25.5 C
Bengaluru
Thursday, December 19, 2024

ಉದ್ಯಮಿಗೆ 15 ಲಕ್ಷ ರೂ. ಮೋಸ ಮಾಡಿದ ರಿಯಲ್‌ ಎಸ್ಟೇಟ್‌ ಏಜೆಂಟ್‌

ಮೈಸೂರಿನಲ್ಲಿ ಈ ಮೊದಲೇ ಮಾರಾಟ ಮಾಡಲಾಗಿದ್ದ ಮನೆಯನ್ನು ಮತ್ತೊಮ್ಮೆ ಮಾರಿದ ರಿಯಲ್‌ ಎಸ್ಟೇಟ್‌ ಏಜೆಂಟ್‌, ಉದ್ಯಮಿಯೊಬ್ಬರಿಗೆ 15 ಲಕ್ಷ ರೂಪಾಯಿ ವಂಚನೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ವಿಜಯನಗರ 3ನೇ ಹಂತದಲ್ಲಿರುವ ಸೌಪರ್ಣಿಕಾ ಬ್ಲ್ಯೂ ಬೆಲ್ಸ್‌ ಅಪಾರ್ಟ್‌ಮೆಂಟ್‌ನ ನಿವಾಸಿಯಾದ ಅರವಿಂದ್‌ ಶೆಟ್ಟಿ ವಂಚನೆಗೊಳಗಾದವರಾಗಿದ್ದು, 38 ವರ್ಷದ ಉದಯಗಿರಿ ಮೂಲದ ರಿಯಲ್‌ ಎಸ್ಟೇಟ್‌ ಏಜೆಂಟ್‌ ವಂಚಿಸಿದ ವ್ಯಕ್ತಿ.

ಬೊಗಾಡಿಯಲ್ಲಿರುವ ಎಸ್‌ಬಿಎಂ ಕಾಲೊನಿಯ ಮನೆ ನಂ. 150 ತನ್ನದೆಂದು ನಂಬಿಸಿದ ವ್ಯಕ್ತಿ ಅರವಿಂದ ಶೆಟ್ಟಿ ಅವರಿಂದ 15 ಲಕ್ಷ ರೂಪಾಯಿ ಪಡೆದು ಮಾರಾಟ ಒಪ್ಪಂದ ಪತ್ರ (ಸೇಲ್‌ ಅಗ್ರಿಮೆಂಟ್‌)ವನ್ನೂ ನೀಡಿರುತ್ತಾನೆ.

ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಎಂನ್‌ಕಂಬ್ರನ್ಸ್‌ ಪ್ರಮಾಣಪತ್ರ ಅಥವಾ ಋಣಭಾರ ಪತ್ರ (ಇಸಿ) ಪಡೆದ ಅರವಿಂದ ಶೆಟ್ಟಿ ಅವರಿಗೆ, ರಿಯಲ್‌ ಎಸ್ಟೇಟ್‌ ಏಜೆಂಟ್‌ ಇದೇ ಮನೆಯನ್ನು 2018ರ ಜನವರಿ 11ರಂದೇ ಸತೀಶ್‌ ಎನ್ನುವವರಿಗೆ ಮಾರಾಟ ಮಾಡಿದ್ದಾನೆ ಎಂಬ ಸತ್ಯ ಗೊತ್ತಾಗಿದೆ. ತಮಗೆ ಮೋಸವಾಗಿರುವುದು ತಿಳಿಯುತ್ತಿದ್ದಂತೆ ಅರವಿಂದ್‌ ಸರಸ್ವತಿ ಪುರಂ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

Related News

spot_img

Revenue Alerts

spot_img

News

spot_img