ಹೊಸದಿಲ್ಲಿ: 2024 ರ ಲೋಕಸಭೆ ಚುನಾವಣೆಗೆ ಹಿನ್ನೆಲೆ, ಭಾರತೀಯ ಜನತಾ ಪಕ್ಷವು, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ಹಾಗೂ ಜಾರ್ಖಂಡ್ ರಾಜ್ಯ ಘಟಕಗಳಿಗೆ ಹೊಸ ಮುಖ್ಯಸ್ಥರನ್ನು ನೇಮಿಸಿದೆ.ಈ ಪ್ರಯುಕ್ತ 4 ರಾಜ್ಯಗಳಿಗೆ ನೂತನ ಬಿಜೆಪಿ ಸಾರಥಿಗಳು ಸಿಕ್ಕಂತಾಗಿದೆ.ಪಕ್ಷವನ್ನು ಸಂಘಟನಾತ್ಮಕವಾಗಿ ಪುನಶ್ಚೇತನಗೊಳಿಸಲು ಭಾರತೀಯ ಜನತಾ ಪಕ್ಷವು ನಾಲ್ಕು ರಾಜ್ಯ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿದೆ. ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ಆರಂಭಿಸಲಾಗಿದೆ,
ಯಾವ ರಾಜ್ಯಕ್ಕೆ ಯಾರು ?
• ಆಂಧ್ರಪ್ರದೇಶ- ಡಿ. ಪುರಂದೇಶ್ವರಿ,
• ತೆಲಂಗಾಣ – ಕಿಶನ್ ರೆಡ್ಡಿ
• ಪಂಜಾಬ್- ಸುನಿಲ್ ಜಾಖರ್
• ಜಾರ್ಖಂಡ್- ಬಾಬುಲಾಲ್ ಮರಾಂಡಿ
ಈ ನಾಲ್ಕು ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿ ಜೆ.ಪಿ ನಡ್ಡಾ (J.P Nadda) ಆದೇಶ ಹೊರಡಿಸಿದ್ದಾರೆ.