27.8 C
Bengaluru
Monday, July 1, 2024

ರೈತರಿಗೆ ಸರ್ಕಾರದಿಂದ ಬಂಪರ್ ಕೊಡುಗೆ ;4 ಲಕ್ಷಕ್ಕೂ ಅಧಿಕ ಕೃಷಿ ಪಂಪ್‌ಸೆಟ್‌ಗಳ ಸಂಪರ್ಕಗಳನ್ನು ಸಕ್ರಮ;ಸಚಿವ ಕೆ. ಜೆ.ಜಾರ್ಜ್

ಬೆಂಗಳೂರು;ರಾಜ್ಯದಲ್ಲಿರುವ ಒಟ್ಟು ನಾಲ್ಕು ಲಕ್ಷ ರೈತರ ಕೃಷಿ ಪಂಪ್ ಸೆಟ್‌ಗಳನ್ನು ಅಕ್ರಮ-ಸಕ್ರಮ ಮಾಡುವ ಮೂಲಕ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಇಂಧನ ಸಚಿವ ಕೆ. ಜೆ.ಜಾರ್ಜ್ ಹೇಳಿದ್ದಾರೆ.ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ.ಸೆಪ್ಟೆಂಬರ್ 22 ರವರೆಗೆ ನೋಂದಣಿಯಾಗಿರುವ 4 ಲಕ್ಷಕ್ಕೂ ಅಧಿಕ ಕೃಷಿ ಪಂಪ್‌ಸೆಟ್‌ಗಳ ಸಂಪರ್ಕಗಳನ್ನು ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು. ನೊಂದಾಯಿಸಲ್ಪಟ್ಟ 500 ಮೀ. ವ್ಯಾಪ್ತಿಯೊಳಗಡೆ ಇರುವ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವ KJ ಜಾರ್ಜ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. 500 ಮೀ.ಗಿಂತ ಆಚೆ ಇರುವ ಪಂಪ್‌ ಸೆಟ್‌ಗಳಿಗೆ ಕೇಂದ್ರ ಸರ್ಕಾರದ ಶೇ.30 ಹಾಗೂ ರಾಜ್ಯ ಸರ್ಕಾರ ಶೇ.50 ರಷ್ಟು ಸಬ್ಸಿಡಿ ನೀಡಿ, ಸೋಲಾರ್ ಪಂಪ್‌ ಸೆಟ್ ಅಳವಡಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ರೈತರಿಗೆ ಒಟ್ಟು ಶೇ 80 ರಷ್ಟು ಸಹಾಯಧನ ಸಿಗುತ್ತದೆ ಎಂದು ಅವರು ವಿವರಿಸಿದರು.ಈಗಾಗಲೇ ನೋಂದಣಿ ಮಾಡಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಮೂಲಭೂತ ಸೌಕರ್ಯ ಅಳವಡಿಸುವ ಕಾಮಗಾರಿಗಳನ್ನು ವಿದ್ಯುತ್ ಸರಬರಾಜು ಕಂಪನಿಗಳು ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆದು ಜ್ಯೇಷ್ಠತೆ ಆಧಾರದಲ್ಲಿ ಹಂತ ಹಂತವಾಗಿ ಕೈಗೊಳ್ಳುತ್ತಿವೆ ಎಂದರು.2004 ಎಚ್. ರೇವಣ್ಣ ಸಚಿವರಿದ್ದಾಗ 60 ಸಾವಿರ ಹಾಗೂ 2008ರಲ್ಲಿ ಶೋಭಾ ಕರಂದ್ಲಾಜೆ ಅವರು ಇಂಧನ ಸಚಿವರಿದ್ದಾಗ ಇಂಧನ 1.50 ಲಕ್ಷ ಕೃಷಿ ಪಂಪ್ ಸೆಟ್‌ಗಳನ್ನು ಅಕ್ರಮ-ಸಕ್ರಮದಲ್ಲಿ ಕ್ರಮಬದ್ಧ ಗೊಳಿಸಲು ತೀರ್ಮಾನಿಸಲಾಗಿತ್ತು. ಅಂದಿನಿಂ ದಲೂ ಸರಕಾರಗಳು ಅನಧಿಕೃತ ಕೃಷಿ ಪಂಪ್ ಸೆಟ್‌ಗಳನ್ನು ಅಕ್ರಮ-ಸಕ್ರಮದಲ್ಲಿ ಕ್ರಮಬದ್ಧ ಗೊಳಿಸಲು ತೀರ್ಮಾನಿಸಲಾಗಿತ್ತು. ಅಂದಿನಿಂ ದಲೂ ಸರಕಾರಗಳು ಅನಧಿಕೃತ ಕೃಷಿ ಪಂಪ್ ಸೆಟ್‌ಗಳನ್ನು ಸಕ್ರಮಗೊಳಿಸುವುದನ್ನು ಮುಂದುವರಿಸುಕೊಂಡು ಬಂದಿವೆ ಎಂದು ತಿಳಿಸಿದರು.

Related News

spot_img

Revenue Alerts

spot_img

News

spot_img