22.9 C
Bengaluru
Friday, July 5, 2024

ಸಾಲ ವಸೂಲಿ ವೇಳೆ ಬೆದರಿಕೆ ಹಾಕುವಂತಿಲ್ಲ: ಆರ್‌ಬಿಐ

ಮುಂಬಯಿ;ಬ್ಯಾಂಕುಗಳಿಂದ ಸಾಲ ಪಡೆದ ಗ್ರಾಹಕರ ಹಿತದೃಷ್ಟಿಯಿಂದ ಆರ್‌ಬಿಐ(RBI) ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಸಾಲ ವಸೂಲಿ ಮಾಡಲು ಬೆಳಿಗ್ಗೆ 8 ಗಂಟೆಗೂ ಮುನ್ನ ಹಾಗೂ ರಾತ್ರಿ 7 ಗಂಟೆಯ ನಂತರ ಸಾಲಗಾರರಿಗೆ ದೂರವಾಣಿ ಕರೆ ಮಾಡುವುದನ್ನು ತಡೆಯಲು ಆರ್ ಬಿಐ ನಿರ್ಧರಿಸಿದ್ದು, ಈ ಸಂಬಂಧ ಕರಡು ನಿಯಮಗಳನ್ನು(Draft Rules) ಸಿದ್ಧಪಡಿಸಿದೆ.ಬ್ಯಾಂಕ್ ಮತ್ತ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (N B F C) ಪ್ರಮುಖ ಬ್ಯಾಂಕಿಂಗ್(Banking) ಕೆಲಸಗಳನ್ನು ಹೊರ ಗುತ್ತಿಗೆ ನೀಡುವಂತಿಲ್ಲ. ನೀತಿ ರೂಪಿಸುವುದು, ಕೆವೈಸಿ(KYC) ಸಾಲ ಮಂಜೂರು ಸೇರಿದಂತೆ ಇನ್ನೂ ಕೆಲವು ಪ್ರಮುಖ ಕೆಲಸಗಳನ್ನು ಹೊರಗುತ್ತಿಗೆ ನೀಡದಂತೆ ನಿರ್ಬಂಧಿಸಲು ಆರ್ ಬಿಐ(RBI) ಕ್ರಮ ಕೈಗೊಂಡಿದೆ. ಈ ಕುರಿತು ನವೆಂಬರ್ 28ರ ಒಳಗಾಗಿ ಸಲಹೆಗಳನ್ನು, ಪ್ರತಿಕ್ರಿಯೆಗಳನ್ನು ಆರ್ ಬಿಐ ಆಹ್ವಾನಿಸಿದೆ.ಹಣಕಾಸು ಸಂಸ್ಥೆಗಳು ಮತ್ತು ಏಜೆಂಟರು ಸಾಲ ವಸೂಲಿ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯಲ್ಲಿಯೂ ಸಾಲಗಾರರ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳಬಾರದು. ಸಾರ್ವಜನಿಕವಾಗಿ ಅವಹೇಳನ ಮಾಡಬಾರದು. ಸಾಲಗಾರರು/ಖಾತರಿದಾರರ ಕುಟುಂಬದ ಸದಸ್ಯರಿಗೂ ಅವಹೇಳನ ಮಾಡಬಾರದು ಎಂದು ಕರಡು ನೀತಿಯಲ್ಲಿ ಆರ್ ಬಿಐ ತಿಳಿಸಿದೆ.ಆರ್‌ಬಿಐ ಫೇರ್ ಪ್ರಾಕ್ಟೀಸಸ್ ಕೋಡ್ (FPC)ಯ ಭಾಗವಾಗಿ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಲ ವಸೂಲಾತಿ ವೇಳೆ ಫೋನ್‌ನಲ್ಲಿ ಕರೆ ಮಾಡಿ ತಮ್ಮ ಸಾಲಗಾರರಿಗೆ ಬೆದರಿಕೆ ಅಥವಾ ಕಿರುಕುಳ ನೀಡಬಾರದು ಎಂದು ಈಗಾಗಲೇ ಆರ್‌ಇಗಳಿಗೆ ಸಲಹೆ ನೀಡಿದೆ.

Related News

spot_img

Revenue Alerts

spot_img

News

spot_img