21.1 C
Bengaluru
Monday, December 23, 2024

ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು 2,600 ಕೋಟಿ ರೂಪಾಯಿ ಪ್ರೋತ್ಸಾಹಧನ ಅನುಮೋದಿಸಿದ ಕ್ಯಾಬಿನೆಟ್

ಬೆಂಗಳೂರು, ಜ. 12 : Digital payments:  ಪಾಯಿಂಟ್ ಆಫ್ ಸೇಲ್ ಮತ್ತು ಇ-ಕಾಮರ್ಸ್ ವಹಿವಾಟಯಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ದೇಶವನ್ನು ಹಂತ ಹಂತವಾಗಿ ಡಿಜಿಟಲೀಕರಣ ಮಾಡುತ್ತಿದೆ. ರುಪೇ ಡೆಬಿಟ್ ಕಾರ್ಡ್ ಬಳಕೆ ಹಾಗೂ ಸಣ್ಣ ಮೊತ್ತದ ಭೀಮ್–ಯುಪಿಐ ವಹಿವಾಟುಗಳನ್ನು ಪ್ರೋತ್ಸಾಹ ಯೋಜನೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ರುಪೇ ಡೆಬಿಟ್ ಕಾರ್ಡ್ ಬಳಕೆ ಹಾಗೂ ಸಣ್ಣ ಮೊತ್ತದ ಭೀಮ್–ಯುಪಿಐ ವಹಿವಾಟುಗಳ ಮೇಲೆ ₹ 2,600 ಕೋಟಿ ವಿನಿಯೋಗಿಸಲಿದೆ. ಈ ಮೊತ್ತವನ್ನು ಹಣಕಾಸು ವರ್ಷ 2022-2034 ರಲ್ಲೇ ವಿನಿಯೋಗಿಸಲಾಗುತ್ತದೆ ಎಂದು ಹೇಳಲಾಗಿದೆ.

ಕಳೆದ ವರ್ಷವೇ ಕೇಂದ್ರ ಸರ್ಕಾರ ಪ್ರೋತ್ಸಾಹಕ ಯೋಜನೆಯನ್ನು ಅನುಮೋದಿಸಿತ್ತು. ಸದ್ಯ ರುಪೇ ಕಾರ್ಡ್‌ ಹಾಗೂ ಯುಪಿಐ ಬಳಕೆಯನ್ನು ಪ್ರೋತ್ಸಾಹಿಸಲು ಸಲುವಾಗಿ ಈ ಯೋಜನೆ ಅಡಿ ಬ್ಯಾಂಕ್‌ಗಳಿಗೆ ಹಣಕಾಸು ನೀಡಲಾಗುತ್ತದೆ. ಈ ಪ್ರೋತ್ಸಾಹ ಧನ ಸಹಾಯದ ಮೂಲಕ ಡಿಜಿಟಲ್‌ ಪಾವತಿಗಳ ವಹಿವಾಟು ಮತ್ತಷ್ಟು ಬೆಳವಣಿಗೆ ಕಾಣಲಿವೆ. ಕಳೆದ 8 ವರ್ಷಗಳಲ್ಲಿ, ಭಾರತವು ಡಿಜಿಟಲ್ ಪಾವತಿಯ ಬೃಹತ್ ಪರಿಸರ ವ್ಯವಸ್ಥೆಯನ್ನು ರೂಪಿಸಿದೆ. ಡಿಜಿಟಲ್ ಪಾವತಿಗಳ ಮೌಲ್ಯವು ಸರಿಸುಮಾರು 12 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ದೇಶದ GDP ಯ ಸುಮಾರು 54 ಪ್ರತಿಶತವನ್ನು ಒಳಗೊಂಡಿದೆ.

UPI ಲೈಟ್ ಮತ್ತು UPI 123 ಪೇ ಅನ್ನು ಆರ್ಥಿಕ ಹಾಗೂ ಬಳಕೆದಾರ ಸ್ನೇಹಿ ಡಿಜಿಟಲ್ ಪಾವತಿ ಪರಿಹಾರಗಳಾಗಿ ಉತ್ತೇಜಿಸುತ್ತದೆ. ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಆಳವಾಗಿಸಲು ಅನುವು ಮಾಡಿಕೊಡುತ್ತದೆ ಎಂದು ಕ್ಯಾಬಿನೆಟ್ ನಲ್ಲಿ ಹೇಳಲಾಗಿದೆ. ಇತ್ತೀಚೆಗೆ ರಾಷ್ಟ್ರೀಯ ಪಾವತಿಗಳ ನಿಗಮ ಪರಿಚಯಿಸಿದ ಪಾವತಿ ವ್ಯವಸ್ಥೆಗಳನ್ನು ಕಡಿಮೆ ಮಾಡಲು ಸಣ್ಣ ವಹಿವಾಟುಗಳಿಗಾಗಿ ಬ್ಯಾಂಕಿಂಗ್ ನೆಟ್‌ವರ್ಕ್‌ಗಳ ಮೇಲಿನ ಹೊರೆ ಮತ್ತು ಕ್ರಮವಾಗಿ ಹಳೆಯ ವೈಶಿಷ್ಟ್ಯದ ಫೋನ್‌ಗಳ ಮೂಲಕ ಪಾವತಿಗಳನ್ನು ಅನುಮತಿಸಲು ಅವಕಾಶ ಮಾಡಿಕೊಡಲಾಗಿದೆ.

ಈ ಪ್ರೋತ್ಸಾಹಕ ಯೋಜನೆಯು ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಕಾರಿಯಾಗಿದೆ. ಜೊತೆಗೆ ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್‌ ಯುಪಿಐ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಅನುಕೂಲವಾಗುತ್ತದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಉದ್ದೇಶಕ್ಕೆ ಅನುಗುಣವಾಗಿ, ಈ ಯೋಜನೆಯು ಸ್ನೇಹಿ ಡಿಜಿಟಲ್ ಪಾವತಿ ಪರಿಹಾರಗಳಾಗಿ ಉತ್ತೇಜಿಸುತ್ತದೆ. ಎಲ್ಲಾ ವಲಯಗಳಲ್ಲಿ ಮತ್ತು ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ, ಡಿಜಿಟಲ್ ಪಾವತಿಗಳು ಸಣ್ಣ ವ್ಯಾಪಾರಿಗಳು ಸೇರಿದಂತೆ ವ್ಯವಹಾರಗಳ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಿದವು. ಅಲ್ಲದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಡಿಜಿಟಲ್‌ ಪಾವತಿ ಸಹಾಯ ಮಾಡಿತ್ತು.

ಅನಿವಾಸಿ ಭಾರತೀಯರಿಗೂ ಯುಪಿಐ: ಇನ್ನು ಮುಮದೆ ಅನಿವಾಸಿ ಭಾರತೀಯರೂ ಕೂಡ ಯುಪಿಐ ಬಳಸಿ ತಮ್ಮ ಎನ್ ಆರ್ ಇ/ ಎನ್ ಆರ್ ಒ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಆಸ್ಟ್ರೇಲಿಯಾ, ಕೆನಡಾ, ಹಾಮಗ್ ಕಾಂಗ್, ಸಿಂಗಾಪುರ್, ಯುಎಸ್, ಯುಕೆ ಸೇರಿದಂತೆ ಒಟ್ಟು ಹತ್ತು ದೇಶಗಳ ಅನಿವಾಸಿ ಭಾರತೀಯರು ಯುಪಿ ಬಳಸಬಹುದಾಗಿದೆ.

Related News

spot_img

Revenue Alerts

spot_img

News

spot_img