20.5 C
Bengaluru
Tuesday, July 9, 2024

ಬಜೆಟ್ 2023:ರಿಯಲ್ ಎಸ್ಟೇಟ್‌ಕ್ಷೇತ್ರಕ್ಕೆ ಏನೆಲ್ಲಾ ವಿನಾಯಿತಿ ಸಿಗಬೇಕು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತ ಸರ್ಕಾರದ ಅವಧಿಯಲ್ಲಿ ತಮ್ಮ ಕೊನೆಯ ಪೂರ್ಣ ಬಜೆಟ್ ಅನ್ನು 2023ರ ಫೆಬ್ರವರಿ 1 ರಂದು ಮಂಡನೆ ಮಾಡಲಿದ್ದಾರೆ. ಇದು ಪ್ರಸ್ತುತ ಸರ್ಕಾರದ ಕೊನೆಯ ಪೂರ್ಣ ಬಜೆಟ್‌ ಆಗಿರುವುದರಿಂದ ಜನರಲ್ಲಿ ನಿರೀಕ್ಷೆಗಳು ಹೆಚ್ಚಿವೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಉದ್ಯೋಗಿಗಳು, ಮಕ್ಕಳ ಶಿಕ್ಷಣ, ಗೃಹ ಸಾಲ, ಆರೋಗ್ಯ ವಿಮೆ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗುವ ನಿರೀಕ್ಷೆ ಇದೆ.

ಕೃಷಿ, ಕೈಗಾರಿಕೆ, ಮೂಲಭೂತ ಸೌಕರ್ಯ, ಆರೋಗ್ಯ ಸೇವೆಗಳು , ಸೇನಾ ಮೂಲವೆಚ್ಚಗಳು ಸಾಕಷ್ಟು ದೊಡ್ಡ ಪ್ರಮಾಣದ ಅನುದಾನದ ನಿರೀಕ್ಷೆಯಲ್ಲಿವೆ. ಅದೇ ರೀತಿಯಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದ ಸಾಕಷ್ಟು ತೊಂದರೆಗೆ ಒಳಗಾಗಿರುವ ಜಾಗತಿಕ ಸಾಂಕ್ರಾಮಿಕದ ನೆರಳಿನಿಂದ ಚೇತರಿಸಿಕೊಳ್ಳುತ್ತಿರುವ ಭಾರತೀಯ ರಿಯಲ್ ಎಸ್ಟೇಟ್ ವಲಯವು 2023 ರ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಭರವಸೆಯನ್ನು ಹೊಂದಿದೆ. ಕಳೆದ ತಿಂಗಳುಗಳಲ್ಲಿ ಭಾರತದಾದ್ಯಂತ ರಿಯಲ್ ಎಸ್ಟೇಟ್ ಬೇಡಿಕೆಯು ಆರೋಗ್ಯಕರ ಉತ್ಕರ್ಷವನ್ನು ಕಂಡಿದ್ದರೂ, ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ವಲಯವು ಕೆಲವು ನಿರ್ದಿಷ್ಟತೆಯನ್ನು ಪಡೆಯಲು ಆಶಿಸುತ್ತಿದೆ.

ಭಾರತದ ಕೇಂದ್ರ ಬಜೆಟ್‌ನಲ್ಲಿ ನಾಲ್ಕು ಪ್ರಮುಖ ವಿಷಯಗಳನ್ನು ಕಾಣಬಹುದು ರಿಯಲ್‌ ಎಸ್ಟೇಟ್‌, ನೇರ ಮತ್ತು ಪರೋಕ್ಷ ತೆರಿಗೆ, ಕೃಷಿ, ಮೂಲಭೂತ ಸೌಕರ್ಯಗಳು ಒಳಗೊಂಡಿವೆ. ಇದರಲ್ಲಿ ಪ್ರಮುಖವಾದ ರಿಯಲ್‌ ಎಸ್ಟೇಟ್‌ ಹಾಗೂ ಹೌಸಿಂಗ್‌ ಕ್ಷೇತ್ರದಲ್ಲಿ ಏನೆಲ್ಲಾ ನಿರೀಕ್ಷೆಗಳನ್ನು ಹೊಂದಿದೆ ಎಂಬುದರ ಕುರಿತಾಗಿ ಆರ್ಥಿಕ ತಜ್ಞ ಎಸ್‌. ನರೇಂದ್ರ ಹಂಚಿಕೊಂಡಿದ್ದಾರೆ.

ಪಿಎಂವೈ ಯೋಜನೆಗೂ, ಜಿಎಸ್‌ಟಿಯಲ್ಲಿ ಧ್ವಂಧ್ವ ನೀತಿ
ಪಿಎಂವೈ ಯೋಜನೆಯಲ್ಲಿ ಕ್ಯಾಶ್ ಲಿಂಕ್ ಸಬ್ಸಿಡಿ ಸ್ಕೀಮ್‌ನಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಎಂಐ ಜೀವನ್ , ಎಂಐ ಜೀವನ್ 2 ಯೋಜನೆಯಲ್ಲಿ ಏರಿಯಾ ರಿಸ್ಟ್ರಿಕ್ಷನ್‌ ಅಡ್ಡಿಯಾಗಿದೆ. 90 ಸ್ಕ್ವೇರ್‌ ಮೀಟರ್ ಹಾಗೂ 110 ಸ್ಕ್ವೇರ್‌ ಮೀಟರ್ ಕಾರ್ಪೋರೇಟ್ ಏರಿಯಾ ರಿಸ್ಟ್ರಿಕ್ಷನ್ ಇದೆ. ಆದ್ರೆ ಅದೇ ಜಿಎಸ್‌ಟಿ ಸ್ಕೀಮ್‌ನಲ್ಲಿ ವಿಭಿನ್ನವಾದ ನೀತಿ ಕಾಣಬಹುದು. 90 ಸ್ಕ್ವೇರ್ ಮೀಟರ್ ನಾನ್ ಮೆಟ್ರೋಗಳಿಗೆ, 110 ಮೀಟರ್‌ ಮೆಟ್ರೋ ಸಿಟಿಗಳಿಗೆ ಅನ್ವಯವಾಗುತ್ತದೆ.

ಹೋಮ್ ಲೋನ್ ದರಗಳಲ್ಲಿ ಬದಲಾವಣೆಗಳು
ಗೃಹ ಸಾಲದ ಬಡ್ಡಿ ದರಗಳು ವಸತಿ ಬೇಡಿಕೆಯ ಮೇಲೆ ನೇರ ಪರಿಣಾಮ ಬೀರುವುದರಿಂದ. ಕಡಿಮೆ ಗೃಹ ಸಾಲದ ಬಡ್ಡಿ ದರಗಳು ಮನೆ ಖರೀದಿದಾರರನ್ನು ಆಸ್ತಿ ಖರೀದಿಗೆ ಹೋಗಲು ಪ್ರೋತ್ಸಾಹಿಸುತ್ತವೆ. ಕೊರೊನಾವೈರಸ್ ಹಿನ್ನೆಲೆಯಲ್ಲಿ ವ್ಯಾಪಾರದ ಮನೋಭಾವ ಕಡಿಮೆಯಾಗಿದ್ದು, ಜನರು ಆಸ್ತಿ ಖರೀದಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಆದಾಗ್ಯೂ, ಸಾಂಕ್ರಾಮಿಕ ರೋಗವು ಕಡಿಮೆಯಾದ ನಂತರ, ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಬಡ್ಡಿದರಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದವು, ಆದರೆ ಕಡಿತವು ಗಮನಾರ್ಹವಾಗಿರಲಿಲ್ಲ.

ಬಜೆಟ್ ಶಿಫಾರಸುಗಳಲ್ಲಿ, ಕೇಂದ್ರ ಸರ್ಕಾರವು ಕಡಿಮೆ ಡೌನ್ ಪೇಮೆಂಟ್ ಅಗತ್ಯತೆಗಳು, ಸಣ್ಣ ಗೃಹ ಸಾಲಗಳಿಗೆ ವಿಶೇಷ ಪ್ರೋತ್ಸಾಹಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕಡಿಮೆ ಬಡ್ಡಿದರಗಳು ಇತ್ಯಾದಿಗಳನ್ನು ಸಕ್ರಿಯಗೊಳಿಸುವ ಕ್ರಮಗಳನ್ನು ಘೋಷಿಸಬಹುದು.

ಬಾಡಿಗೆ ಮನೆಗೆ ತೆರಿಗೆ ವಿನಾಯಿತಿ ಶೇಕಡಾ 100ರಷ್ಟು ನೀಡಬೇಕು
ಇನ್ನು ಬಹು ಹೆಚ್ಚಿನ ಜನರ ಬೇಡಿಕೆಯಾಗಿರುವ ಬಾಡಿಗೆ ಮನೆಯ ಮೇಲಿನ ತೆರಿಗೆ ವಿನಾಯಿತಿಯೂ ಬೇಕಿದೆ. ವಾರ್ಷಿಕವಾಗಿ 12 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿ ಬೇಕಿದೆ. ಆದಾಯ ತೆರಿಗೆಯಲ್ಲಿ 24B ಸೆಕ್ಷನ್‌ನಲ್ಲಿರುವ ತೆರಿಗೆ ವಿನಾಯಿತಿ 2 ಲಕ್ಷದಿಂದ 5 ಲಕ್ಷ ರೂಪಾಯಿಗೆ ಏರಿಕೆಯಾಗಬೇಕಿದೆ.

ಸಿಮೆಂಟ್‌, ಉಕ್ಕಿನ ಮೇಲಿನ ಜಿಎಸ್‌ಟಿ ದರ ಇಳಿಕೆಯಾಗಬೇಕು
ಪ್ರಸ್ತುತ ಹೌಸಿಂಗ್‌ ಅತ್ಯಗತ್ಯ ವಸ್ತುಗಳಾದ ಸಿಮೆಂಟ್ ಮೇಲೆ 28% ಜಿಎಸ್‌ಟಿ ವಿಧಿಸಲಾಗಿದೆ. ಅದೇ ರೀತಿಯಲ್ಲಿ ಕಬ್ಬಿಣದ ಮೇಲೆ 18% ತೆರಿಗೆಯನ್ನು ಸಹ ಕಾಣಬಹುದು. ಆದ್ರೆ ರಿಯಲ್ ಎಸ್ಟೇಟ್‌ ಕ್ಷೇತ್ರವನ್ನ ಬೂಸ್‌ ಮಾಡಲು, ಹೌಸಿಂಗ್ ಮೇಲೆತ್ತಲು ಈ ಎರಡರ ಮೇಲಿನ ಜಿಎಸ್‌ಟಿ ದರ ಸಡಿಲಗೊಳ್ಳಬೇಕು ಎಂಬುದು ಎಸ್‌. ನರೇಂದ್ರ ಅಭಿಪ್ರಾಯವಾಗಿದೆ. ಸಿಮೆಂಟ್‌ ಮೇಲಿನ ಜಿಎಸ್‌ಟಿಯನ್ನು 28 ರಿಂದ 18 ಪರ್ಸೆಂಟ್‌ಗೆ ಇಳಿಸಬೇಕು.

Related News

spot_img

Revenue Alerts

spot_img

News

spot_img