18.5 C
Bengaluru
Friday, November 22, 2024

ಕೆನರಾ ಬ್ಯಾಂ ಕ್‌ ಹೊಸ ಸೇವೆ : ರುಪೇ ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ಪಾವತಿಗೆ ಅವಕಾಶ

ಬೆಂಗಳೂರು, ಜೂ. 30 : ಕೆನರಾ ಬ್ಯಾಂಕ್‌ ತನ್ನ ಗ್ರಾಹಕರಿಗಾಗಿ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಅದೇನೆಂದರೆ ರುಪೇ ಕ್ರೆಡಿಟ್‌ ಕಾರ್ಡ್‌ ಅನ್ನು ಬಳಸಿ ಯುಪಿಐ ಪಾವತಿ ಮಾಡುವುದಾಗಿದೆ. ಕೆನರಾ ಎಐ1 ಬ್ಯಾಂಕಿಂಗ್ ಸೂಪರ್ ಅಪ್ಲಿಕೇಷನ್ ನಲ್ಲಿ ಕೆನರಾ ಬ್ಯಾಂಕ್ ಈ ಹೊಸ ಸೇವೆಯನ್ನು ಆರಂಭಿಸಿದೆ. ಇನ್ನು ಮುಂದೆ ಕೆನರಾ ಬ್ಯಾಂಕ್ ಗ್ರಾಹಕರು ಅಂಗಡಿಗಳಲ್ಲಿ ಶಾಪಿಂಗ್ ಮಾಡಿದಾಗಲೂ ಡಿಜಿಟಲ್ ಪಾವತಿಯನ್ನು ಮಾಡಬಹುದಾಗಿದೆ.

ಯುಪಿಐ ಅನ್ನು ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಐಡಿ ರಚಿಸುವ ಮೂಲಕ ಈ ವ್ಯವಸ್ಥೆಯನ್ನು ಪಡೆಯಬಹುದು. ಪ್ರತಿಯೊಬ್ಬರೂ ಕೆಲ ಬಿಲ್ ಗಳನ್ನು ಕಟ್ಟಲು, ಅಂಗಡಿಗಳಲ್ಲಿ ಹಣ ಸಂದಾಯ ಮಾಡಲು ಬಳಸುತ್ತಾರೆ. ಇದೀಗ ರುಪೇ ಕಾರ್ಡ್ ಎಂಬುದು ಬ್ಯಾಂಕುಗಳು ನೀಡುವ ದೇಶೀಯ ಪಾವತಿ ಜಾಲವಾಗಿದೆ. ರುಪೇ ಕಾರ್ಡ್ 2012 ರಲ್ಲಿ ಎನ್‌ಪಿಸಿಐನಿಂದ ಬಿಡುಗಡೆಯಾದ ಭಾರತೀಯ ದೇಶೀಯ ಕಾರ್ಡ್ ಆಗಿದೆ. ಭಾರತೀಯ ಪಾವತಿ ನೆಟ್‌ವರ್ಕ್ ಆಗಿರುವುದರಿಂದ, ರುಪೇ ಕಾರ್ಡ್‌ಗಳನ್ನು ಭಾರತದಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ.

ವೀಸಾ ಮತ್ತು ಮಾಸ್ಟರ್‌ಕಾರ್ಡ್‌ನಂತಹ ವಿದೇಶಿ ಪಾವತಿ ಜಾಲಗಳ ಏಕಸ್ವಾಮ್ಯವನ್ನು ಕಡಿಮೆ ಮಾಡಲು ಇದನ್ನು ಪ್ರಾರಂಭಿಸಲಾಯಿತು. ಇದೀಗ ರುಪೇ ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ವಹಿವಾಟನ್ನು ಕೂಡ ನಡೆಸಬಹುದಾಗಿದೆ. ಯುಪಿಐ, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮುಂತಾದ ಪಾವತಿ ಅಪ್ಲಿಕೇಶನ್ ಗಳನ್ನು ಹೊಂದಿರುವವರು ಇದಕ್ಕೆ ಕ್ರೆಡಿಟ್ ಕಾರ್ಡ್ ವಿವರಗಳನ್ನು ಸೇರಿಸಿ ಯುಪಿಐ ಪಾವತಿಗಳನ್ನು ಮಾಡಬಹುದಾಗಿದೆ. ಇತರ ಯುಪಿಐ ವಹಿವಾಟುಗಳಂತೆಯೇ ದೈನಂದಿನ ಮಿತಿ 1 ಲಕ್ಷ ರೂ.ಗಳ ವಹಿವಾಟು ನಡೆಸಬಹುದು.

Related News

spot_img

Revenue Alerts

spot_img

News

spot_img