22 C
Bengaluru
Sunday, December 22, 2024

ಮನೆ ಖರೀದಿಸುತ್ತಿದ್ದೀರಾ? ಸೇಲ್‌ ಅಗ್ರಿಮೆಂಟ್‌ ಬಗ್ಗೆ ಈ ಮಾಹಿತಿ ತಿಳಿದಿರಲಿ

ಸೇಲ್‌ ಅಗ್ರಿಮೆಂಟ್‌ (ಮಾರಾಟ ಪತ್ರ) ಎಂದರೆ ಆಸ್ತಿ ಮಾರಾಟ ಮಾಡುವ ವ್ಯಕ್ತಿಯು ಖರೀದಿದಾರನಿಗೆ ಆಸ್ತಿಯ ಮಾಲೀಕತ್ವವನ್ನು ಸಾಬೀತು ಪಡಿಸುವ ಹಾಗೂ ಆಸ್ತಿಯ ನಿಖರವಾದ ಹಕ್ಕುಪತ್ರ ವರ್ಗಾವಣೆ ಕುರಿತಾದ ದಾಖಲೆಯಾಗಿದೆ.

ಸಾಮಾನ್ಯವಾಗಿ ಸ್ಥಿರ ಆಸ್ತಿಯನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಸೇಲ್‌ ಫಾರ್‌ ಅಗ್ರಿಮೆಂಟ್‌ (ಆಸ್ತಿ ಮಾರಾಟದ ಬಗ್ಗೆ ಖರೀದಿದಾರ ಹಾಗೂ ಮಾರಾಟಗಾರನ ನಡುವೆ ಮಾತುಕತೆ ನಡೆದ ನಂತರ ಲಿಖಿತ ಒಪ್ಪಂದ) ಹಾಗೂ ಅಗ್ರಿಮೆಂಟ್‌ ಸೇಲ್‌ (ಕಾನೂನು ಪ್ರಕಾರ ಮಾಲೀಕತ್ವ ಹಾಗೂ ಹಕ್ಕುಪತ್ರ ಖರೀದಿದಾರನ ಹೆಸರಿಗೆ ಮಾರಾಟಗಾರನಿಂದ ವರ್ಗಾವಣೆ) ಎಂಬ ಎರಡು ರೀತಿಯ ಒಪ್ಪಂದಗಳು ನಡೆಯುತ್ತವೆ.

ರಿಜಿಸ್ಟ್ರೇಷನ್‌ ಕಾನೂನು ಪ್ರಕಾರ, ಅಗ್ರಿಮೆಂಟ್‌ ಸೇಲ್‌ ಒಪ್ಪಂದವು ಅಗತ್ಯವಾಗಿ ಸ್ಟ್ಯಾಂಪ್‌ ಡ್ಯೂಟಿ ಹಾಗೂ ನೋಂದಣಿಯಾಗಬೇಕು. ಆಸ್ತಿ ನೋಂದಣಿ ದಿನಾಂಕ ಹಾಗೂ ಒಪ್ಪಂದ ಕಾರ್ಯರೂಪಕ್ಕೆ ಬರುವುದು ತಡವಾದರೂ ಅಗ್ರಿಮೆಂಟ್‌ ಸೇಲ್‌ ಆಸ್ತಿತ್ವದಲ್ಲಿರುತ್ತದೆ. ಅಗ್ರಿಮೆಂಟ್‌ ರಿಜಿಸ್ಟ್ರೇಷನ್‌ ಎಂಬುದು ಮಾರಾಟಗಾರನಿಂದ ಖರೀದಿದಾರನಿಗೆ ಆಸ್ತಿಯ ಹಕ್ಕು ವರ್ಗಾಯಿಸುವುದು ಎನ್ನಲಾಗಿದೆ.

ಮನೆ ಖರೀದಿ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೆ ಕನಸಿನ ಮನೆಯ ಮಾಲೀಕತ್ವ ವರ್ಗಾವಣೆ ಪಡೆಯುವುದು ಹಾಗೂ ಸೇಲ್‌ ಅಗ್ರಿಮೆಂಟ್‌ ಬಹು ನಿರೀಕ್ಷೆಯದ್ದಾಗಿರುತ್ತದೆ. ಹಾಗಾಗಿ ಖರೀದಿದಾರನು ಆಸ್ತಿಯ ಎಲ್ಲಾ ಹಕ್ಕುಗಳನ್ನು ಸಂಪೂರ್ಣವಾಗಿ ಯಾವುದೇ ಹಾನಿಯಿಲ್ಲದಂತೆ ಕಾಪಿಡಲಾಗಿದೆ ಹಾಗೂ ಎಲ್ಲ ಹಕ್ಕುಪತ್ರ ವರ್ಗಾವಣೆ ಮಾಡಲಾಗಿದೆ ಎಂದು ಅಗ್ರಿಮೆಂಟ್‌ ಸೇಲ್‌ನಲ್ಲಿ ನಮೂದಿಸಲಾಗಿರುವ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಸಲಹೆ ನೀಡಲಾಗಿದೆ.

ಸೇಲ್‌ ಅಗ್ರಿಮೆಂಟ್‌ ಎಂದರೆ ನಿಮಗೆಷ್ಟು ಗೊತ್ತು?

ಸೆಕ್ಷನ್‌ 54– ಟ್ರಾನ್ಸ್‌ಫರ್‌ ಆಫ್‌ ಪ್ರಾಪರ್ಟಿ ಆ್ಯಕ್ಟ್‌ 1882 (ಟಿಪಿ ಆ್ಯಕ್ಟ್‌) ಪ್ರಕಾರ, ಸ್ಥಿರ ಆಸ್ತಿಯ ಮಾಲೀಕತ್ವದ ವರ್ಗಾವಣೆ ಎಂದು ಸ್ಪಷ್ಟಪಡಿಸಿದೆ. ಇದು ಆಸ್ತಿ ಮಾಲೀಕತ್ವದ ನಿಜವಾದ ವರ್ಗಾವಣೆಯಾಗಿರುತ್ತದೆ. ಆಸ್ತಿಯಲ್ಲಿನ ಎಲ್ಲಾ ಹಕ್ಕುಗಳನ್ನು ಹೊಸ ಮಾಲೀಕ ಪಡೆದುಕೊಳ್ಳುತ್ತಾನೆ. ಸೇಲ್‌ ಅಗ್ರಿಮೆಂಟ್‌ನ ಕೆಲ

ನಿರ್ಣಾಯಕ ಅಂಶಗಳು:
• ಆಸ್ತಿಯ ವರ್ಗಾವಣೆ ಒಳಗೊಂಡಿರುತ್ತದೆ
• ಮಾರಾಟಗಾರ ಆಸ್ತಿಯ ಮಾಲೀಕನಾಗಿದ್ದರೂ ಆಸ್ತಿಯನ್ನು ವರ್ಗಾಯಿಸಬಹುದು
• ಖರೀದಿದಾರ ಆಸ್ತಿಯ ಮಾರಾಟಗಾರನಿಂದ ಎಲ್ಲಾ ರೀತಿಯ ಆಸ್ತಿಯ ಹಕ್ಕುಗಳನ್ನು ಪಡೆದುಕೊಳ್ಳುತ್ತಾರೆ
• ಖರೀದಿದಾರನು ಮಾರಾಟಗಾರನಿಗೆ ಪಾವತಿಸಿದ ಮೊತ್ತ ಅಥವಾ ಪಾವತಿಸಬೇಕಾದ ಬಾಕಿ ಮೊತ್ತವನ್ನು ಪರಿಗಣಿಸಲಾಗುವುದು. ಸಂಪೂರ್ಣವಾಗಿ ಮೊತ್ತ ಪಾವತಿ ಮಾಡಬಹುದು ಅಥವಾ ಮಾತುಕತೆಯಂತೆ ಕಂತು ಪ್ರಕಾರ ಪಾವತಿಸಬಹುದು.

ಒಪ್ಪಂದ ಕಾಯ್ದೆ ಕೂಡ ಮಾರಾಟಗಾರ ಹಾಗೂ ಖರೀದಿದಾರರನ್ನು ಕೆಲವು ಷರತ್ತುಗಳಿಗೆ ಒಳಪಡಿಸಿದೆ. ಒಪ್ಪಂದ ಮಾಡಿಕೊಳ್ಳಲು ಎರಡೂ ಪಾರ್ಟಿಗಳು ಸಮರ್ಥರು ಎಂದು ಸಾಬೀತು ಮಾಡಬೇಕಾಗುತ್ತದೆ. ಕೆಲವು ನಿಯಮಗಳು ಹೀಗಿವೆ:

• ಮಾರಾಟಗಾರ, ಖರೀದಿದಾರ ಇಬ್ಬರೂ ಪ್ರಬುದ್ಧ ವಯಸ್ಕರಾಗಿರಬೇಕು
• ಮಾನಸಿಕ ಕಾಯಿಲೆಗಳಿಲ್ಲದೇ ಸದೃಢ ಮನಸ್ಸಿನವರಾಗಿರಬೇಕು
• ಯಾವುದೇ ಕಾನೂನು ನಿಯಮ ಉಲ್ಲಂಘನೆಯಾಗಿಲ್ಲ.

ಈ ಅಗ್ರಿಮೆಂಟ್ ಸೇಲ್‌, ಮಾನ್ಯ ಹಾಗೂ ಬದ್ಧವಾಗಿರಲು ಮಾರಾಟಗಾರ ಹಾಗೂ ಖರೀದಿದಾರ ಮಾರಾಟಕ್ಕಿಟ್ಟ ಆಸ್ತಿ ಹಾಗೂ ತಮ್ಮ ಕುರಿತಾದ ಸರಿಯಾದ ಹಾಗೂ ಪೂರ್ಣ ವಿವರಗಳನ್ನು ಒದಗಿಸಬೇಕು. ಆಸ್ತಿಯ ಗುರುತು ಹಾಗೂ ವಿವರಣೆಯಲ್ಲಿನ ಸಣ್ಣ ವ್ಯತ್ಯಾಸ ಕೂಡ ಮಾರಾಟಗಾರನ ಹಕ್ಕುಪತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆಸ್ತಿಯ ಮೊತ್ತ ಪಾವತಿಯ ಬಗ್ಗೆ ಹೇಳುವುದಾದರೆ, ಮಾತುಕತೆ ಅಥವಾ ಒಪ್ಪಂದದ ಪ್ರಕಾರ ಪೂರ್ಣ ಪಾವತಿ ಹಾಗೂ ಕಂತು ಪಾವತಿ ಬಗ್ಗೆ ಮಾತುಕತೆ ನಡೆಸಿದ್ದರೆ, ಒಂದು ಬಾರಿ ಎಲ್ಲಾ ಪಾವತಿ ಮುಗಿದ ನಂತರ ಖರೀದಿದಾರನು ಮಾರಾಟಗಾರನಿಂದ ದೃಢೀಕರಣ ಪತ್ರ ಪಡೆದುಕೊಳ್ಳಬೇಕು. ಇದು ಭವಿಷ್ಯದಲ್ಲಿ ಕಾನೂನು ತೊಡಕುಗಳನ್ನು ತಪ್ಪಿಸುತ್ತದೆ.

Related News

spot_img

Revenue Alerts

spot_img

News

spot_img