20.4 C
Bengaluru
Saturday, November 23, 2024

ಅಭ್ಯರ್ಥಿಯು ಗರಿಷ್ಠ ₹40 ಲಕ್ಷ ಖರ್ಚಿಗೆ ಅವಕಾಶ: ಡಾ.ಕೆ.ವಿ. ರಾಜೇಂದ್ರ

ಮೈಸೂರು: ಸಾರ್ವತ್ರಿಕ ವಿಧಾನಸಬೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಟ 4೦ ಲಕ್ಷದವರೆಗೆ ಚುನಾವಣಾ ವೆಚ್ಚ ಮಾಡಲು ಅವಕಾಶವಿದೆ. ಪ್ರತಿ ಅಭ್ಯರ್ಥಿಯು ಚುನಾವಣೆಯಲ್ಲಿ ತಾವು ಮಾಡುವ ವೆಚ್ಚವನ್ನು ತಮ್ಮ ಖರ್ಚು ವೆಚ್ಚ ಖಾತೆಯ ಮೂಲಕ ಮಾಡಿ ಲೆಕ್ಕ ಇಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.ಮೈಸೂರು ವಿಶ್ವ ವಿದ್ಯಾನಿಲಯದ ಸೆನೆಟ್ ಭವನದಲ್ಲಿ ಹಮ್ಮಿಕೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವೆಚ್ಚ ವೀಕ್ಷಕರು ಚುನಾವಣಾ ವೆಚ್ಚವನ್ನು 3 ಬಾರಿ ಪರಿಶೀಲನೆ ಮಾಡುತ್ತಾರೆ. ಒಬ್ಬ ಅಭ್ಯರ್ಥಿ 40 ಲಕ್ಷ ವೆಚ್ಚ ಮಾಡಲು ಮಿತಿ ಇರುತ್ತದೆ. 11 ವಿಧಾನಸಭಾ ಕ್ಷೇತ್ರಗಳಿಗೆ 9 ವೆಚ್ಚ ವೀಕ್ಷಕರು ಇದ್ದಾರೆ. ಜಿಲ್ಲೆಗೆ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ಇರುತ್ತಾರೆ ಎಂದರು.

ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮುಂಚೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತಮ್ಮ ಖಾತೆಯನ್ನು ತೆರೆದಿರಬೇಕು. 10 ಸಾವಿರಕ್ಕಿಂತ ಹೆಚ್ಚಿನ ಖರ್ಚು ಮಾಡಲು ಚೆಕ್, ಗೂಗಲ್ ಪೇ ಮೂಲಕವೇ ತಮ್ಮ ಖಾತೆಯ ಮೂಲಕವೇ ಮಾಡಬೇಕು. ನಾಮಪತ್ರ ಸಲ್ಲಿಸಿದ ದಿನದಿಂದ ಚುನಾವಣಾ ಫಲಿತಾಂಶ ಬರುವವರೆಗೆ ವೆಚ್ಚವನ್ನು ಲೆಕ್ಕ ಹಾಕಲಾಗುತ್ತದೆ. ಅಭ್ಯರ್ಥಿಗಳು ಮಾಡಿರುವ ಖರ್ಚು ವೆಚ್ಚಗಳನ್ನು ಅಭ್ಯರ್ಥಿಗಳು ಚುನಾವಣೆ ಮುಗಿದ 30 ದಿನಗಳ ಒಳಗೆ ನೀಡದಿದ್ದರೆ 3 ವರ್ಷದವರೆಗೆ ಅನರ್ಹನಾಗುತ್ತಾನೆ ಎಂದರು,ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಯಾರಿಂದ ಆದರೂ ದೇಣಿಗೆ ಪಡೆದರೂ ಅದನ್ನು ತಮ್ಮ ಅಕೌಂಟ್‌ ಗೆ ತೆಗೆದುಕೊಳ್ಳಬೇಕು. ಯಾವುದೇ ವ್ಯಕ್ತಿಗೆ 10 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಕ್ಯಾಶ್ ಮೂಲಕ ಪೂರ್ಣ ಚುನಾವಣಾ ಪ್ರಕ್ರಿಯೆ ಅವಧಿಯಲ್ಲಿ ನೀಡುವಂತಿಲ್ಲ ಎಂದು ಮಾಹಿತಿ ನೀಡಿದರು.

ಅಭ್ಯರ್ಥಿಯು ಸ್ವತಃ ನಿಧಿಯಿಂದ ಹಣ ಖರ್ಚು ಮಾಡಲು ತಮ್ಮ ಹಣವನ್ನು ಚುನಾವಣೆಗೆ ತೆರೆದಿರುವ ಬ್ಯಾಂಕ್ ಖಾತೆಗೆ ಜಮಾ ಮಾಡಿ ನಂತರ ಖರ್ಚು ಮಾಡಬೇಕು. ಚುನಾವಣಾ ವೆಚ್ಚಕ್ಕೆ ಸಂಬ0ದಿಸಿದ ಮಾಹಿತಿಗಳು ಆಂಗ್ಲ ಭಾಷೆಯಲ್ಲಿ ಇದ್ದು, ಇದನ್ನು ಆದಷ್ಟು ಕನ್ನಡ ಭಾಷೆಯಲ್ಲಿ ಒದಗಿಸಲು ಪ್ರಯತ್ನ ಮಾಡಲಾಗುವುದು. 7 ಎ ಅಂತಿಮವಾಗುತ್ತಿದ್ದು ಸೀರಿಯಲ್ ಸಂಖ್ಯೆಯನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು.ಎಲ್ಲಾ ವೆಚ್ಚ ವೀಕ್ಷಕರು ಆಡಳಿತ ತರಬೇತಿ ಸಂಸ್ಥೆಯ ಕಬಿನಿ ಗೆಸ್ಟ್ ಹೌಸ್‌ನಲ್ಲಿ ಇರುತ್ತಾರೆ ತಮಗೆ ಮಾಹಿತಿ ಬೇಕಿದ್ದರೆ ಸಂಪರ್ಕಿಸಬಹುದು.

 

Related News

spot_img

Revenue Alerts

spot_img

News

spot_img