ತಮಿಳುನಾಡಿನ ಕೊಯಮತ್ತೂರು ವಲಯದಲ್ಲಿ ಕಳೆದ ಒಂದು ವರ್ಷದಿಂದ ರಿಯಲ್ ಎಸ್ಟೇಟ್ ಹಾಗೂ ಪ್ರಾಪರ್ಟಿ ಮಾರ್ಕೆಟ್‌ಗಳು ಹೊಸ ಲಯಕ್ಕೆ ಬಂದಿದ್ದು, ಲಾಭದ ಹಾದಿಯಲ್ಲಿವೆ. ಕಳೆದ ವರ್ಷದ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದ ಆರಂಭದ ಐದು ತಿಂಗಳಲ್ಲಿಯೇ ಈ ವಲಯದ ನೋಂದಣಿ ವಿಭಾಗದಲ್ಲಿ ಆಸ್ತಿ ರಿಜಿಸ್ಟ್ರೇಷನ್ ಆದಾಯವು ಶೇಕಡ 52ರಷ್ಟು ಏರಿಕೆ ಕಂಡಿದೆ.
ಕೊಯಮತ್ತೂರು ವಲಯವು ಕೊಯಮತ್ತೂರು, ತಿರುಪ್ಪೂರು, ಈರೋಡ್ ಹಾಗೂ ನೀಲಗಿರಿ ರೆವೆನ್ಯೂ ಜಿಲ್ಲೆಗಳನ್ನು ಹೊಂದಿದ್ದು, ಈ ವಲಯದಲ್ಲಿ 2021ರ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ₹734.65 ಕೋಟಿ ಸಂಗ್ರಹವಾಗಿತ್ತು. ಈ ವರ್ಷ ಅದೇ ಹಣಕಾಸು ಅವಧಿಯಲ್ಲಿ ₹1,120 ಕೋಟಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಮಾರ್ಚ್ 2023ಕ್ಕೆ ಅಂತ್ಯಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಡಾಕ್ಯುಮೆಂಟ್ ರಿಜಿಸ್ಟ್ರೇಷನ್‌ನಿಂದ ಒಟ್ಟು ₹3, 476 ಕೋಟಿ ಸಂಗ್ರಹವಾಗುವ ಗುರಿಯನ್ನು ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಹಣಕಾಸು ವರ್ಷ (2021–22)ರಲ್ಲಿ ₹2,278 ಕೋಟಿ ಗುರಿಯನ್ನು ಹೊಂದಲಾಗಿತ್ತು. ಅದರಲ್ಲಿ ಶೇಕಡ 85ರಷ್ಟು ಗೆಲುವು ಸಾಧಿಸಿದ್ದು, ₹2,355 ಕೋಟಿ ಸಂಗ್ರಹವಾಗಿತ್ತು.
ಈ ವರ್ಷ ಕೊಯಮತ್ತೂರು ಜಿಲ್ಲೆಯೊಂದರಿಂದಲೇ ₹2.020 ಕೋಟಿ ಸಂಗ್ರಹ ಗುರಿ ಹೊಂದಲಾಗಿತ್ತು. ಈಗಾಗಲೇ ಆರಂಭದ ಐದು ತಿಂಗಳಲ್ಲಿ ಈ ವಲಯದಲ್ಲಿ ಶೇಕಡ 77ರಷ್ಟು ಗುರಿ ಸಾಧಿಸಲಾಗಿದೆ.
ಸಾಮಾನ್ಯ ವಾರದಲ್ಲಿ ಈ ವಲಯದಲ್ಲಿ ಶೇಕಡ 55ರಿಂದ ಶೇಕಡ 60 ಕೋಟಿ ಆದಾಯವನ್ನು ಗಳಿಸುತ್ತದೆ. ಈ ಆದಾಯವು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಈ ವರ್ಷದಲ್ಲಿ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಹಾಗೂ ಲೇಔಟ್‌ಗಳ ನೋಂದಣಿಯಿಂದ ಅತಿ ಹೆಚ್ಚು ಆದಾಯ ಸಂಗ್ರಹವಾಗಿದೆ ಎನ್ನಲಾಗಿದೆ.
ಈ ಆರ್ಥಿಕ ವರ್ಷದಲ್ಲಿ ಇನ್ನೂ ಏಳು ತಿಂಗಳುಗಳು ಬಾಕಿಯಿದ್ದು, ರಿಯಲ್ ಎಸ್ಟೇಟ್ ಹಾಗೂ ಪ್ರಾಪರ್ಟಿ ಮಾರ್ಕೆಟ್ ವಲಯದಲ್ಲಿ ನಿರೀಕ್ಷಿತ ಆದಾಯ ಸಂಗ್ರಹ ಗುರಿಯನ್ನು ಸಾಧಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.