17.7 C
Bengaluru
Thursday, January 23, 2025

ಸಾಮಾನ್ಯ ಜನರ ಬಜೆಟ್‌ ನಿರೀಕ್ಷೆಗಳು;ಬಜೆಟ್‌2023-24

 

2023-24ನೇ ಸಾಲಿನ ಕೇಂದ್ರ ಬಜೆಟ್‌ನತ್ತ ಎಲ್ಲರ ಗಮನವಿದೆ. ಈ ನಿಟ್ಟಿನಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಜನರು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ. ಬುಧವಾರ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವರು ಮಂಡಿಸಲಿದ್ದಾರೆ.ಈ ಬಾರಿಯೂ ಜನ ಪರವಾದ ಬಜೆಟ್ ನೀಡಲು ಮುಂದಾಗಿದ್ದೇವೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷವೂ ಕಾಗದರಹಿತ ರೂಪದಲ್ಲಿ ಬಜೆಟ್ ಮಂಡಿಸಲಿದ್ದಾರೆ. 2023-24ರ ಈ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಸಾಮಾನ್ಯ ಜನರು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.ಎಲ್ಲ ಜಿಲ್ಲೆಗಳಿಗೂ ಪ್ರತಿನಿತ್ಯ ನೀಡಲು ಜನ ಪರವಾಗಿ ಸರ್ವ ವರ್ಗದ ಜನರಿಗೂ ನ್ಯಾಯ ಒದಗಿಸಲು ಮುಂದಾಗಿದ್ದೇವೆ. ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಮಂಡಿಸಲು ಸಜ್ಜಾಗಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಈ ಬಾರಿಯ ಬಜೆಟ್​ನಲ್ಲಿ ರಾಜ್ಯ ಸರ್ಕಾರ ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುವ ಯೋಜನೆ ರೂಪಿಸಿದೆ. ರೈತರು, ಕಾರ್ಮಿಕರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಒಂದು ಲಕ್ಷ ನೀಡಿ, ಬ್ಯಾಂಕ್ ಜೋಡಿಸಿ ಅವರನ್ನು ಸ್ವಾವಲಂಬಿಯಾಗಿಸಲು ಎಂಡ್ ಟು ಎಂಡ್ ಅಪ್ರೋಚ್ ಇರುವ ಕಾರ್ಯಕ್ರಮಗಳು ಹಾಗೂ ಸ್ತ್ರೀ ಸಾಮರ್ಥ್ಯ ಯೋಜನೆ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಕ್ಕೆ 5 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲು ಈ ಬಜೆಟ್​ನಲ್ಲಿ ನೀಲಿ ನಕ್ಷೆ ಸಿದ್ಧವಾಗಿದೆ ಎಂದರು.   ಮಹಿಳೆಯರು,ವಿದ್ಯಾರ್ಥಿಗಳ ನಿರೀಕ್ಷೆಗಳೇನು ಎಂದು ನೋಡೋಣ ಸಾಲಿನಬಜೆಟ್‌ನಲ್ಲಿಗೃಹಿಣಿಯರು,ಪ್ರಯಾಣಿಕರು,ಮಹಿಳೆಯರು,ವಿದ್ಯಾರ್ಥಿಗಳ ನಿರೀಕ್ಷೆಗಳೇನು ಎಂದು ನೋಡೋಣ

ಗೃಹಿಣಿಯರ ಬೇಡಿಕೆಗಳೇನು,
ಜೊತೆಗೆ ಹೆಚ್ಚುತ್ತಿರುವ ಹಣದುಬ್ಬರ ತಮ್ಮ ಮನೆ ನಿರ್ವಹಣೆಗೆ ಸಮಸ್ಯೆಯನ್ನುಂಟು ಮಾಡುತ್ತಿದೆ. ತಮ್ಮ ಖರ್ಚನ್ನು ನಿಯಂತ್ರಿಸಲು ಅವರಿಗೆ ಸವಾಲಾಗುತ್ತಿದೆ ಎಂದು ಗೃಹಿಣಿಯರು ಹೇಳಿದ್ದಾರೆ. ಆಹಾರ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳಂತಹ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು ತಮ್ಮ ಸಮಸ್ಯೆಗಳು ಉಲ್ಬಣಗೊಂಡಿವೆ ಎಂದು ಗೃಹಿಣಿಯರು ಹೇಳಿದ್ದಾರೆ.ಸ್ತ್ರೀಶಕ್ತಿ ಸಂಘಗಳಿಗೆ ಬಲ ತುಂಬುವ, ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿರೀಕ್ಷೆ. ಜತೆಗೆ ಕೌಟುಂಬಿಕ ನಿರ್ವಹಣೆಗೆ ಸಹಾಯಧನ ನೀಡುವ ವಿಚಾರವೂ ಚರ್ಚೆಯಲ್ಲಿದೆ.

ವಿದ್ಯಾರ್ಥಿಗಳ ನಿರೀಕ್ಷೆಗಳೇನು?
ಯುವಕರು ಸ್ವಂತ ಕಾಲ ಮೇಲೆ ನಿಂತು ಉದ್ಯಮ ಬೆಳೆಸಬೇಕು ಎಂಬ ಆಶಯದಡಿ ನವೋದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ. ಈ ಉದ್ದೇಶಕ್ಕೆ ವಿಶೇಷ ಉತ್ತೇಜನಕಾರಿ ಕ್ರಮ.ಇನ್ನೂ ವಿದ್ಯಾರ್ಥಿಗಳು ಪರೀಕ್ಷೆಗಳ ಸಂದರ್ಭದಲ್ಲಿ ಪ್ರತ್ಯೇಕ ರೈಲುಗಳನ್ನು ಓಡಿಸಬೇಕೆಂದು ಒತ್ತಾಯಿಸಿದರು. ಅವರು ಸಾಮಾನ್ಯವಾಗಿ ಸ್ಪರ್ಧಾತ್ಮಕ ಅಥವಾ ಇತರ ಪರೀಕ್ಷೆಗಳಿಗಾಗಿ ಇತರ ನಗರಗಳಿಗೆ ಪ್ರಯಾಣಿಸಬೇಕಾಗುತ್ತದೆ ಮತ್ತು ಸಾಮಾನ್ಯ ಪ್ಯಾಸೆಂಜರ್ ರೈಲುಗಳಲ್ಲಿ ಸೀಟುಗಳನ್ನು ಕಾಯ್ದಿರಿಸಲು ಕಠಿಣವಾಗಿರುತ್ತದೆ. ಇದರಿಂದಾಗಿ ನಮಗೆ ಪರೀಕ್ಷೆ ಸಮಯದಲ್ಲಿ ಪ್ರತ್ಯೇಕ ರೈಲು ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.
ಮಹಿಳಾ ಪ್ರಯಾಣಿಕರು ಏನು ಬಯಸುತ್ತಾರೆ?
ರೈಲುಗಳಲ್ಲಿ ಮಹಿಳೆಯರಿಗಾಗಿ ಹೆಚ್ಚು ಸುರಕ್ಷತೆ ಇರುವುದು ಮುಖ್ಯವಾಗಿದೆ. ಹೀಗಾಗಿ ರೈಲುಗಳಲ್ಲಿ ಮಹಿಳೆಯರಿಗೆ ಹೆಚ್ಚು ವ್ಯವಸ್ಥೆ ಮಾಡಬೇಕು.ಜೊತೆಗೆ ರೈಲುಗಳಲ್ಲಿ ಉತ್ತಮ ಆಹಾರವನ್ನು ಒದಗಿಸಬೇಕು.
ರೈಲು ಪ್ರಯಾಣಿಕರ ನಿರೀಕ್ಷೆಗಳೇನು?
2023-24ರ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು 300-400 ಹೊಸ ವಂದೇ ಭಾರತ್ ರೈಲುಗಳನ್ನು ಘೋಷಿಸಬಹುದು. ರೈಲ್ವೆ ಸಚಿವಾಲಯವು ಈ ಕುರಿತಾಗಿ ಅಂತಿಮ ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಇದಕ್ಕಾಗಿಯೇ ಬಜೆಟ್‌ನಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ಸುಮಾರು 1.35 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬಹುದು.
ಉದ್ಯೋಗ ಸೃಷ್ಟಿ ಮಾಡಿ
ಪ್ರಸ್ತುತ ದೇಶದಲ್ಲಿ ಉದ್ಯೋಗ ಕಡಿತ ಮುಂದುವರಿದಿದೆ. ಭಾರತ ಮಾತ್ರವಲ್ಲ ಜಾಗತಿಕವಾಗಿ ಹಲವಾರು ಸಂಸ್ಥೆಗಳು ತಮ್ಮ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ, ಮುಂದೆ ಕಾಡಲಿರುವ ಆರ್ಥಿಕ ಹಿಂಜರಿತವನ್ನು ಎದುರಿಸುವ ನಿಟ್ಟಿನಲ್ಲಿ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಈ ನಡುವೆ ಭಾರತದಲ್ಲಿ ನಿರುದ್ಯೋಗ ದರ ಹೆಚ್ಚಳವಾಗಿದೆ.ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಲು ಕ್ರಮಕೈಗೊಳ್ಳಬೇಕು ಎಂಬವುದು ಸಾಮಾನ್ಯ ಜನರ ಬೇಡಿಕೆಯಾಗಿದೆ.

Related News

spot_img

Revenue Alerts

spot_img

News

spot_img