ಕಳೆದ ವಾರ ಲೋಕಯುಕ್ತ ಪೊಲೀಸರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ BWSSB ಯಲ್ಲಿ ಮುಖ್ಯ ಖಾತೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಸಕರ ಪುತ್ರ ಪ್ರಶಾಂತ್ ಮಾಡಲ್ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಮೊದಲನೇ ಆರೋಪಿ ಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರವರಿಗಾಗಿ ಸತತ ಮೂರನೇ ದಿನವೂ ಲೋಕಾಯುಕ್ತ ಪೊಲೀಸರು ವಿವಿಧೆಡೆ ಶೋಧ ನಡೆಸಿದರು ಪತ್ತೆಯಾಗದ ಕಾರಣ ತಮ್ಮ ಶೋಧ ಕಾರ್ಯವನ್ನು ಚುರುಕೊಗೊಳಿಸಿದ್ದು, ಈ ಪತ್ತೆಕಾರ್ಯಕ್ಕಾಗಿ 7 ಡಿವೈಎಸ್ಪಿ ಗಳ ತಂಡವನ್ನು ರಚಿಸಲಾಗಿತ್ತು.
₹40 ಲಕ್ಷ ಲಂಚ ಪಡೆಯುತ್ತಿದ್ದಾಗ ವಿರೂಪಾಕ್ಷಪ್ಪ ಅವರ ಮಗ, ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದರು. ಗುರುವಾರ ತಡ ರಾತ್ರಿ ಈ ಬಗ್ಗೆ ಸಿಎಂ ರವರ ಬಳಿ ಮಾತನಾಡಲೆಂದು ಬೆಂಗಳೂರು ತಲುಪಿದ್ದ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದರು. ನಂತರ ಆರೋಪಿ ವಿರುಪಾಕ್ಷಪ್ಪ ರವರಿಗಾಗಿ ಲೋಕಾಯುಕ್ತ ಪೊಲೀಸರು ಶೋಧ ನಡೆಸುತ್ತಿದ್ದರು.
ಪ್ರಶಾಂತ್ ರವರನ್ನು ಬಂಧಿಸಿದ ಪೊಲೀಸರು ಆತನ ಖಾಸಗಿ ಕಚೇರಿಯಲ್ಲಿ ಶೋಧ ನಡೆಸಿ ₹1.62 ಕೋಟಿ ಲಂಚದ ಹಣವನ್ನು ಪತ್ತೆಮಾಡಿ ವಶಕ್ಕೆ ಪಡೆದುಕೊಂಡಿದ್ದರು. ಶಾಸಕ ವಿರೂಪಾಕ್ಷಪ್ಪ ಮನೆಯಲ್ಲಿಯೂ ಸಹ ದಾಖಲೆಯಿಲ್ಲದ ₹6.10 ಕೋಟಿ ಪತ್ತೆಯಾಗಿತ್ತು. ಪ್ರಶಾಂತ್ ಬ್ಯಾಂಕ್ ಖಾತೆಗೆ ₹94 ಲಕ್ಷ ಜಮೆ ಆಗಿರುವುದಕ್ಕೆ ಚಕ್ಕಿತಗೊಂಡ ಲೋಕಯುಕ್ತ ಅಧಿಕಾರಿಗಳು KSDLನ ಟೆಂಡರ್ ಪ್ರಕ್ರಿಯೆ ಕುರಿತು ಶಾಸಕರನ್ನು ಪ್ರಶ್ನಿಸಿ ಪತ್ತೆಯಾಗಿರುವ ಬೇನಾಮಿ ಹಣದ ಮೂಲವನ್ನು ಪತ್ತೆ ಮಾಡಿದ್ದಾರೆ..
ಇನ್ನೂ ತಲೆಮರೆಸಿಕೊಂಡಿದ್ದ ಶಾಸಕರ ಪತ್ತೆಗಾಗಿ ಲೋಕಯುಕ್ತ ಪೊಲೀಸರು ಏಳು ಮಂದಿ ಡಿವೈಎಸ್ಪಿಗಳ ನೇತೃತ್ವದಲ್ಲಿ 7 ತಂಡಗಳಾಗಿ ವಿಭಾಗವಾಗಿ ಶೋಧ ನಡೆಸಿತ್ತು. ಬೆಂಗಳೂರಿನ ವಿವಿಧೆಡೆ, ದಾವಣಗೆರೆ ಜಿಲ್ಲೆಯ ಹಲವು ಸ್ಥಳಗಳಲ್ಲಿ ಶೋಧ ನಡೆದಿದೆ. ಶಾಸಕರ ಜತೆ ಇದ್ದ ಅವರ ಹಿರಿಯ ಮಗ ಮಲ್ಲಿಕಾರ್ಜುನ್ ಕೂಡ ನಾಪತ್ತೆಯಾಗಿದ್ದು ಅವರ ಪತ್ತೆಗೆ ನಿಕಟವರ್ತಿಗಳ ಮೇಲೆ ನಿಗಾ ಇಡಲಾಗಿತ್ತು.
ಆದರೆ ಇದೀಗ ಬಂದ ಸುದ್ದಿಯ ಪ್ರಕಾರ ತಲೆಮರೆಸಿಕೊಂಡಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನವರಿಗೆ ನೀರಿಕ್ಷಣಾ ಜಾಮೀನು ದೊರೆತಿದೆ.