22.9 C
Bengaluru
Saturday, July 6, 2024

ಗುಂಪು ವಿಮಾ ಯೋಜನೆ ಅಡಿಯಲ್ಲಿ ಪರಿಹಾರ ಮೊತ್ತ ಹೆಚ್ಚಳ ಮಾಡಿದ ಬಿಎಂಟಿಸಿ

#BMTC # increased # compensation #amount under # group insurance #scheme

ಬೆಂಗಳೂರು: ಬಿಎಂಟಿಸಿ(BMTC) ಸಿಬ್ಬಂದಿ ಕರ್ತವ್ಯದ ವೇಳೆ ಅಪಘಾತ ಹೊರತುಪಡಿಸಿ ಬೇರೆ ಕಾರಣದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ಗುಂಪು ವಿಮಾ ಯೋಜನೆ(Group Insurance Plan) ಅಡಿಯಲ್ಲಿ ಪರಿಹಾರ ನೀಡಲಾಗುತ್ತಿದೆ. ಈ ಹಿಂದೆ 3 ಲಕ್ಷ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು 2023ರ ನವೆಂಬರ್ 20ರ ನಂತರದಿಂದ 10 ಲಕ್ಷ ನೀಡಲಾಗುತ್ತದೆ ಎಂದು ಇಂದು ನಗರದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.ಅಲ್ಲದೇ ವೈಯಕ್ತಿಕ ಅಪಘಾತದಿಂದ ಮೃತಪಟ್ಟ ನೌಕರರಿಗೆ ಗುಂಪು ವಿಮಾ ಯೋಜನೆಯಡಿ ಪರಿಹಾರ ಮೊತ್ತ 50 ಲಕ್ಷಗಳನ್ನು ಹೆಚ್ಚಿಸಿತ್ತು. ಈಗ ಈ ವಿಮಾ ಪರಿಹಾರವನ್ನು ಬಿಎಂಟಿಸಿ(BMTC) ನೌಕರರಿಗೂ ವಿಸ್ತರಿಸಲಾಗಿದೆ.ಈ ಹಿಂದೆ ಗುಂಪು ವಿಮಾ ಯೋಜನೆಗಾಗಿ ಪ್ರತಿ ಸಿಬ್ಬಂದಿಯಿಂದ ಮಾಸಿಕ ₹70 ವಂತಿಗೆ ಪಡೆಯಲಾಗುತ್ತಿತ್ತು. ಆದರೆ, ಆ ಮೊತ್ತವನ್ನು ಮಾಸಿಕ ₹350ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಜತೆಗೆ ನಿಗಮದ ವಂತಿಗೆಯಾಗಿ ಪ್ರತಿ ಸಿಬ್ಬಂದಿಗೆ ₹150 ನೀಡಲಿದ್ದು, ಒಟ್ಟಾರೆ ಒಬ್ಬ ಸಿಬ್ಬಂದಿಯಿಂದ ಮಾಸಿಕ ₹500 ವಂತಿಗೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಸೇವೆಯಲ್ಲಿರುವಾಗ ಮೃತಪಟ್ಟಲ್ಲಿ ಅವರ ಅವಲಂಬಿತರ ಜೀವನಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ದೃಷ್ಟಿಯಿಂದ ನೌಕರರ ತಿಂಗಳ ವೇತನದಲ್ಲಿ 70 ರೂ.ಗಳ ವಂತಿಗೆಯೊಂದಿಗೆ ನೌಕರರು ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ 3 ಲಕ್ಷ ರೂ.ಗಳನ್ನು ಪಾವತಿಸುವ ಸಲುವಾಗಿ ಗುಂಪು ವಿಮಾ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ. ಪ್ರಸ್ತುತ ಈ ಯೋಜನೆಯು ಜಾರಿಯಲ್ಲಿರುತ್ತದೆ ಎಂದಿದ್ದಾರೆ.ಗುಂಪು ವಿಮಾ ಯೋಜನೆ ಅಡಿಯಲ್ಲಿ ಪರಿಹಾರ ಮೊತ್ತ ಹೆಚ್ಚಳ ಮಾಡಿರುವುದನ್ನು ಸಂಘವು ಸ್ವಾಗತಿಸಿದೆ.ಸಿಬ್ಬಂದಿ ವಂತಿಗೆಯನ್ನು ₹70ರಿಂದ ₹350ಕ್ಕೆ ಹೆಚ್ಚಳ ಮಾಡಿರುವುದು ಸಮಂಜಸವಲ್ಲ.ಬಿಎಂಟಿಸಿ(BMTC) ವ್ಯವಸ್ಥಾಪಕ ನಿರ್ದೇಶಕರಿಗೆ ಸಿಬ್ಬಂದಿ ತೆರಿಗೆ ಪ್ರಮಾಣ ಕಡಿಮೆ ಮಾಡಿ, ನಿಗಮದ ವಂತಿಗೆ ಹೆಚ್ಚಿಸುವಂತೆ ಯೂನಿಯನ್‌ನಿಂದ ಪತ್ರ ಬರೆಯಲಾಗಿದೆ.ದಿನಾಂಕ:19.02.2024 ಮತ್ತು ನಂತರದಲ್ಲಿ ಅಪಘಾತದಿಂದ ಮರಣ ಹೊಂದಿದ ಪ್ರಕರಣಗಳಲ್ಲಿ ಮಾತ್ರ ರೂ.50.00 ಲಕ್ಷಗಳ (50 ಲಕ್ಷ ರೂಪಾಯಿಗಳು) ಮತ್ತು ಅಪಘಾತ ಹೊರತುಪಡಿಸಿ ಇನ್ನಿತರೆ ಕಾರಣಗಳಿಂದ ಮೃತಪಟ್ಟ ಅವಲಂಬಿತರಿಗೆ ರೂ.10.00 ಲಕ್ಷ (10 ಲಕ್ಷ ರೂಪಾಯಿಗಳು) ಪರಿಹಾರ ಮೊತ್ತಕ್ಕೆ ಅರ್ಹರಿರುತ್ತಾರೆ.ಅಪಘಾತ ಮರಣ ಪ್ರಕರಣಗಳು ಮತ್ತು ಈ ಕೈಮ್ ಸಂಬಂಧ ಅನುಸರಿಸಬೇಕಾದ ಕ್ರಮಗಳ ಕುರಿತು ನಿರ್ದೇಶನಗಳನ್ನು ನಂತರದಲ್ಲಿ ನೀಡಲಾಗುವುದು ಎಂದಿದ್ದಾರೆ.

Related News

spot_img

Revenue Alerts

spot_img

News

spot_img