22 C
Bengaluru
Sunday, December 22, 2024

ಗೃಹ ಪ್ರದೇಶದಲ್ಲಿ ವಾಣಿಜ್ಯ ಬಳಕೆಗೆ ಅವಕಾಶವಿದೆಯೇ..?

ಬೆಂಗಳೂರು, ಏ. 14 : ವಸತಿ ಪ್ರದೇಶ ಅಂದರೆ ಅಲ್ಲಿ ಗೃಹ ಬಳಕೆಗೆ ಮಾತ್ರವೇ ಮೀಸಲಾಗಿರುತ್ತದೆ. ಜನರು ವಾಸ ಮಾಡುವ ಮನೆ, ಪ್ಲಾಟ್‌, ಅಪಾರ್ಟ್‌ಮೆಂಟ್ಗಳು ಇರುವ ಜಾಗದಲ್ಲಿ ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಜನರು ವಾಸ ಮಾಡುವ ಸ್ಥಳದಲ್ಲಿ ಕೇವಲ ಕಿರಾಣಿ ಅಂಗಡಿ, ಹೋಟೆಲ್‌ಗಳೂ ಮಾತ್ರವೇ ಇರಬಹುದು. ವಾಣಿಜ್ಯ ಬಳಕೆಯ ಸ್ಥಳಗಳೇ ಬೇರೆ ಇದೆ. ಅಲ್ಲಿ ಶಾಪಿಂಗ್‌ ಮಾಲ್‌, ವಾಣಿಜ್ಯ ಮಳಿಗೆ, ಕಚೇರಿ, ಹೋಟೆಲ್‌, ಕ್ಲಬ್‌, ರೆಸ್ಟೋರೆಂಟ್ಗಳು ಇರುತ್ತವೆ.

ಹೀಗಾಗಿ ಗೃಹೋಪಯೋಗಿ ಜಾಗಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಸಾಧ್ಯವಿರುವುದಿಲ್ಲ. ಹಾಗೊಂದು ವೇಳೆ, ವಾಣಿಜ್ಯ ಬಳಕೆ ಬೇಕು ಎಂದಾದರೆ, ಅದಕ್ಕೆ ಅನುಮತಿಯನ್ನು ಪಡೆಯಬೇಕು. ಇದರ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಹಾಗೂ ನಗರಗಳಿಂದ ನಗರಕ್ಕೆ ಬದಲಾಗುತ್ತಿರುತ್ತದೆ. ಮನೆಯನ್ನು ವಾಣಿಜ್ಯಕ್ಕಾಗಿ ಬಳಸಲು ಏನೆಲ್ಲಾ ಮಾಡಬೇಕು ಎಂಬುದು ಕಾನೂನು ಸ್ಪಷ್ಟವಾಗಿ ಹೇಳಿದೆ. ಈಗ ಕಚೇರಿಗೆಂದು ಬೇರೆ ಹಣ ನೀಡುವ ಬದಲು ಮನೆಯಿಂದ ಸೇವೆ ಸಲ್ಲಿಸಲು ವಕೀಲರು, ಚಾರ್ಟರ್ಡ್‌ ಅಕೌಂಟೆಂಟ್ಸ್‌, ವೈದ್ಯರು ಆಫೀಸ್‌ ಅಥವಾ ಕ್ಲಿನಿಕ್‌ಗಳಾಗಿ ಬಳಸಿಕೊಳ್ಳುತ್ತಾರೆ.

ಇದೇ ರೀತಿಯಲ್ಲಿ ಟ್ಯೂಷನ್‌, ಯೋಗ, ನೃತ್ಯ ಅಥವಾ ಸಂಗೀತ ತರಗತಿಗಳನ್ನು ನಡೆಸುತ್ತಾರೆ. ಹೀಗೆ ಮನೆ ಹಾಗೂ ವಾಣಿಜ್ಯ ಎರಡೂ ಉದ್ದೇಶಕ್ಕೂ ಬಳಸಲು ಅನುಮತಿ ಸಿಗುತ್ತದೆ. ಅದಕ್ಕೆ ಏನೆಲ್ಲಾ ಮಾಡಬೇಕು. ಯಾವೆಲ್ಲಾ ನಿಯಮಗಳು ಇವೆ. ಕಾನೂನು ಏನು ಹೇಳುತ್ತದೆ ಎಂದು ನೋಡೋಣ ಬನ್ನಿ..

ವಸತಿ ಸ್ಥಳಗಳಲ್ಲಿ ಯಾವಿದೇ ಕಾರಣಕ್ಕೂ ಪುಟ್ಟ ಕಾರ್ಖಾನೆಯಾಗಲಿ ಅಥವಾ ಉತ್ಪನ್ನಗಳನ್ನು ತಯಾರಿಸಲು ಬಳಸುವಂತಿಲ್ಲ. ಶಬ್ದ ಬರುವಂತಹ ತಯಾರಿಕಾ ಕೇಂದ್ರಗಳನ್ನು ಆರಂಭಿಸಲು ಅನುಮತಿ ನೀಡಲಾಗುವುದಿಲ್ಲ. ಗೃಹೋಪಯೋಗಿ ಜಾಗಗಳಲ್ಲಿ ಸೇವೆಗಳನ್ನು ನೀಡಲು ಮಾತ್ರವೇ ಬಳಸಬಹುದು. ಆದರಲ್ಲೂ ಸ್ಥಳೀಯ ಪಾಲಿಕೆಯಿಂದ ಅನುಮತಿಐನ್ನು ಪಡೆಯಬೇಕಾಗುತ್ತದೆ. ಒಬ್ಬರ ಮನೆಯ ಸ್ಥಳವನ್ನು ಇನ್ನೊಬ್ಬರು ವಾಣಿಜ್ಯ ಉದ್ದೇಶಕ್ಕಾಗಿ ಬಳಸಬೇಕು ಎಂದರೆ ಆ ಆಸ್ತಿಯ ಮಾಲೀಕರು ಎನ್‌ಒಸಿ ಅನ್ನು ಪಡೆಯುವುದುಕಡ್ಡಾಯವಾಗಿರುತ್ತದೆ.

ವಸತಿ ಜಾಗವನ್ನು ವಾಣಿಜ್ಯ ಬಳಕೆಗೆ ಅನುಮತಿ ಪಡೆಯಲು ಪಾಲಿಕೆ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ. ಆಸ್ತಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಬಗ್ಗೆ ಅರ್ಜಿ ನೀಡಿ. ಅದನ್ನು ನೀವು ಯಾವುದಕ್ಕಾಗಿ ಬಳಸುತ್ತಿದ್ದೀರಿ ಎಂಬುದರ ಬಗ್ಗೆ ಮಾಹಿತಿ ಕೊಡಿ. ಅರ್ಜಿಯ ಜತೆಗೆ ಇತರೆ ದಾಖಲೆಗಳನ್ನು ಲಗತ್ತಿಸಿ. ಹಾಗೆಯೇ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿ. ನಂತರ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಾರೆ. ಅಧಿಕಾರಿಗಳು ಅರ್ಜಿಗೆ ಸಮ್ಮತಿ ನೀಡುತ್ತಾರೆ. ಪಾಲಿಕೆಯಿಂದ ಅನುಮತಿ ನೀಡಿದ ಪತ್ರ ಪಡೆಯಿರಿ.

Related News

spot_img

Revenue Alerts

spot_img

News

spot_img