22.9 C
Bengaluru
Friday, July 5, 2024

ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ ಸಂಪುಟ ಅನುಮೋದನೆ

ನವದೆಹಲಿ, ಸೆ 19:ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ(cabinet meeting) ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ(Women’s Reservation Bill) ಅನುಮೋದನೆ ನೀಡಲಾಗಿದೆ.ಈ ಮಸೂದೆ ಅಂಗೀಕಾರವಾದ ನಂತರ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲಾಗುವುದು.1996 ರಿಂದ, ಮಹಿಳೆಯರಿಗೆ ಶಾಸಕಾಂಗ ಮೀಸಲಾತಿಗಾಗಿ ಕಾನೂನನ್ನು ಜಾರಿಗೆ ತರಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ, ಆದರೆ ಎಲ್ಲಾ ಪ್ರಯತ್ನಗಳು ವಿಫಲವಾದವು.

2010 ರಲ್ಲಿ, ಯುಪಿಎ ಸರ್ಕಾರವು ಮೇಲ್ಮನೆಯಲ್ಲಿ ಮಸೂದೆಯನ್ನು(Bill) ಅಂಗೀಕರಿಸುವಲ್ಲಿ ಯಶಸ್ವಿಯಾಯಿತು ಆದರೆ ಮಿತ್ರಪಕ್ಷಗಳ ಒತ್ತಡದಿಂದ ಲೋಕಸಭೆಗೆ ತರಲು ಸಾಧ್ಯವಾಗಲಿಲ್ಲ.ಈ ಬಾರಿ ಮಸೂದೆ ಸುಗಮವಾಗಿ ಅಂಗೀಕಾರವಾಗುವ ಸಾಧ್ಯತೆ ಇದೆ. ಆಡಳಿತಾರೂಢ ಎನ್‌ಡಿಎ, ಅದರ ಬೆಂಬಲಿಗ ಬಿಜೆಡಿ ಮತ್ತು ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್, ತೃಣಮೂಲ, ಬಿಆರ್‌ಎಸ್ ಮತ್ತು ಎಡಪಕ್ಷಗಳು ಸಂಸತ್ತಿನಲ್ಲಿ ಮಸೂದೆಯನ್ನು ಬೆಂಬಲಿಸುವ ನಿರೀಕ್ಷೆಯಿದೆ. ಈ ಮಸೂದೆಯು ಲೋಕಸಭೆಯಲ್ಲಿ 431 ಮತ್ತು ರಾಜ್ಯಸಭೆಯಲ್ಲಿ 175 ಸಂಸದರ ಬೆಂಬಲವನ್ನು ಪಡೆಯಲಿದೆ.ಸಂಪುಟ ಸಭೆಯಲ್ಲಿ ರಾಜನಾಥ್ ಸಿಂಗ್, ಅಮಿತ್ ಶಾ, ಪಿಯೂಷ್ ಗೋಯಲ್, ಪ್ರಲ್ಹಾದ್ ಜೋಶಿ, ಎಸ್ ಜೈಶಂಕರ್, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಕೇಂದ್ರ ಸಚಿವರು ಭಾಗವಹಿಸಿದ್ದರು. ಮಹಿಳಾ ಮೀಸಲಾತಿ ಮಸೂದೆಯನ್ನು ಅನುಮೋದಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಲು ದೆಹಲಿ-ಎನ್‌ಸಿಆರ್‌ನಿಂದ ಸಾವಿರಾರು ಮಹಿಳೆಯರನ್ನು ದೆಹಲಿಗೆ ಕರೆತರಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Related News

spot_img

Revenue Alerts

spot_img

News

spot_img