‌ ಸುದ್ದಿವಾಹಿನಿಯಲ್ಲಿ ಹೂಡಿಕೆ ಮಾಡಿರುವ ಹಿನ್ನಲೆಯಲ್ಲಿ ಸಿಬಿಐ ‘ಜೈ ಹಿಂದ್ ಕಮ್ಯೂನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಿಗೆ ಎಲ್ಲಾ ಹೂಡಿಕೆ ವಿವರಗಳನ್ನು ನೀಡಲು ನೋಟಿಸ್‌ ನೀಡಿದೆ. ಡಿಕೆಶಿ ಮಾಡಿರುವ ಹೂಡಿಕೆ ಮೊತ್ತ, ಅವರು ಸಂಸ್ಥೆಯಲ್ಲಿ ಹೊಂದಿರುವ ಪಾಲು, ಅವರ ಕುಟುಂಬಸ್ಥರ ಹೂಡಿಕೆ ಮತ್ತು ಷೇರುಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಿದೆ. ಅಕ್ರಮ ಆಸ್ತಿಗೆ ಸಂಬಂಧ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಈ ವಿಚಾರಣೆ ಸಿಬಿಐ(CBI)ನ ಬೆಂಗಳೂರು ಕಚೇರಿ ಈ ನೋಟಿಸ್ ಕಳುಹಿಸಿದೆ. ಜೈಹಿಂದ್(Jaihind) ಕಮ್ಯೂನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ(Communications Private Limited) ಮ್ಯಾನೇಜಿಂಗ್ ಡೈರೆಕ್ಟರ್‌ ಬಿಎಸ್‌ ಶಿಜು(B,s,Shiju) ಅವರು ಅಗತ್ಯ ದಾಖಲೆಗಳೊಂದಿಗೆ ಜನವರಿ 11 ರಂದು ಬೆಂಗಳೂರಿನಲ್ಲಿರುವ ಸಿಬಿಐ(CBI) ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ. 2024ರ ಜನವರಿ 11ರಂದು ತನಿಖಾಧಿಕಾರಿ ಕೋರಿದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ತನ್ನ ಮುಂದೆ ಹಾಜರಾಗುವಂತೆ ತಿಳಿಸಿದೆ. ಇದಲ್ಲದೆ ಸಿಆರ್​ಪಿಸಿ(CRPC) 91ರಡಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ನೋಟಿಸ್(Notice)​ ನೀಡಲಾಗಿದೆ.ಅಪರಾಧ ದಂಡ ಸಂಹಿತೆಯ ಸೆಕ್ಷನ್ 91 ಪ್ರಕಾರ ನೋಟಿಸ್ ಕಳುಹಿಸಲಾಗಿದೆ. ಡಿಕೆ ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್(Usha Shivakumar) ಅವರು ಮಾಡಿದ ಹೂಡಿಕೆಗಳ ವಿವರ ಮತ್ತು ಅವರಿಗೆ ಪಾವತಿಸಿದ ಲಾಭಾಂಶಗಳು, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ವಿವರ ನೀಡಬೇಕು.ಜೈಹಿಂದ್ (Jaihind)ಹೆಸರಿನಲ್ಲಿ ಅವರು ಮಾಡಿದ ಬ್ಯಾಂಕ್ ವಹಿವಾಟುಗಳ ವಿವರಗಳು, ಲೆಡ್ಜರ್ ಖಾತೆಗಳು,(Ledger Accounts)ಒಪ್ಪಂದದ ಟಿಪ್ಪಣಿಗಳ ವಿವರ ನೀಡಲು ಹೇಳಲಾಗಿದೆ. ಶಿವಕುಮಾರ್ ಅವರ ಪುತ್ರ ಮತ್ತು ಇತರ ಕುಟುಂಬ ಸದಸ್ಯರು ವಾಹಿನಿಯಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನೂ ನೀಡುವಂತೆ ಸಿಬಿಐ(CBI) ಕೇಳಿದೆ.

Related News

spot_img

Revenue Alerts

spot_img

News

spot_img