26.7 C
Bengaluru
Sunday, December 22, 2024

ಹತ್ತುತಿಂಗಳು ತಡವಾಗಿ ಅಪಾರ್ಟ್ಮೆಂಟ್ ಬಿಟ್ಟು ಕೊಟ್ಟಿದ್ದಕ್ಕೆ ಹತ್ತು ಲಕ್ಷ ದಂಡ ಕಟ್ಟಿ ಕೊಟ್ಟ ಬಿಲ್ಡರ್ಸ್…

ಬೆಂಗಳೂರು ಜುಲೈ1:ರೇರಾ, ಬಿಡಿಎ, ಅಪಾರ್ಟ್‌ಮೆಂಟ್, ಬಿಲ್ಡರ್‌ಗಳು, ಬಿಬಿಎಂಪಿ, ಕರ್ನಾಟಕ, ಸರ್ಕಾರ, ನಿರ್ಮಾಣ, ಆದೇಶಗಳು, ಬಡ್ಡಿ, ಆದಾಯ, ಸುದ್ದಿ, ರಿಯಲ್ ಎಸ್ಟೇಟ್, ಬಿಲ್ಡರ್‌ಗಳು,ಎಲ್ಲಾ ಸೌಲಭ್ಯಗಳು ಕೈಗೆಟುಕುವಂತಿರುವ ಮೆಟ್ರೋಪಾಲಿಟನ್ ನಗರಗಳು ಹಾಗು ಅಂತಹ ನಗರಗಳ ಸುತ್ತಮುತ್ತ ಪ್ರದೇಶಗಳಲ್ಲಿ ನಾವು ಒಂದು ಸುಂದರ ಮನೆ ಮಾಡಿಕೊಂಡು ವಾಸ ಮಾಡಬೇಕು ಅನ್ನೊದು ಸಾಮಾನ್ಯವಾಗಿ ಎಲ್ಲರ ಕನಸಾಗಿರುತ್ತದೆ. ಆ ಕನಸು ನನಸು ಮಾಡಿಕೊಳ್ಳಲು ಕೆಲವರು ಸಾಕಷ್ಟು‌ ಶ್ರಮ, ಪ್ರಯತ್ನಗಳನ್ನು ಮಾಡಿ ಒಂದಷ್ಟು ಹಣ ಕೋಡಿಟ್ಟು, ಇಲ್ಲವಾದರೆ ಸಾಲ-ಸೋಲ ಮಾಡಿ ಹಣವನ್ನು ಹೊಂದಿಸಿ ಫ್ಲಾಟ್, ಮನೆ, ಸೈಟ್ ಇತ್ಯಾದಿಗಳ ಖರೀದಿಗೆ ಹಣ ಹೋಡಿಕೆ ಮಾಡಿ ವರ್ಷಾನುಗಟ್ಟಲೆ ಕಾಯುತ್ತಾರೆ.

ಆದ್ರೆ ಇತ್ತ ಹಣ ಕಟ್ಟಿಸಿಕೊಂಡು ಅಪಾರ್ಟ್ಮೆಂಟ್ ಗಳಲ್ಲಿ ಸುಂದರ ಫ್ಲಾಟ್ ಗಳನ್ನು ನಿಮಗೆ ಕೊಡ್ತಿವಿ ಕೇವಲ ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಕಾಲಾವಕಾಶದಲ್ಲಿ ಅಂತ ಹೀಗೆ, ಹತ್ತಾರು ರೀತಿಯಲ್ಲಿ ಕೆಲವು ಡೆವಲಪರ್ ಗಳು, ಬಿಲ್ಡರ್ಸ್ ಗ್ರಾಹಕರಿಗೆ ಆಶ್ವಾಸನೆ ಕೊಟ್ಟು ಹಣವನ್ನು ಹಂತ ಹಂತವಾಗಿ ಇಲ್ಲಾ ಸಾಧ್ಯವಾದರೆ ಒಂದೇ ಪೇಮೆಂಟ್ ನಲ್ಲಿ ಪೀಕಿರುತ್ತಾರೆ. ಆದರೆ ಅವರು ಹೇಳಿದ ಗಡವು ತೀರಿ ಕೆಲ ವರ್ಷಗಳ ಕಳೆದರೂ ಹಣ ಕೊಟ್ಟವರಿಗೆ ಮಾತ್ರ ಅವರ ಕನಸಿನ ಸೂರು ಸಿಗೋದು ಮಾತ್ರ ಇನ್ನೂ ದೂರದ ಮಾತಾಗಿಯೇ ಉಳಿದಿರುತ್ತದೆ.

ಅಂತಹ ಜನ ಸಾಮಾನ್ಯರ ರಕ್ಷಣೆಗೆ ಮತ್ತು ಅವರಿಗೆ ನ್ಯಾಯ ಒದಗಿಸಿಕೊಡಲೆಂದೇ, ತ್ವರಿತವಾಗಿ ದೂರುಗಳ ವಿಲೇವಾರಿಮಾಡಿ ವಿಚಾರಣೆ ನಡೆಸಿ ನೊಂದವರಿಗೆ ಸಹಾಯದ ಹಸ್ತಚಾಚಲು ದೇಶದೆಲ್ಲೆ RERA ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಅಂತೆಯೇ ಕರ್ನಾಟಕದಲ್ಲಿ ಸಹ RERA ಇಂತಹ ಅನೇಕ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಿ, ತನ್ನ ಆದೇಶಗಳನ್ನು ಹೊರಡಿಸುತ್ತಿದೆ.

ಅಪಾರ್ಟ್ಮೆಂಟ್ ಬಿಟ್ಟು ಕೊಡಲು ಸುಮಾರು ಹತ್ತು ತಿಂಗಳು ತಡ ಮಾಡಿದ ಡೆವಲಪರ್

ಇದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ಕರ್ನಾಟಕ ರೇರಾ ಪ್ರಾಧಿಕಾರದಲ್ಲಿ ತಾವು ಮಾಡಿಕೊಂಡಿದ್ದ ಮಾರಾಟ ಒಪ್ಪಂದದಂತೆ ಸಮಯಕ್ಕೆ ಸರಿಯಾಗಿ ನಮಗೆ ಅಪಾರ್ಟ್ಮೆಂಟ್ ಬಿಟ್ಟುಕೊಟ್ಟಿಲ್ಲ ಹಾಗಾಗಿ ನಮಗೆ ನಾವು ಹೋಡಿಕೆ ಮಾಡಿದ್ದ ಹಣಕ್ಕೆ ವಿಳಂಬವಾಗಿರುವ ಸಮಯದ ಬಡ್ಡಿ ಕೊಡಿಸಿಕೊಡಿ ಎಂದು ದೂರು ದಾಖಲಿಸಿದ್ದರು ಈ ಪ್ರಕರಣವನ್ನು ಕೈಗೆತ್ತಿಕೊಂಡ‌ ಪ್ರಾಧಿಕಾರವು ತ್ವರಿತ ಇತ್ಯಾರ್ಥ ಮಾಡಿದ್ದು, ಸುಮಾರು ಹತ್ತುಗಳು ಕಾಲ ತಡವಾಗಿ ಅಪಾರ್ಟ್ಮೆಂಟ್ ಬಿಟ್ಟುಕೊಟ್ಟ ಡೆವಲಪರ್ ಗಳಿಗೆ ತಡವಾಗಿ ಬಿಟ್ಟುಕೊಟ್ಟ ಸಮಯದ ಬಡ್ಡಿಯನ್ನು ಗ್ರಾಹಕರಿಗೆ ಪಾವತಿ ಮಾಡುವಂತೆ ಆದೇಶವಿತ್ತಿದೆ.

ಗ್ರಾಹಕರು ಸೇಲ್ ಡೀಡ್ ಮಾಡಿಕೊಂಡು ಕೊಟ್ಟಿದ್ದ ಹಣಕ್ಕೆ ಸುಮಾರು ಹತ್ತು ಲಕ್ಷ ಬಡ್ಡಿ ಕೊಡಲು ಆದೇಶ

ಪ್ರಕರಣದ ಸಂಕ್ಷಿಪ್ತ ಸಾರಾಂಶ ನೋಡುವುದಾದರೆ

ರೇರಾ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಬೆಂಗಳೂರಿನ ರೇರಾ ಪ್ರಾಧಿಕಾರದಲ್ಲಿ
ಹರೀಶ್ ಕಾಶಿವಿಶ್ವನಾಥನ್ ಮತ್ತು ವಿ ಅಲಮೇಲು ಎಂಬುವವರು ದೂರು ದಾಖಲಿಸಿದ್ದರು. ಬೆಂಗಳೂರು ನಗರ ಅನೇಕಲ್ ತಾಲೂಕಿನ, ಅತ್ತಿಬೆಲೆ ಹೋಬಳಿಯ ವೀರಸಂದ್ರ ಗ್ರಾಮ ಮತ್ತು ಹೆಬ್ಬುಗೋಡಿ ಗ್ರಾಮ ಬಳಿ, SHRIRAM PROPERTS PVT LTD ಎಂಬ ಡೆವಲಪರ್ SHRIRAM SUMMITT ಯೋಜನೆಯಡಿಯಲ್ಲಿ ಸಿದ್ದಪಡಿಸುತ್ತಿದ್ದ ಅಪಾರ್ಟ್ಮೆಂಟ್ ಕೊಂಡು ಕೊಳ್ಳಲು, 15/02/2018ರಂದು ಮಾರಾಟ ಒಪ್ಪಂದ ಮಾಡಿಕೊಂಡಿದ್ದರು, ಅದಕ್ಕೆ ಮುಂಗಡವಾಗಿ 57,11,040ರೂಪಾಯಿ ಅಲಹಣವನ್ನು ಪಾವತಿಸಿರುವುದಾಗಿ ಹೇಳಿಕೊಂಡಿದ್ದರು. ಅಲ್ದೆ ಯೋಜನೆಯು ಈ ಯೋಜನೆಯು 31/12/2019ಕ್ಕೆ ಮುಗಿಯವುದಾಗಿ ಅಂದಿಗೆ ನಿಮ್ಮ ಅಪಾರ್ಟ್ಮೆಂಟ್ ನಿಮ್ಮ ಕೈ ಸೇರುವುದಾಗಿ ತಿಳಿಸಿದ್ದರು ಆದರೆ ಅದು ಆಗಿಲ್ಲ. ಬದಲಾಗಿ ನಮಗೆ13/07/2022ಕ್ಕೆ ಅವರ ಕನಸಿನ ಅಪಾರ್ಟ್ಮೆಂಟ್ ಸಿಕ್ಕಿದೆ. ಆದರೆ ತಮ್ಮ ಒಪ್ಪಂದದ ಪ್ರಕಾರ 31/12/2019ಕ್ಕೆ ನೀಡಬೇಕಾಗುತ್ತು ಆದರೆ ಡೆವಲಪರ್ ತಡವಾಗಿ ಬಿಟ್ಟು ಕೊಟ್ಟಿದ್ದು ನಾವು ಪಾತಿ ಮಾಡಿದ್ದ ಹಣಕ್ಕೆ ವಿಳಂಬದ ಸಮಯಕ್ಕೆ ಪರಿಹಾರವಾಗಿ ಬಡ್ಡಿ ಕೊಡಿಸಿಕೊಡಿ‌ ಎಂದು ಮನವಿ ಮಾಡಿದ್ದರು.

ಹಲವು ಕಾರಣಗಳು ಕೊಟ್ಟು ತಡವಾಗಿ ಅಪಾರ್ಟ್ಮೆಂಟ್ ತಡವಾಗಿ ಕೊಟ್ಟಿದ್ದಕ್ಕೆ ಹಲವು ಕಾರಣ ಕೊಟ್ಟ ಪ್ರಾಜೆಕ್ಟ್ ಡೆವಲಪರ್

ಇನ್ನು ಪ್ರಕರಣ ಪ್ರತಿವಾದಿಗಳು ಡೆವಲಪರ್ ತಮ್ಮ ಯೋಜನೆ ವಿಳಂಬಕ್ಕೆ ಹಲವು ಕಾರಣಗಳನ್ನು ಕೊಟ್ಟು ಪ್ರಕರಣದ ವಜಾ‌ಮಾಡಲು ಪ್ರಾಧಿಕಾರದ ಮುಂದೆ ಮನವಿ ಮಾಡಿದ್ದರು, ಪ್ರಮುಖದ ಕಾರ, ಕೋವಿಡ್ 19, ಕಾರ್ಮಿರ ಸಮಸ್ಯೆ, ಕಚ್ಚಾ ಸಾಮಗ್ರಿಗಳ‌ ಕೊರತೆ ಇತ್ಯಾದಿಗಳನ್ನು ಪ್ರಾಧಿಕಾರದ ಮುಂದೆ ಪ್ರಸ್ತಾಪ ಮಾಡಿದ್ದರು. ಅದಕ್ಕೆ ಈ ಹಿಂದೆಯೇ ಕೋವಿಡ್ 19 ಕಾರಣಕ್ಕೆ ಡೆವಲಪರ್ ಗಳಿಗೆ 9ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು ಅದನ್ನು‌ಮೀರಿದ್ದರು. ಅಲ್ಲದೆ ಅಪಾರ್ಟ್ಮೆಂಟ್ ಯೋಜನೆ ಭಾಗವಾಗಿ ಕೆಲವು ಪರವಾನಗಿ ವಿಚಾರಗಳನ್ನು ಗ್ರಾಹಕರ ಗಮನಕ್ಕೆತಾರದೆ ಮುಚ್ವಿಟ್ಟಿದ್ದರು ಕೋಡ.

ದೂರುದಾರನವಿ ಪುರಸ್ಕಾರ ಮಾಡಿ, ಯೋಜನೆ ತಯಾರಕರ ಮನವಿ ತಿರಸ್ಕರಿಸಿದ ಪ್ರಾಧಿಕಾರ

ಈ ಎಲ್ಲವನ್ನೂ ಗಮನುಸಿ ವಾದಿ ಹಾಗೂ ಪ್ರತಿವಾದಿಗಳ ವಾದಗಳನ್ನು ಆಲಿಸಿದ ರೇರಾ ಪ್ರಾಧಿಕಾರವು ಡೆವಲಪರ್ ಗಳು ತಡವಾಗಿ ಅಪಾರ್ಟ್ಮೆಂಟ್ ಬಿಟ್ಟುಕೊಟ್ಟಿದ್ದು ಸರಿಯಲ್ಲವೆಂದು ತೀರ್ಮಾನಿಸಿ ಅವರ ವಾದನ್ನು ತಿರಸ್ಕಾರಿಸಿ, ದೂರುದಾರ ಮನವಿ ಪುರಸ್ಕಾರ ಮಾಡಿದ್ದು, ತಡವಾಗಿ ಬಿಟ್ಟುಕೊಟ್ಟ ಕಾಲವಾದಿವರೆಗೆ, ದೂರುದಾರರು ಪಾವತಿ ಮಾಡಿದ್ದ ಹಣಕ್ಕೆ ಎಂಸಿಎಲ್​ಆರ್ +2% ದರದ ಆಧಾರದ ಮೇಲೆ ಬಡ್ಡಿ ಲೆಕ್ಕ ಮಾಡಲಾಗಿತ್ತು. ಅಂತೆಯೇ 31/12/2019 ರಿಂದ 13/07/2022ರವರೆಗೆ ದೂರುದಾರರು ಪಾತಿ ಮಾಡಿದ್ದ ಹಣಕ್ಕೆ ಆಗುವ ಬಡ್ಡಿ, ಸುಮಾರು 10,14,404 ರೂಪಾಯಿಗನ್ನು ಆದೇಶ ದಿನದಿಂದ 60ದಿನಗಳ ಒಳಗೆ ದೂರುದಾರು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಆದೇಶಿಸಿದೆ.

ಲಕ್ಷ್ಮೀಪತಿ, ಹಿರಿಯ ವರದಿಗಾರ

Related News

spot_img

Revenue Alerts

spot_img

News

spot_img