#Budget Session # Parliament # Today# Important Acts #Enacted
ದೆಹಲಿ;ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು,ಸಂಸತ್ತಿನ ಬಜೆಟ್ ಅಧಿವೇಶನ ಬುಧವಾರ ಆರಂಭಗೊಳ್ಳಲಿದೆ. ಮೊದಲ ದಿನ ರಾಷ್ಟ್ರಪತಿಗಳ ಭಾಷಣ, ಗುರುವಾರ ಬಜೆಟ್ ಮಂಡನೆ, ಶುಕ್ರವಾರದಿಂದ ಚರ್ಚೆಗಳು ಶುರುವಾಗಲಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೊಸ ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಮೊದಲ ಜಂಟಿ ಭಾಷಣ & ಮೊದಲ ಬಜೆಟ್ ಇದಾಗಿದೆ. ಅಲ್ಲದೆ, ಮೋದಿ ಸರ್ಕಾರದ 2ನೇ ಅವಧಿಯ ಕೊನೆ ಅಧಿವೇಶನವಾಗಿದ್ದು, ಫೆ.9ಕ್ಕೆ ಕೊನೆಗೊಳ್ಳಲಿದೆ. ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯದ್ದು ಪೂರ್ಣ ಬಜೆಟ್ ಅಲ್ಲ. ಹೀಗಾಗಿ ಇಂದು ಆರ್ಥಿಕ ಸಮೀಕ್ಷೆ ಪ್ರಕಟವಾಗುವುದಿಲ್ಲ.ಗುರುವಾರ ಬೆಳಿಗ್ಗೆ 11 ಕ್ಕೆ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ,ಈ ಬಾರಿ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ದಿಶಾ-ನಿರ್ದೇಶಕ್ ಬಾತೇನ್’ ಮೂಲಕ ಬಜೆಟ್ ಮಂಡಿಸಲಿದ್ದಾರೆ. ಪ್ರತಿ ದಿನವೂ ಪ್ರಗತಿಯ ಹೊಸ ಎತ್ತರಗಳನ್ನು ದಾಟುವ ಮೂಲಕ ದೇಶವು ಮುನ್ನಡೆಯುತ್ತಿದೆ ಎಂಬ ದೃಢ ನಂಬಿಕೆ ನನಗಿದೆ. ಸರ್ವತೋಮುಖ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಗುತ್ತಿದೆ. ಜನರ ಆಶೀರ್ವಾದದಿಂದ ಈ ಯಾತ್ರೆ ಹೀಗೆ ಮುಂದುವರಿಯಲಿದೆ ಎಂದು ಪ್ರಧಾನಿ ಹೇಳಿದರು.
ಮಹತ್ವದ ಕಾಯಿದೆಗಳು ಜಾರಿ;ಮೋದಿ
ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತನಾಡಿದ್ದು, ಸುಗಮ ಕಲಾಪಕ್ಕೆ ವಿಪಕ್ಷಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಹಿಂದೆ ನಾರಿಶಕ್ತಿ ವಂದನ್ ಕಾಯಿದೆ ಸೇರಿದಂತೆ ಹಲವು ಕಾಯಿದೆಗಳನ್ನು ಜಾರಿಗೆ ತಂದಿದ್ದೇವೆ. ಈ ಬಾರಿಯ ಅಧಿವೇಶನದಲ್ಲೂ ಮಹತ್ವದ ಕಾಯಿದೆಗಳನ್ನು ಜಾರಿಗೊಳಿಸುತ್ತೇವೆ ಎಂದು ಮೋದಿ ತಿಳಿಸಿದರು. ರಾಷ್ಟ್ರಪತಿ ದೌಪದಿ ಮುರ್ಮು ಅವರ ಮಾರ್ಗದರ್ಶನದಲ್ಲಿ ನಾಳೆ ನಿರ್ಮಳಾ ಸೀತಾರಾಮನ್ ಅವರ ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದರು.