21.1 C
Bengaluru
Monday, December 23, 2024

ಲಂಚ ಪ್ರಕರಣ:ರಾಜ್ಯದ ಮಹಿಳಾ ಸಹಾಯಕ ಆಯುಕ್ತರು,ಸಿಬ್ಬಂದಿಗೆ 4 ವರ್ಷ ಜೈಲು!

#Bribery #Women assistant commissioner #staff #jailed #4 years
ತುಮಕೂರು: ಅಕ್ರಮವಾಗಿ ಬೇರೊಬ್ಬರಿಗೆ ಜಮೀನಿನ ಖಾತೆ ಬದಲಾವಣೆ ಮಾಡಿಕೊಟ್ಟಿದ್ದ ಮಾಡಿಸಿಕೊಳ್ಳಲು ಪ್ರಕರಣದಲ್ಲಿ ಇದನ್ನು ಸರಿಪಡಿಸಲು ಲಂಚಕ್ಕೆ ತಹಶೀಲ್ದಾರ್ ಬೇಡಿಕೆ ಇಟ್ಟಿದ್ದ ಪ್ರಕರಣವೊಂದರಲ್ಲಿ ತುಮಕೂರಿನ ಪರಿಶೀಲಿಸಿದಾಗ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಉಪ ವಿಭಾಗಾಧಿಕಾರಿಗಳಗಿದ್ದ ತಬಸುಮ್ ಜಹೇರಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ತುಮಕೂರು ಉಪ ವಿಭಾಗಾಧಿಕಾರಿಯಾಗಿದ್ದ ತಬಸುಮ್ ಜಹೇರಾ ಹಾಗೂ ಬೆಳ್ಳಾವಿ ನಾಡಕಚೇರಿಯ ಉಪ ತಹಶೀಲ್ದಾರ್ ಶಬೀರ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ತಲಾ 4 ವರ್ಷ ಜೈಲುಶಿಕ್ಷೆ ವಿಧಿಸಿದ್ದು, 20,000 ರೂ. ದಂಡವನ್ನೂ ವಿಧಿಸಿದೆ. ಬೆಂಗಳೂರಿನ ವಿ.ಟಿ.ಜಯರಾಮ್ ಎಂಬುವವರಿಂದ ಒಂದು ಎಕರೆ ಭೂಮಿಯನ್ನು ಖಾತೆ ಮಾಡಿಕೊಡಲು 120,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು.

ಈ ಘಟನೆಯು 2017ರಲ್ಲಿ ನಡೆದಿತ್ತು.ವಿಟಿ ಜಯರಾಂ ಎಂಬುವವರು, ತಮ್ಮ ತಂದೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ತನ್ನ ತಂದೆಯ ಹೆಸರಿಗೆ ಜಮೀನಿನ ದಾಖಲೆಗಳನ್ನು ವರ್ಗಾಯಿಸಿ ಮಾಲೀಕತ್ವವನ್ನು ಮರುಸ್ಥಾಪಿಸುವಂತೆ ಕೋರಿ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದೆ. ಎಸಿ ತನ್ನ ಕಚೇರಿಯ ಸಿಬ್ಬಂದಿ ಶಬ್ಬೀರ್ ಅವರನ್ನು ಭೇಟಿಯಾಗುವಂತೆ ಕೇಳಿದ್ದರು. ಇದನ್ನು ಮಾಡಿಕೊಡಲು 35,000 ರೂ. ಲಂಚ ನೀಡುವಂತೆ ಕೇಳಿದರು ಎಂದು ದೂರಿದ್ದಾರೆ.ಲಂಚ ಕೊಟ್ಟರೂ ಜಯರಾಂ ಅವರನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುವಂತೆ ಮಾಡಲಾಗಿತ್ತು. ಈ ನಡುವೆ ಶಬ್ಬೀರ್ ಇನ್ನಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ, ಭೇಟಿಯೊಂದರ ವೇಳೆ ಅಧಿಕಾರಿಗಳ ನಡುವಿನ ಸಂಭಾಷಣೆಯನ್ನು ಜಯರಾಂ ರೆಕಾರ್ಡ್ ಮಾಡಿದರು. ಮೇ 23, 2017ರಂದು ಜಯರಾಂ ಅವರು ಆಡಿಯೋ ಟೇಪ್ ಸಹಿತ ಎಸಿಬಿಗೆ ದೂರು ನೀಡಿದ್ದರು.ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಅವರು ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದರು ಮತ್ತು ಅವರಿಗೆ ತಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು.

Related News

spot_img

Revenue Alerts

spot_img

News

spot_img