26.7 C
Bengaluru
Sunday, December 22, 2024

ಬಾಲಿವುಡ್ ಸ್ಟಾರ್ ಕರೀನಾ ಕಪೂರ್ ಖಾನ್ ಐಷಾರಾಮಿ ಮನೆ ಹೇಗಿದೆ ನೋಡಿ..

ಬೆಂಗಳೂರು, ಏ. 03 : ಬಾಲಿವುಡ್ ಸ್ಟಾರ್ ಗಳ ಮನೆಯನ್ನು ನೋಡಲು ಎಲ್ಲರಿಗೂ ಕುತೂಹಲವಿರುತ್ತದೆ. ಈಗಾಗಲೇ ನಮ್ಮ ವೆಬ್‌ ಸೈಟ್‌ ನಲ್ಲಿ ಕೆಲ ಸ್ಟಾರ್‌ ಗಳ ಮನೆಯನ್ನು ನೋಡಿದ್ದೀರಾ. ಇದೀಗ ಬಾಲಿವುಡ್ ತಾರೆ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅವರ ಮನೆ ಹೇಗಿದೆ ಎಂದು ತಿಳಿಯೋಣ ಬನ್ನಿ. ಮುಂಬೈನದಲ್ಲಿರುವ ಇವರ ಮನೆ ಇದ್ದು, ಐಚಾರಾಮಿಯಾಗಿದೆ.

ಕರೀನಾ ಅವರು ನೆಲೆಸಿರುವ ಈ ಮನೆಯ ಲಿಂವಿಂಗ್‌ ರೂಮ್‌ ಬಹಳ ದೊಡ್ಡದಾಗಿದೆ. ಟೆರೇಸ್ ಗೆ ಹೊಂದಿಕೊಂಡಂತೆ ಲಿವಿಂಗ್ ರೂಮ್ ಇದೆ. ಸಿಕ್ಕಾಪಟ್ಟೆ ವಿಶಾಲವಾಗಿದ್ದು, ಹೊರಗಿನ ಪ್ರದೇಶವನ್ನು ದಿಟ್ಟಿಸಿ ನೋಡಬಹುದು. ಲಿವಿಂಗ್‌ ರೂಮ್‌ ಸಂಪೂರ್ಣವಾಗಿ ಮರದ ಫ್ಲೋರಿಂಗ್ ನಿಂದ ಕೂಡಿದೆ. ದೊಡ್ಡ ದೊಡ್ಡ ಗ್ಲಾಸ್ ವಿಂಡೋಗಳು ಇದ್ದು, ಗೋಡೆಯ ಬಣ್ಣ ಸ್ನೇಹಮಯ ವಾತಾವರಣ ಸೃಷ್ಟಿಸಿದೆ. ಗೋಡೆಗಳನ್ನು ಬಿಳಿ ಬಣ್ಣದಲ್ಲಿ ಪೇಂಟ್ ಮಾಡಲಾಗಿದ್ದು, ಅಲ್ಲಲ್ಲಿ ಇಂಡೋರ್ ಪ್ಲಾಂಟ್ ಗಳನ್ನು ಇರಿಸಿದ್ದಾರೆ.

ಇನ್ನು ಇವರ ಮನೆಯಲ್ಲಿ ಪ್ರತ್ಯೇಕವಾದ ಯೋಗ ಕೊಠಡಿಯೂ ಇದೆ. ಕರೀನಾ ಹಾಗೂ ಸೈಫ್‌ ಇಬ್ಬರೂ ವರ್ಕೌಟ್‌ Aಮಡುವುದು, ಫಿಟ್‌ ನೆಸ್ ಕಾಪಾಡಿಕೊಳ್ಳುತ್ತಿರುತ್ತಾರೆ. ಹೀಗಾಗಿ ಯೋಗ ಕೊಠಡಿಯನ್ನು ಹೊಂದಿದ್ದು, ಈ ರೂಮ್‌ ಗೆ ನೈಸರ್ಗಿಕ ಬೆಳಕು ಬರುವಂತೆ ವಿನ್ಯಾಸ ಮಾಡಿದ್ದಾರೆ. ಇಲ್ಲೂ ಕೂಡ ಮರದ ಫ್ಲೋರಿಂಗ್‌ ಇದ್ದು, ಗಿಡಗಳು, ಫೋಟೋಗಳನ್ನು ಕೋಣೆಯಲ್ಲಿ ಇರಿಸಿದ್ದಾರೆ.

ಇವರು ತಮ್ಮ ಮನೆಯಲ್ಲಿ ಮನೆಯಲ್ಲಿ ಪುಟ್ಟದೊಂದು ಲೈಬ್ರರಿ ಅನ್ನು ಹೊಂದಿದ್ದಾರೆ. ಓದುವ ಸ್ಥಳಕ್ಕೂ ಆದ್ಯತೆ ನೀಡಿದ್ದು, ಮರದ ಅತ್ಯಾಕರ್ಷಕ ಕಪಾಟುಗಳಿಂದ ವಿನ್ಯಾಸಗೊಳಿಸಲಾಗಿದೆ. ಆರ್ಟ್ ವರ್ಕ್, ಹಳೆಯ ಸಾಂಪ್ರದಾಯಿಕ ವಸ್ತುಗಳು, ಸಂಗ್ರಹಿಸಿದ ಅತ್ಯುತ್ತಮ ಸ್ಮರಣಿಕೆಗಳನ್ನೂ ಇದರಲ್ಲಿ ಇರಿಸಲಾಗಿದೆ. ಅಲ್ಲದೇ, ತಮ್ಮಿಷ್ಟದ ಹಾಗೂ ಉತ್ತಮ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ.

ಮರದ ಫ್ಲೋರಿಂಗ್ ಇರುವ ಕರೀನಾ ಅವರ ಬೆಡ್‌ ರೂಮ್, ಕೋಣೆ ಬಿಳಿ ಬಣ್ಣದ ಉದ್ದನೆಯ ಲಿನೆನ್ ಕರ್ಟನ್ ಗಳನ್ನು ಅಳವಡಿಸಲಾಗಿದೆ. ಹಳೆಯ ಫೋಟೊಫ್ರೇಮ್ ಗಳು, ಪುಸ್ತಕ, ಕ್ಯಾಂಡಲ್, ಲ್ಯಾಂಪ್ ಗಳನ್ನೂ ಬೆಡ್‌ ರೂಮ್‌ ನಲ್ಲಿ ಇರಿಸಿದ್ದಾರೆ. ಇನ್ನು ಬೆಡ್‌ ನ ಎದುರುಗಡೆಗೆ ಒಂದು ಟಿವಿಯನ್ನು ಗೋಡೆಗೆ ನೇತು ಹಾಕಿದ್ದಾರೆ. ಸಮಯ ಸಿಕ್ಕಾಗ ಟಿವಿ ನೋಡುವುದಕ್ಕೆ ಇದು ಸಹಕಾರಿಯಾಗಿದೆ.

ಮನೆಯೊಳಗೇ ಕರೀನಾ ಅವರು ಸ್ವಿಮ್ಮಿಂಗ್ ಪೂಲ್ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಇದು ಐಷಾರಾಮಿ ಮನೆಗಳಲ್ಲಿ ಕಾಮನ್‌ ಆಗಿದೆ. ಇನ್ನು ಟೆರೆಸ್‌ ಹಾಗೂ ಇತರೆ ಓಪನ್ ಸ್ಥಳಗಳನ್ನು ಹೊಂದಿದ್ದಾರೆ. ಟೆರೇಸ್ ಮೇಲೆ ಸುತ್ತಲೂ ಹಸಿರು ಗಿಡಗಳನ್ನು ಪೋಷಿಸಿದ್ದು, ಇವರ ಮನೆ ಸಿಕ್ಕಾಪಟ್ಟೆ ಐಷಾರಾಮಿಯಾಗಿ, ವಿಶಾಲವಾಗಿದೆ.

Related News

spot_img

Revenue Alerts

spot_img

News

spot_img