20 C
Bengaluru
Sunday, December 22, 2024

ಸರ್ಕಾರಕ್ಕೆ ನಷ್ಟ: 6 ಉಪ ನೋಂದಣಾಧಿಕಾರಿಗಳ ಅಮಾನತು: 3 ಕೇಂದ್ರ ಸ್ಥಾನೀಯ ಉಪ ನೋಂದಣಾಧಿಕಾರಿಗಳ ಅಮಾನತಿಗೆ ಶಿಫಾರಸು !

#CAG Report # Suspended # six sub registrar suspended, #Karnataka Revenue department news

ಬೆಂಗಳೂರು, ಮಾ. 09: ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಕಟ್ಟಿಸಿಕೊಳ್ಳಬೇಕಿದ್ದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಳ್ಳದೇ ನಷ್ಟ ಮಾಡಿದ ಅರೋಪದ ಹಿನ್ನೆಲೆಯಲ್ಲಿ ಆರು ಉಪ ನೋಂದಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಮೂವರು, ಕೇಂದ್ರ ಸ್ಥಾನ ಹಿರಿಯ ಉಪ ನೋಂದಣಾಧಿಕಾರಿಗಳನ್ನು ಅಮಾನತು ಮಾಡುವಂತೆಯೂ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ನೋಂದಣಿ ಮತ್ತು ಮುದ್ರಾಂಕ ಆಯುಕ್ತರ ಕಾರ್ಯಾಲಯದ ಎಡವಟ್ಟಿನಿಂದ ಕಂದಾಯ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಇಂತಹ ಕಾರಣಕ್ಕೆ ಅಮಾನತು ಮಾಡಲಾಗುತ್ತಿದ್ದು, ಉಪ ನೋಂದಣಾಧಿಕಾರಿಗಳ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಅಮಾನತಿಗೆ ಒಳಗಾದವರು:

1. ಚಂದ್ರಕಾಂತ್ ಮಜ್ಜಿಗೆ, ಉತ್ತರ ಕರ್ನಾಟಕ

2. ನಾಗೇಂದ್ರ, ಉಪ ನೋಂದಣಾಧಿಕಾರಿ, ಬಸವನಗುಡಿ ಜಿಲ್ಲಾ ಉಪ ನೋಂದಣಾಧಿಕಾರಿಗಳ ಕಾರ್ಯಾಲಯ,

3. ಪ್ರಭಾವತಿ, ಹಲಸೂರು ಉಪ ನೋಂದಣಾಧಿಕಾರಿಗಳು,

4. ಸ್ವರ್ಣಲತಾ, ಜಾಲ ಉಪ ನೋಂದಣಾಧಿಕಾರಿ,

5. ಭಾಸ್ಕರ್ ಎಸ್. ಚೋರ, ಬಿಟಿಎಂ ಬಡಾವಣೆ,

06. ಚಂದ್ರಮ್ಮ – ಉಪ ನೋಂದಣಾಧಿಕಾರಿ,

07. ಆರ್‌.ಎನ್. ಪ್ರಸಾದ್,

 

ಅಮಾನತಿಗ ಶಿಫಾರಸು ಆದ ಎ ದರ್ಜೆ ಕೇಂದ್ರ ಸ್ಥಾನ ಉಪ ನೋಂದಣಾಧಿಕಾರಿಗಳು,

1. ಚಿಕ್ಕಪೆದ್ದಣ್ಣ, ಉಪ ನೋಂದಣಾಧಿಕಾರಿಗಳು, ಕೆ.ಆರ್. ಪುರಂ.

2. ಸುಮನಾ, ಮಹದೇವಪುರ ಉಪ ನೋಂದಣಾಧಿಕರಿಗಳ ಕಚೇರಿ,

03. ಮಂಗಳ ಬಾಯಿ ಕಾಳೇ, ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ, ಬಸವನಗುಡಿ,

ಏನಿದು ಕಥೆ : ಕಂದಾಯ ಇಲಾಖೆ ವ್ಯಾಪ್ತಿಗ ಒಳಪಡುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಪ್ರತಿ ವರ್ಷ ನೋಂದಣಿಯಾಗುವ ದಾಸ್ತವೇಜುಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಸೂಲಾತಿಯ ಬಗ್ಗೆ ಭಾರತೀಯ ಮಹಾ ಲೇಖಪಾಲರು ತಪಾಸಣೆ ನಡೆಸುತ್ತಾರೆ. ಮಹಾ ಲೇಖಪಾಲರ ಕಾರ್ಯಾಲಯದ ಅಧಿಕಾರಿಗಳ ತಂಡ, ದಾಸ್ತವೇಜುಗಳ ನೋಂದಣಿ ಪ್ರಕ್ರಿಯೆಯಲ್ಲಿ ಉಪ ನೋಂದಣಾಧಿಕಾರಿಗಳು ಸಂಗ್ರಹಿಸುವ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ವ್ಯತ್ಯಾಸ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುತ್ತದೆ. ಏನಾದರೂ ಲೋಪಗಳು ಕಂಡು ಬಂದಲ್ಲಿ ಇದಕ್ಕೆ ಸಮರ್ಥ ಸಮುಜಾಯಿಷಿ ನೀಡುವಂತೆ ನೋಂದಣಿ ಮತ್ತು ಮುದ್ರಾಂಕ ಆಯುಕ್ತರ ಕಚೇರಿಗೆ ನೋಟಿಸ್ ನೀಡಲಾಗುತ್ತದೆ. ಈ ವೇಳೆ ತಪ್ಪು ಎಸಗಿದ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಸತ್ಯಾಂಶವುಳ್ಳ ಅಂಶಗಳನ್ನು ಮಹಾಲೇಖಪಾಲರ ಕಚೇರಿಗೆ ನೋಂದಣಿ ಮತ್ತು ಮುದ್ರಾಂಕ ಅಯುಕ್ತರು ಕಳುಹಿಬೇಕಿತ್ತು. ಆದ್ರೆ, ಮಹಾ ಲೇಖಪಾಲರ ಕಚೇರಿಗೆ ಸರಿಯಾದ ಸಮುಜಾಯಿಷಿ ನೀಡದ ಹಿನ್ನೆಲೆಯಲ್ಲಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಳ್ಳದೇ ಸರ್ಕಾರಕ್ಕೆ ನಷ್ಟವುಂಟು ಮಾಡಿದ ಪ್ರಕರಣಗಳ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ವರದಿ ನೀಡಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದೆ.

ಸಾರ್ವಜನಿಕ ಲೆಕ್ಕಪತ್ರ ಪರಿಶೀಲನಾ ಸಮಿತಿ ಪರಿಶೀಲಿಸಿದ ಬಳಿಕ ಸರ್ಕಾರಕ್ಕೆ ನಷ್ಟವುಂಟು ಮಾಡಿದ ಆರು ಮಂದಿ ಉಪ ನೋಂದಣಾಧಿಕಾರಿಗಳು ಹಾಗೂ ಮೂವರು ಕೇಂದ್ರ ಸ್ಥಾನೀಯ ಉಪ ನೋಂದಣಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ.

ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಶಿಫಾರಸು ಹಿನ್ನೆಲೆಯಲ್ಲಿ ಆರು ಮಂದಿ ಉಪ ನೋಂದಣಾಧಿಕಾರಿಗಳನ್ನು ನೋಂದಣಿ ಮತ್ತು ಮುದ್ರಾಂಕ ಆಯುಕ್ತರಾದ ಡಾ. ಮಮತಾ ಬಿ.ಅರ್. ಅವರು ಅಮಾನತು ಮಾಡಿದ್ದಾರೆ. ಉಳಿದ ಮೂವರು ಕೇಂದ್ರ ಸ್ಥಾನೀಯ ಉಪ ನೋಂದಣಾಧಿಕಾರಿಗಳನ್ನು ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಮೂವರ ಅಮಾನತು ಅದೇಶ ಶೀಘ್ರದಲ್ಲಿಯೆ ಹೊರ ಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮೂವರು ಕೇಂದ್ರೀಯ ಸ್ಥಾನ ಉಪ ನೋಂದಣಾಧಿಕಾರಿಗಳ ಅಮಾನತು ಬಗ್ಗೆ ಕೇಂದ್ರ ಸ್ಥಾನೀಯ ಉಪ ನೋಂದಣಾಧಿಕಾರಿಯನ್ನು ಕೇಳಿದಾಗ ಈ ವಿಚಾರ ನನಗೆ ಗೊತ್ತಿಲ್ಲ, ಐಜಿಅರ್ ಅವರನ್ನೇ ಕೇಳಿ ಎಂದು ಹೇಳಿದರು.

ಪ್ರತಿ ವರ್ಷವೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೋಂದಣಿಯಾಗುವ ದಾಸ್ತವೇಜುಗಳು ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಸಂಬಂಧ ಅಗಿರುವ ಲೋಪಗಳ ಬಗ್ಗೆ ಮಹಾ ಲೇಖಪಾಲರು ತಪಾಸಣೆ ನಡೆಸುತ್ತಾರೆ. ಅಕ್ರಮ ಕಂಡು ಬಂದಲ್ಲಿ ಅಧಿಕಾರಿಗಳ ತಂಡ ರಚನೆ ಮಾಡಿ ಲೆಕ್ಕ ಪರಿಶೋಧನೆ ಮಾಡುತ್ತದೆ. ಈ ವೇಳೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ದಾಸ್ತವೇಜುಗಳ ನೋಂದಣಿ, ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ವಸೂಲಿ ಕುರಿತ ಪ್ರಕರಣಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕಳುಹಿಸಲಾಗುತ್ತದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಮಗ್ರ ಅಧ್ಯಯನ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರುಸು ಮಾಡುತ್ತದೆ.

ಮಹಾ ಲೇಖಪಾಲರ ಕಚೇರಿಯಿಂದ ಉಪ ನೋಂದಣಾಧಿಕಾರಿಗಳ ಮೇಲಿನ ಅರೋಪಗಳಿಗೆ ಸಂಬಂಧಿಸಿದಂತೆ ಐಜಿಅರ್ ಸಮಗ್ರವಾಗಿ ಪರಿಶೀಲಿಸಿ, ತಪ್ಪಿತಸ್ಥರಿಂದ ವಾಸ್ತವ ಸಂಗತಿಗಳನ್ನುಕ್ರೊಢೀಕರಿಸಿ ದಾಖಲೆಗಳ ಸಮೇತ ರವಾನಿಸುವ ಪದ್ಧತಿ ಈ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಈ ಸಲ ಐಜಿಅರ್ ಕಚೇರಿಯಲ್ಲಿ ಈ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯತೆ ವಹಿಸಲಾಗಿತ್ತು. ಅದರಿಂದ ಆರು ಮಂದಿಯನ್ನು ಏಕಾಏಕಿ ಅಮಾನತು ಮಾಡಿದ್ದಾರೆ. ಉಪ ನೋಂದಣಾಧಿಕಾರಿಗಳ ವರ್ಷಗಳಿಂದ ಕೆಲಸ ಮಾಡಿರುತ್ತಾರೆ. ಅವರು ಸುಂಕ ನಿರ್ಣಯ ಪ್ರಕರಣದಲ್ಲಿ ತಪ್ಪು ನಿರ್ಣಯ ಕೈಗೊಳ್ಳುವುದು ಅಪರೂಪ. ಈ ಬಗ್ಗೆ ಸಿಎಜಿ ಅವರ ಸೂಚನಾ ಪತ್ರಗಳಿಗೆ ಸಮರ್ಥ ವರದಿ ನೀಡಲು ಅವಕಾಶವಿತ್ತು. ಇದರಲ್ಲಿನ ಲೋಪದಿಂದ ಉಪ ನೋಂದಣಾಧಿಕಾರಿಗಳು ಅಮಾನತಿಗೆ ಒಳಗಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಉಪ ನೋಂದಣಾಧಿಕಾರಿ ವಾಸ್ತವ ಸಂಗತಿಯನ್ನು ತಿಳಿಸಿದ್ದಾರೆ.

 

 

Related News

spot_img

Revenue Alerts

spot_img

News

spot_img