ಬೆಂಗಳೂರು;ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದ್ದು, ಸರ್ಕಾರ ಸದ್ಯದಲ್ಲೇ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಲು ಮುಂದಾಗಿದ್ದು. ಅರ್ಹ ಫಲಾನುಭವಿಗಳಿಗೆ ಇದೊಂದು ವರವಾಗಲಿದೆ. ಸರ್ಕಾರ ಸದ್ಯದಲ್ಲೇ ಹೊಸ ಪಡಿತರ ಚೀಟಿಗಳನ್ನು(rationcard) ವಿತರಣೆ ಮಾಡಲು ಮುಂದಾಗಿದ್ದು, ಅರ್ಜಿ ಸಲ್ಲಿಸಿದವರ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳು ಹೊಸ ಪಡಿತರ ಚೀಟಿಗಳನ್ನು ನೀಡಬೇಕು ಅಂತ ಸಚಿವವರು ಈಗಾಗಲೇ ತಿಳಿಸಿದ್ದಾರೆ.6 ತಿಂಗಳಿನಿಂದ ಪಡಿತರ(ration) ಪಡೆಯದವರ ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದು. ರಾಜ್ಯಾದ್ಯಂತ ಒಟ್ಟು 3.26 ಲಕ್ಷ ರೇಷನ್ ಕಾರ್ಡ್ ರದ್ದಾಗಲಿದೆ ಎಂದು ತಿಳಿದು ಬಂದಿದೆ. ಯಾರು ಪಡಿತರವನ್ನು ಪಡೆದುಕೊಳ್ಳುತ್ತಿಲ್ಲವೋ ಅಂಥವರ ಬಿಪಿಎಲ್(BPL) ಕಾರ್ಡ್ ರದ್ದುಪಡಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ.ಇನ್ನೂ ರಾಜ್ಯದಲ್ಲಿ ಆರು ತಿಂಗಳಿಂದ ರೇಷನ್ ಪಡೆಯದ ಒಟ್ಟು 3.26 ಲಕ್ಷ BPL ಪಡಿತದಾರರು ಇದ್ದು, ಕೆಲವು ಮಂದಿ ವೈದ್ಯಕೀಯ ಚಿಕಿತ್ಸೆಗಾಗಿ ಮಾತ್ರ BPL ಕಾರ್ಡ್ ಅನ್ನು ಬಳಕೆ ಮಾಡುತ್ತಿದ್ದಾರೆ ಅಂತ ತಿಳಿದು ಬಂದಿದೆ.ಇನ್ನೂ BPL ರೇಷನ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಯೋಜನೆಯ 2,000 ರೂ. ಕೂಡ ಬರುವುದಿಲ್ಲ. ಆದ್ದರಿಂದ ಫಲಾನುಭವಿಗಳು ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ.