ಬೆಂಗಳೂರು, ಏ. 18 : ಮನೆ ಖರೀದಿಸಲು ಕನಸು ಕಂಡ ಸುಮಾರು 50 ಮಂದಿ ದುರಾಸೆ ಬಿಲ್ಡರ್ ಗಳ ಬಳಿ ಸಿಲುಕಿಕೊಂಡು ಕನಸನ್ನು ಕನಸಾಗೇ ಉಳಿದಿದೆ. ಆದರೆ, ಸ್ವಂತ ಮನೆಗಾಗಿ ಮಾಡಿದ ಸಾಲವನ್ನು ಮಾತ್ರ ತೀರಿಸುತ್ತಿದ್ದಾರೆ. ಮನೆ ಖರೀದಿಸುವ ಆಸೆಯಿಂದ ಸಾಲವನ್ನು ತೀರಿಸುತ್ತಾ ಕೊರಗುತ್ತಿದ್ದರೆ, ಬಿಲ್ಡರ್ ಗಳು ಮಾತ್ರವೇ ಯಾವುದೇ ಪಶ್ಚಾತಾಪವಿಲ್ಲದೇ, ಮನೆ ಖರೀದಿದಾರರ ಮೇಲೆ ತಮ್ಮ ಸವಅರಿಯನ್ನು ಮುಂದುವರಿಸಿದ್ದಾರೆ.
ಶ್ರೀ ವಾಣಿ ಶೆಲ್ಟರ್ಗೆ ನೀಡಿದ ಮೂರು ವರ್ಷಗಳ ಗಡುವಿನ ಬಳಿಕವೂ ವಸತಿ ಯೋಜನೆಯು ಅಪೂರ್ಣವಾಗಿಯೇ ಉಳಿದಿದೆ. ಅಷ್ಟೇ ಅಲ್ಲದೇ, ಕೆಲ ಫ್ಲಾಟ್ ಗಳನ್ನು ಒಬ್ಬರಿಗೆ ಮಾರಾಟ ಮಾಡದೇ, ಸಹಲವರಿಗೆ ನೋಂದಣಿ ಮಾಡಲಾಗಿದೆ. ಇದರಿಂದ ಮನೆ ಖರೀದಿಸುವ ಕನಸು ಕಂಡವರಿಗೆ ಸ್ವಂತ ಮನೆಗೆ ತೆರಳುವುದು ದುಃಸ್ವಪ್ನವಾಗಿದೆ.
ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಗೊಟ್ಟಿಗೆರೆ ಬಳಿಯ ಲಾಲ್ಬಹದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಶ್ರೀ ವಾಣಿ ಶೆಲ್ಟರ್ ಅಪಾರ್ಟ್ ಮೆಂಟ್ ಅನ್ನು ನಿರ್ಮಾಣ ಮಾಡಿದೆ. ಬಿಲ್ಡರ್ ಗಳು ಇದರಲ್ಲಿನ ಫ್ಲಾಟ್ ಗಳನ್ನು ಹಲವರ ಹೆಸರಲ್ಲಿ ನೋಂದಣಿ ಮಾಡಿಸಿದೆ. ಒಂದೇ ಫ್ಲಾಟ್ ಇಬ್ಬಿಬ್ಬರ ಹೆಸರಲ್ಲಿ ನೋಂದಣಿ ಆಗಿದೆ. ಈ ವಿಚಾರವನ್ನು ತಿಳಿದಾಗ ಖರೀದಿದಾರರು ಬೆಚ್ಚಿ ಬಿದ್ದಿದ್ದಾರೆ.
ಶ್ರೀ ವಾಣಿ ಶೆಲ್ಟರ್ ಬಿಲ್ಡರ್ ಗಳ ಕಡೆಯಿಂದ ಅಕ್ರಮ ನಡೆದಿರುವುದು ಬಹಿರಂಗವಾದ ಮೇಲೆ ಮನೆ ಖರೀದಿದಾರರು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ದೂರನ್ನು ಕೂಡ ದಾಖಲು ಮಾಡಿದ್ದಾರೆ. ಕೆಲವರು ತಲಘಟ್ಟಪುರ ಪೊಲೀಸ್ ಠಾಣೆಗೆ ತೆರಳಿ ಶ್ರೀ ವಾಣಿ ಶೆಲ್ಟರ್ಸ್ ವಂಚಿಸಿದ ಬಗ್ಗೆ ದೂರನ್ನು ನೀಡಿದ್ದಾರೆ.
ಸಿದೀರ್ ನಾಗರಾಜ್ ಎಂಬುವರು 5.50 ಲಕ್ಷ ರೂಪಾಯಿಗಳನ್ನು ಪಾವತಿಸಿ ಫ್ಲಾಟ್ ನಂ. 306 ಅನ್ನು ಖರೀದಿಸಲು ಮುಂದಾಗಿದ್ದಾರೆ. ಈ ಸಂಬಂಧ 2020 ರಲ್ಲಿ 14 ಲಕ್ಷ ರೂಪಾಯಿಯನ್ನು ಬ್ಯಾಂಕ್ ನಲ್ಲಿ ಸಾಲ ಪಡೆಯಲು ಮುಂದಾಗಿದ್ದಾರೆ. ಆದರೆ, ಬಿಲ್ಡರ್ ಗಳು 306 ರ ಮಾರಾಟದ ಒಪ್ಪಂದವನ್ನು ರದ್ದುಗೊಳಿಸಿದರು ಮತ್ತು ಫ್ಲಾಟ್ ಸಂಖ್ಯೆ A301 ಅನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇದರಿಂದ ಬ್ಯಾಂಕ್ ಸಾಲ ನೀಡಲು ನಿರಾಕರಿಸಿದೆ. ಇನ್ನು ಬಿಲ್ಡರ್ ಗಳು ಈ ಫ್ಲಾಟ್ ಕಾಮಗಾರಿಯನ್ನು ಕೂಡ ಪೂರ್ಣಗೊಳಿಸಿಲ್ಲ.
ಇನ್ನು ಶಾಲಿನಿ ಬಿ ಎಂಬುವರು 2019 ರಲ್ಲಿ ಜೆಪಿ ನಗರದ ಸಬ್-ರಿಜಿಸ್ಟ್ರಾರ್ ಆಫೀಸ್ನಲ್ಲಿ ತಮ್ಮ ಹೆಸರಿನಲ್ಲಿ ಫ್ಲಾಟ್ ಅನ್ನು ನೋಂದಾಯಿಸಿದ್ದಾರೆ. ಆದರೆ, ಅದೇ ಮನೆಯನ್ನು ಬಿಲ್ಡರ್ ಗಳು ಬೇರೆ ಮನೆ ಖರೀದಿದಾರರಿಗೆ ಮಾರಾಟ ಮಾಡಿದ್ದಾರೆ. ಈವರು ಈಗ ಎಲ್ಐಸಿ ಹೌಸಿಂಗ್ ಫೈನಾನ್ಸ್ನಿಂದ ಪಡೆದ ವಸತಿ ಸಾಲಕ್ಕೆ ಇಎಂಐ ಪಾವತಿಸುತ್ತಿದ್ದಾರೆ. ಮನೆ ಮಾತ್ರ ತಮ್ಮ ಪಅಲಾಗಿಲ್ಲ.
ಸುರೇಖಾ ಎಂಬುವರು ಕೂಡ 2019 ರಲ್ಲಿ ಬಿಲ್ಡರ್ಗೆ 27 ಲಕ್ಷ ರೂ ಪಾವತಿಸಿ 2BHK ಫ್ಲಾಟ್ ಖರೀದಿಸಲು ಸೈಟ್ ಮಾರಾಟ ಮಾಡಿದ್ದಾರೆ. 2020 ರಲ್ಲಿ ಫ್ಲಾಟ್ ನೀಡುವುದಾಗಿ ಹೇಳಿ ಇಷ್ಟು ದಿನವಾದರೂ ಫ್ಲಾಟ್ ಸಿದ್ಧವಾಗಿಲ್ಲ. ಇನ್ನು ಕೆಲವರು ತಾವು ಫ್ಲಾಟ್ ಅನ್ನು ಖರೀದಿಸುವುದಲ್ಲದೇ, ಸ್ನೇಹಿತರು ಹಾಗೂ ಸಂಬಂಧಿಕರಿಂದಲೂ ಫ್ಲಾಟ್ ಖರೀದಿಸಲು ಉತ್ತೇಜಿಸಿದ್ದಾರೆ. ಈಗ ಅವರುಗಳು ಕೂಡ ತಮ್ಮಿಂದಾಗಿ ಹಣ ಕಳಡೆದುಕೊಂಡಿದ್ದಾರೆ. ಎಲ್ಲರೂ ತಮ್ಮ ಬಳಿ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಗೋಳಾಡಿದ್ದಾರೆ.