ಚಿಕ್ಕಮಗಳೂರು;ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ (Mudigere) BEO ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.ಮೂಡಿಗೆರೆ ಬಿಇಓ ಹೇಮಂತ್ ರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.ಅನುಕಂಪದ ಆಧಾರದ ಮೇಲೆ ಮಹಿಳೆಯೊಬ್ಬರಿಗೆ ನೌಕರಿಗೆ(compassionate employees) ಶಿಫಾರಸ್ಸು ಮಾಡಲು ಬಿಇಒ(BEO) ಹೇಮಂತ್ ರಾಜ್ 10 ಸಾವಿರ ಲಂಚಕ್ಕೆ(Bribe) ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿದ್ದು, ಹಣ ಸ್ವೀಕರಿಸುವಾಗ ಅವರು ಲೋಕಾಯುಕ್ತ(Lokayukta) ಬಲೆಗೆ ಬಿದ್ದಿದ್ದಾರೆ. ಹೊಯ್ಸಳಲು ಗ್ರಾಮದ ವ್ಯಕ್ತಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. 2023ರ ಮೇ 5 ರಂದು ಅವರು ಹೃದಯಾಘಾತದಿಂದ (Heart attack) ಮೃತಪಟ್ಟಿದ್ದರು. ಹಾಗಾಗಿ, ಶಿಕ್ಷಕರ ಪತ್ನಿ ಅನುಕಂಪದ ಆಧಾರದ ನೌಕರಿಗೆ ಶಿಫಾರಸ್ಸು ಮಾಡುವಂತೆ ಬಿಇಓಗೆ ಮನವಿ ಮಾಡಿದ್ದರು.ಆದರೆ ಅವರು ದಾಖಲೆ ಕೇಳುವ ನೆಪದಲ್ಲಿ ದಿನಕಳೆಯುತ್ತುದ್ದರು. ಮಹಿಳೆ ಬಿಇಓ ಕಚೇರಿಯ SDA ಬಳಿ ಕೇಳಿದಾಗ 15 ಸಾವಿರಕ್ಕೆ ಬೇಡಿಕೆ (demand) ಇಟ್ಟಿದ್ದರು. ಕೊನೆಗೆ 10 ಸಾವಿರ ರೂ.ಗೆ ಒಪ್ಪಿಕೊಂಡಿದ್ದರು ಎಂದು ತಿಳಿದುಬಂದಿದೆ. ಅಂತೆಯೇ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ತಂಡವು ಈ ದಾಳಿ ನಡೆಸಿದೆ.