#Bribe #Lokayuktha #BBMP #Corruption
ಬೆಂಗಳೂರು, ಆ. 04: ಮುಕುಂದ ಡೆವಲಪರ್ಸ್ ನ ಅಪಾರ್ಟ್ ಮೆಂಟ್ ಗಳಿಗೆ ಖಾತಾ ಮಾಡಿಕೊಡಲು ಖಾಸಗಿ ವ್ಯಕ್ತಿ ಮೂಲಕ ಐದು ಲಕ್ಷ ಲಂಚ ಸ್ವೀಕರಿಸಿದ ಮಹದೇವಪುರ ವಲಯದ ಬಿಬಿಎಂಪಿ ಕಚೇರಿ ಕಂದಾಯ ನಿರೀಕ್ಷಕ ಮತ್ತು ಅತನ ಏಜೆಂಟ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಿಬಿಎಂಪಿ ಮಹದೇವಪುರ ವಲಯದ ಕಂದಾಯ ನಿರೀಕ್ಷಕ ನಟರಾಜ್, ಅತನ ಖಾಸಗಿ ಏಜೆಂಟ್ ಪವನ್ ಬಂದಿತ ಅರೋಪಿಗಳು. ಇವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ Crime No.33/2023 u/s 7(a) PC Act.1988. Bangalore city ಕೇಸು ದಾಖಲಿಸಲಾಗಿದೆ.
79 Flats Khata issue and demand for bribe:
ಮುಕ್ತ ಡೆವಲಪರ್ಸ್ ನಿರ್ಮಿಸಿರುವ ಅಪಾರ್ಟ್ ಮೆಂಟ್ ನ 79 ಫ್ಲಾಟ್ ಗಳಿಗೆ ಬಿಬಿಎಂಪಿ ಖಾತಾ ಪಡೆಯಲು ಅರ್ಜಿ ಸಲ್ಲಿಸಲಾಗಿತ್ತು. ಪ್ರತಿ ಖಾತೆ ಮಾಡಿಕೊಡಲು ಹತ್ತು ಸಾವಿರ ರೂ. ನಂತೆ 79 ಖಾತಾ ಮಾಡಿಕೊಡಲು 7.90 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡ ಹಣ ಐದು ಲಕ್ಷ ರೂ. ನೀಡುವಂತೆ ಖಾಸಗಿ ಏಜೆಂಟ್ ಪವನ್ ಮೂಲಕ ಕಂದಾಯ ನಿರೀಕ್ಷಕ ನಟರಾಜ್ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಮನಸು ಇಲ್ಲದ ಕಾರಣ ಮುಕ್ತ ಡೆವಲಪರ್ಸ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
demand for 7.90 lakh bribe for issue BBMP Khata
ದೂರನ್ನು ಆಧರಿಸಿ ಡಿವೈಎಸ್ಪಿ ಬಸವರಾಜ್ ಮುಗ್ದಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಐದು ಲಕ್ಷ ರೂ. ಲಂಚದ ಸಮೇತ ಬಿಬಿಎಂಪಿ ಮಹದೇವಪುರ ವಲಯದ ಕಂದಾಯ ನಿರೀಕ್ಷಕ ನಟರಾಜ್ ಮತ್ತು ಆತನ ಏಜೆಂಟ್ ನನ್ನು ಬಂಧಿಸಿದ್ದಾರೆ. ಈ ಸಂಬಂಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಿಬಿಎಂಪಿ ಕಚೇರಿಗಳ ಲಂಚಾವತಾರದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ನಿನ್ನೆಯಷ್ಟೇ ನಲವತ್ತೈದು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಸಾಕಷ್ಟು ಅಕ್ರಮಗಳು ಕಂಡು ಬಂದಿದ್ದವು. ಲೋಕಾಯುಕ್ತ ದಾಳಿಯ ನಡುವೆಯೂ ಲಂಚ ಸ್ವೀಕರಿಸಿ ನಟರಾಜ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಕಾಂತ್, ಸಿಬ್ಬಂದಿ ರಾಜೇಶ್ವರಿ, ಶ್ರೀ ಲಕ್ಷ್ಮೀ, ಉಮೇಶ್, ಶ್ರೀನಿವಾಸ್, ಪಂಡು, ಹೇಮಂತ್, ಇಸ್ಮಾಯಿಲ್ ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಬಂದಿದ್ದರು.