ಬೆಂಗಳೂರು, ಮೇ. 12 : ಎಲ್ಲರಿಗೂ ತಿಳಿದಿರುವ ಹಾಗೆ ತಂದೆ-ತಾಯಿಯ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿರುತ್ತದೆ. ಪೋಷಕರ ಆಸ್ತಿಯನ್ನು ಮಕ್ಕಳು ಅನುಭವಿಸು ಅಥವಾ ಅವರಿಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಹಕ್ಕಿರುತ್ತದೆ. ಅದೇ ಮಕ್ಕಳ ಆಸ್ತಿಯ ಮೇಲೆ ಪೋಷಕರಿಗೆ ಯಾವ ರೀತಿಯಲ್ಲಿ ಹಕ್ಕಿರುತ್ತದೆಯಾ ಇಲ್ಲವೇ ಹೆಂಡತಿಗೆ ಮಾತ್ರವೇ ಹಕ್ಕಿರುತ್ತದೆಯಾ ಎಂಬ ಪ್ರಶ್ನೆಗಳು ಹಲವರಲ್ಲಿ ಕಾಡುತ್ತದೆ. ಅಂತಹ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವನ್ನು ನೀಡಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ, ತಿಳಿದುಕೊಳ್ಳಿ..
ಸಾಮಾನ್ಯವಾಗಿ ಆಸ್ತಿಯ ವಾರಸುದಾರರು ಬದುಕಿರುವಾಗಲೇ ಯಾರಿಗೆ ಪಾಲನ್ನು ಕೊಡಬೇಕು ಎಂದು ನಿರ್ಧರಿಸಿ ಹಂಚಿಕೆ ಮಾಡಿದರೆ ಹೆಚ್ಚು ಸಮಸ್ಯೆಗಳು ಆಗುವುದಿಲ್ಲ. ಪೂರ್ವಾಜಿತ ಆಸ್ತಿಗಳು ಎಲ್ಲರಿಗೂ ಸಮಪಾಲಾಗಿ ಹಂಚಿಕೆಯಾಗಬೇಕು. ಅದೇ ಸ್ವಯಾರ್ಜಿತ ಆಸ್ತಿ ಹಾಗಲ್ಲ. ಆಸ್ತಿಯ ಒಡೆಯ ತನಗೆ ಬೇಕಾದವರಿಗೆ ಹಂಚುವ ಹಕ್ಕಿರುತ್ತದೆ. ಇನ್ನು ಪೋಷಕರ ಆಸ್ತಿಯನ್ನು ಮಕ್ಕಳು ಪಡೆಯುವ ಹಕ್ಕು ಸಾಮಾನ್ಯವಾಗಿ ಇರುತ್ತದೆ. ಆದರೆ ಮಕ್ಕಳ ಮಾಡಿ ಆಸ್ತಿಯ ಮೇಲೆ ಪೋಷಕರಿಗೆ ಎಷ್ಟು ಹಕ್ಕು ಇರುತ್ತದೆ ಎಂಬುದನ್ನು ತಿಳಿಯೋಣ..
ಹಿಂದೂ ಉತ್ತರಾಧಿಕಾರ ಕಾಯ್ದಿಯ ಪ್ರಕಾರ, ವ್ಯಕ್ತಿ ಮೃತಪಟ್ಟರೆ, ಆಸ್ತಿಯನ್ನು ಆತನ ತಾಯಿ, ಹೆಂಡತಿ ಹಾಗೂ ಮಕ್ಕಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ. ಪೋಷಕರಿಗೆ ಮಕ್ಕಳ ಆಸ್ತಿಯ ಮೇಲೆ ಸಂಪೂರ್ಣವಾದ ಹಕ್ಕು ಇರುವುದಿಲ್ಲ. ಆದರೆ, ಸಮಾನವಾಗಿ ಹಂಚಿಕೊಳ್ಳಬಹುದಾಗಿದೆ. ಮಕ್ಕಳು ಅಕಾಲಿಕ ಮರಣ ಹೊಂದಿದಾಗ ಪೋಷಕರು ಕೂಡ ಮಕ್ಕಳ ಆಸ್ತಿಯ ಮೇಲೆ ಹಕ್ಕು ಸಾಧಿಸಬಹುದಾಗಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8 ಅಡಿಯಲ್ಲಿ ಆಸ್ತಿ ಅನ್ನು ಹಂಚಿಕೊಳ್ಳುವ ಹಕ್ಕಿದೆ.
ಇನ್ನು ಈ ವಿಚಾರದಲ್ಲಿ ತಂದೆ ಎರಡನೇ ವಾರಸುದಾರನಾಗಿರುತ್ತಾನೆ. ತಾಯಿ ಮೊದಲನೇಯ ವಾರಸುದಾರರಾಗಿರುತ್ತಾರೆ. ಮೃತ ವ್ಯಕ್ತಿ ಪುರುಷನಾಗಿದ್ದಾರೆ. ಆತ ಅವಿವಾಹಿತನಾಗಿದ್ದರೆ, ಆಸ್ತಿ ಪೋಷಕರಿಗೆ ಹೋಗುತ್ತದೆ. ಅದೇ, ಆ ವ್ಯಕ್ತಿ ಮದುವೆಯಾಗಿದ್ದರೆ ಮೊದಲ ವಾರಸುದಾರ ಹೆಂಡತಿಯಾಗಿರುತ್ತಾಳೆ. ಬಳಿಕ ಮಕ್ಕಳು, ಆನಂತರದಲ್ಲಿ ಪೂಷಕರು ವಾರಸುದಾರರು ಆಗಿರುತ್ತಾರೆ. ಅದೇ ಮೃತ ವ್ಯಕ್ತಿ ಮಹಿಳೆಯಾಗಿದ್ದಲ್ಲಿ ಆಕೆ ಮದುವೆಯಾಗಿದ್ದರೆ, ಆಕೆಯ ಆಸ್ತಿಯ ಮೇಲೆ ಮೊದಲು ಪತಿ, ನಂತರ ಮಕ್ಕಳು, ಬಳಿಕ ಪೋಷಕರಿಗೆ ಸಿಗುತ್ತದೆ.