19.8 C
Bengaluru
Monday, December 23, 2024

ರೈಲ್ವೆ ಬಜೆಟ್: ಬೆಂಗಳೂರು ಟು ಮಂಗಳೂರು ಕಾರವಾರದವರೆಗೂ ವಿಸ್ತರಣೆ..?

ಬೆಂಗಳೂರು, ಜ. 30 : 2023 ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಹಣಕಾಸು ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಕೂಡ ವಿಲೀನಗೊಂಡ ಪರಿಣಾಮ ಬಜೆಟ್ ಮಂಡನೆ ವೇಳೆ, ರೈಲ್ವೆ ಬಜೆಟ್ ಅನ್ನು ಕೂಡ ಮಂಡಿಸಲಾಗುತ್ತದೆ. ರೈಲ್ವೆ ಬಜೆಟ್ ನಲ್ಲಿ ಇಲಾಖೆಯ ಘೋಷಣೆಗಳು ಕೂಡ ಇರಲಿವೆ. ಈ ವರ್ಷದ ಬಜೆಟ್ ನಲ್ಲಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸುವ ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಕಾರವಾರದವರೆಗೂ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಈ ವರ್ಷದ ರೈಲ್ವೇ ಬಜೆಟ್ ನಲ್ಲಿ ಈ ಬೇಡಿಕೆಯನ್ನು ಈಡೇರುತ್ತದೆ ಎಂಬ ನಿರೀಕ್ಷೆ ಇದೆ.

ಬೆಂಗಳೂರು-ಮಂಗಳೂರು ರೈಲ್ವೇಯನ್ನು ಕಾರವಾರದವರೆಗೂ ವಿಸ್ತರಿಸಲು ದಕ್ಷಿಣ ಕನ್ನಡ, ಉಡುಪಿ ಭಾಗದ ಜನರ ವಿರೋಧವಿದೆ. ಸಾಕಷ್ಟು ಸಂಘಟನೆಗಳು ಬೆಂಗಳೂರು-ಮಂಗಳೂರು ರೈಲನ್ನು ಕಾರವಾರವರೆಗೂ ವಿಸ್ತರಿಸಬೇಕು ಎಂದು ರೈಲ್ವೆ ಮಂಡಳಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರಿಗೆ ಮನವಿಯನ್ನು ಮಾಡಲಾಗಿದೆ. ಈ ಬೇಡಿಕೆಯನ್ನು ಈ ಬಾರಿಯ ರೈಲ್ವೇ ಬಜೆಟ್ ನಲ್ಲಿ ಮಂಡಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ: ಬೆಂಗಳೂರು-ಮಂಗಳೂರು ರೈಲನ್ನು ಕಾರವಚಾರದವರೆಗೂ ವಿಸ್ತರಣೆ ಮಾಡಿದರೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಮೈಸೂರು ಪ್ರವಾಸಿಗರ ಪ್ರಮುಖ ತಾಣವಾಗಿದೆ. ಜೊತೆಗೆ ಕಾರವಾರದಲ್ಲಿ ಕುಕ್ಕೆ, ಧರ್ಮಸ್ಥಳ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳಿವೆ. ಬೆಂಗಳೂರಿನಿಂದ ಮಂಘಳುರಿಗೆ ತೆರಳುವ ರೈಲನ್ನು ಕಾರವಾರದವರೆಗೂ ವಿಸ್ತರಿಸುವುದು ಉತ್ತಮ ಎಂಬುದು ಹಲವರ ಅಭಿಪ್ರಾಯವಾಗಿದೆ. ಉಡುಪಿ, ಮುರ್ಡೇಶ್ವರ, ಕಾರವಾರದವರೆಗೂ ಪ್ರಯಾಣಿಸುವವರೆಇಗೆ ಅನುಕೂಲವಾಗಲಿದೆ. ಅಲ್ಲದೇ ಮೈಸೂರು ಮತ್ತು ಕಾರವಾರ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.

ಪ್ರಮುಖ ನಗರಗಳಿಗೆ ಸಂಪರ್ಕ: ಈ ರೈಲು ಸಂಪರ್ಕವನ್ನು ವಿಸ್ತರಿಸುವುದರಿಂದ ಹಲವರಿಗೆ ಅನುಕೂಲವಾಗಲಿದೆ. ಮೈಸೂರು, ಮಂಗಳೂರು, ಉಡುಪಿ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಿದಂತೆ ಆಗುತ್ತದೆ. ಇದರಿಂದ ಓಡಾಡುವ ಜನರಿಗೆ ಅನುಕೂಲವಾಗುವುದಂತೂ ನಿಜ. ಇದರಿಂದ ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸುವವರಿಗೆ, ಪ್ರವಾಸಿ ತಾಣಗಳಿಗೆ ತೆರಳುವವರಿಗೆ ಹಾಗೂ ಆರೋಗ್ಯವಾದ ವಿಚಾರ ಸೇರಿದಂತೆ ಇನ್ನಿತರೆ ಕಾರಣಗಳಿಗೆ ಓಡಾಡುವವರಿಗೆ ಸಹಕಾರಿಯಾಗಲಿದೆ.

ರೈಲು ಮಾರ್ಗ ವಿಸ್ತರಣೆ ವಿರೋಧ: ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಲು ವಿರೋಧವಿದೆ. ದಕ್ಷಿಣ ಕನ್ನಡ, ಉಡುಪಿ ಭಾಗದ ಜನರು ಇದಕ್ಕೆ ವಿರೋಧಿಸುತ್ತಿದ್ದಾರೆ. ಕಾರವಾರದವರೆಗೂ ರೈಲನ್ನು ವಿಸ್ತರಣೆ ಮಾಡಿದರೆ, ದೂರದ ಪ್ರಯಾಣಿಕರು ಟಿಕೆಟ್ ಅನ್ನು ಕಾಯ್ದಿರಿಸುತ್ತಾರೆ. ಹೀಗೆ ಟಿಕೆಟ್ ಬುಕ್ ಮಾಡಿದರೆ, ಮಿಕ್ಕವರಿಗೆ ಸೀಟು ಸಿಗುವುದಿಲ್ಲ. ಈಗಾಗಲೇ ಬೆಂಗಳೂರು-ಮಂಗಳೂರು ರೈಲು ಕಣ್ಣೂರು ವರೆಗೂ ವಿಸ್ತರಣೆ ಆಗಿದೆ. ಈಗ ಕಾರವಾರದವರೆಗೂ ವಿಸ್ತರಿಸುವುದು ಬೇಡ ಎಂದು ಒತ್ತಾಯ ಮಾಡುತ್ತಿದ್ದಾರೆ.

ಆದರೆ, ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಬೆಂಗಳುರು – ಮಂಗಳೂರು ರೈಲನ್ನು ಕಾರವಾರದ ತನಕ ವಿಸ್ತರಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ, ವಿಸ್ತರಣೆಯಾಗುತ್ತದೆಯೋ ಇಲ್ಲವೋ ಎಂದು ಬಜೆಟ್ ಮಂಡಿಸುವವರೆಗೂ ಕಾದು ನೋಡಬೇಕಿದೆ. ಇನ್ನು ಇದರ ಜೊತೆಗೆ ಗೋವಾ ಹಾಗೂ ಮೈಸೂರು ನಡುವೆಯೂ ರೈಲು ಸಂಪರ್ಕವನ್ನು ಕಲ್ಪಿಸಬೇಕು ಎಂದು ಕೂಡ ಬೇಡಿಕೆ ಕೇಳಿ ಬಂದಿದೆ. ಈ ಕುರಿತು ಕೂಡ ಬಜೆಟ್ ನಲ್ಲಿ ಘೋಷಣೆಯಾಗಲಿದೆಯಾ ಎಂದು ಕಾಯಬೇಕಿದೆ.

Related News

spot_img

Revenue Alerts

spot_img

News

spot_img