23 C
Bengaluru
Wednesday, February 5, 2025

ಕಿಚ್ಚನ ಪಂಚಾಯಿತಿಗೂ ಮೊದಲೇ ಶುರುವಾಯ್ತು ಬಿಗ್ ಬಾಸ್ ಎಲಿಮಿನೇಷನ್..!

ಬಿಗ್‌ಬಾಸ್‌ ಪಾಠಶಾಲೆ ತರಗತಿಯಿಂದ ತರಗತಿಗೆ ಸೀರಿಯಸ್ ಆಗುತ್ತ ನಡೆದಿದೆ. ಮೊದಲ ದಿನಕ್ಕೆ ಹೋಲಿಸಿದರೆ ನಿನ್ನೆಯ ತರಗತಿಗಳು ಸಾಕಷ್ಟು ಸೀರಿಯಸ್ ಆಗಿದ್ದವು. ನಮ್ರತಾ ಕ್ಲಾಸಿನಲ್ಲಿ ಎಲ್ಲರೂ ಡಾನ್ಸ್‌ ಮಾಡಿ ಖುಷಿಪಟ್ಟರೆ, ಸಂಗೀತಾ ಬಹುಗಂಭೀರವಾಗಿ ಅಧ್ಯಾತ್ಮದ ಪಾಠವನ್ನು ಹೇಳಿಕೊಟ್ಟಿದ್ದರು. ತುಂಬ ಗಹನವಾಗಿಯೂ ಇದ್ದ ಅವರ ತರಗತಿ ಪ್ರೀತಿಯನ್ನು ಹರಡುವ ಸಂದೇಶದೊಂದಿಗೆ ಕೊನೆಗೊಂಡಿತ್ತು. ಸಿರಿ ಅವರ ತರಗತಿಯಲ್ಲಿ ಕಾರ್ತಿಕ್‌ ಮತ್ತು ವಿನಯ್‌ ಪರಸ್ಪರ ಹಾರ್ಟ್‌ ಕ್ರಾಫ್ಟ್ ಹಂಚಿಕೊಂಡು ಖುಷಿಗೊಂಡಿದ್ದರು.

ಇವತ್ತಿನ ಕ್ಲಾಸ್ ಹೇಗೆ ನಡೆಯುತ್ತಿವೆ?

ಕಾರ್ತಿಕ್ ರಾಜಕೀಯ ತರಗತಿಯ ಝಲಕ್‌ನ ನಂತರ ಬಿಡುಗಡೆ ಮಾಡಿರುವ ಪ್ರೋಮೊ ಈಗ ವರ್ತೂರು ಸಂತೋಷ್ ಅವರ ಕ್ಲಾಸಿನ ಮಾಸ್ ಅಂತು ಸಕ್ಕತ್ತಾಗಿದೆ.

ವರ್ತೂರ್ ಸಂತೋಷ್ ಮೇಷ್ಟ್ರಾದ ಮನೆಯಲ್ಲಿ ಎಲಿಮಿನೇಷನ್

ವರ್ತೂರು ಸಂತೋಷ್‌ ಟೀಚರ್ ಆಗಿರುವ ತರಗತಿಯಲ್ಲಿ ಒಬ್ಬರನ್ನೊಬ್ಬರು ಎಲಿಮಿನೇಟ್ ಮಾಡುವ ಚಟುವಟಿಕೆಯೂ ನಡೆದಿದೆ. ಸಂಗೀತಾ ಮತ್ತು ಪ್ರತಾಪ್‌ ಇಬ್ಬರೂ ಮೈಕಲ್‌ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಹೇಳಿದ್ದಾರೆ. ಮೈಕಲ್‌ ಸಣ್ಣ ಸಣ್ಣ ವಿಷಯಕ್ಕೂ ನನಗೆ ಚುಚ್ಚಿ ಮಾತಾಡುತ್ತಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದರೆ, ನನ್ನ ವಿರುದ್ಧ ಎಲ್ಲರ ಮನಸ್ಸಿನಲ್ಲಿಯೂ ತಪ್ಪು ಭಾವನೆ ಮೂಡಿಸುತ್ತಿದ್ದಾರೆ’ ಎಂದು ಪ್ರತಾಪ್ ಹೇಳಿದ್ದಾರೆ.

ಐ ಡೋಂಟ್ ಕೇರ್ ಎಂದ ಮೈಕೆಲ್

ಇದಕ್ಕೆ ಪ್ರತಿಕ್ರಿಯಿಸಿರುವ ಮೈಕಲ್, ಐ ಡೋಂಟ್ ಲೈಕ್ ಯು ಎಂದು ನೇರವಾಗಿ ಹೇಳಿದ್ದಾರೆ. ಪ್ರತಾಪ್‌ ಅವರಿಗೆ ಸ್ವಂತ ಪರ್ಸನಾಲಿಟಿ ಇಲ್ಲ. ಸಿಂಪಥಿಯಲ್ಲಿದ್ದು ಬದುಕುವವನ ಬಳಿ ಮಾತಾಡಲು ನನಗೆ ಏನೂ ಇಲ್ಲ ಎಂದೂ ಉತ್ತರಿಸಿದ್ದಾರೆ. ಹಾಗಾದರೆ ವರ್ತೂರ್‍ ಕ್ಲಾಸ್‌ನಲ್ಲಿ ನಡೆದಿದ್ದು ರಿಯಲ್ ಎಲಿಮಿನೇಷನ್ನಾ? ಅಥವಾ ಟಾಸ್ಕ್‌ನ ಭಾಗವಾ? ಅಂತ ಎಲ್ಲಾರೂ ತಲೆ ಕೆಡಿಸಿಕೊಳ್ತಿದ್ದಾರೆ

ಚೈತನ್ಯ , ರೆವಿನ್ಯೂ ಫ್ಯಾಕ್ಟ್ ನ್ಯೂಸ್

Related News

spot_img

Revenue Alerts

spot_img

News

spot_img