21.1 C
Bengaluru
Monday, December 23, 2024

ದೇಶದ ಪ್ರಮುಖ ಬೀದಿಗಳ ಪಟ್ಟಿಯಲ್ಲಿ ಬೆಂಗಳೂರಿನ ರಸ್ತೆಗಳೇ ಹೆಚ್ಚಿವೆ

ಬೆಂಗಳೂರು, ಮೇ. 11 : ಪ್ರಪಂಚದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ದೇಶದ ಪೈಕಿ ಭಾರತವೂ ಒಂದು. ಹೀಗಿರುವಾಗ ಭಾರತದ ರಿಯಲ್ ಎಸ್ಟೇಟ್ ಕೂಡ ಬಹಳ ವೇಗವಾಗಿ ಬೆಳೆಯುತ್ತಿದೆ. ಭಾರತದ ಪ್ರಮುಖ ನಗರಗಳಲ್ಲಿ ಭೂಮಿ ಖರೀದಿಸುವುದಿರಲಿ, ಬಾಡಿಗೆ ಮನೆಗಳಿಗೆ ತೆರಳುವುದು ಕೂಡ ಕಷ್ಟಕರವಾಗಿದೆ. ಭೂಮಿ ಬೆಲೆ ಏರಿಕೆಯಾದಂತೆ, ಬಾಡಿಗೆ ಮನೆಗಳ ಬೆಲೆಯೂ ಏರುತ್ತಿದೆ. ಅಂದಹಾಗೆ ಭಾರತದಲ್ಲಿ ಬೆಂಗಳೂರು ನಗರವೂ ಇತರೆ ನಗರಗಳಿಗಿಂತ ದುಪ್ಪಟ್ಟಾಗಿ ಬೆಳೆಯುತ್ತಿದೆ.

ಇದೀಗ ಭಾರತದ ಪ್ರಮುಖ ನಗರಗಳಲ್ಲಿ ಉತ್ತಮ ಶಾಪಿಂಗ್ ಅನುಭವ, ಊಟ ಹಾಗೂ ಮನರಂಜನೆ ಲಭ್ಯವಿರುವ ಸಿಟಿಗಳ ಬಗ್ಗೆ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಂಕ್ ಇಂಡಿಯಾ ವರದಿಯನ್ನು ಸಿದ್ಧಪಡಿಸಿದೆ. ಪ್ರಮುಖ 10 ನಗರಗಳ ಪೈಕಿ ಬೆಂಗಳೂರಿನ ನಾಲ್ಕು ಬೀದಿಗಳು ಸ್ಥಾನವನ್ನು ಪಡೆದಿದೆ. ಈ ಮೂಲಕ ಬೆಂಗಳೂರು ಈಗ ಮತ್ತಷ್ಟು ಆಕರ್ಷಿತ ನಗರವಾಗಿ ಹೊರ ಹೊಮ್ಮುತ್ತಿದೆ. ಬೆಂಗಳೂರು ನಗರದ ಎಂ.ಜಿ. ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೆಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ರಸ್ತೆಗಳು ಗ್ರಾಹಕರನ್ನು ಆಕರ್ಷಿಸುತ್ತವೆ.

ಇದನ್ನು ಹೊರತು ಪಡಿಸಿ ಭಾರತದಲ್ಲಿ ಇನ್ನೂ ಪ್ರಮುಖ ಆರು ಬೀದಿಗಳು ಇವೆ. ಬೆಂಗಳೂರು, ಹೈದರಾಬಾದ್, ಕೋಲ್ಕತ್ತ, ಮುಂಬೈ, ದೆಹಲಿ ಸೇರಿದಂತೆ ದೇಶದ 8 ನಗರಗಳಲ್ಲಿ ಪ್ರಮುಖವಾದ 30 ಬೀದಿಗಳಿಗೆ ಸಂಬಂಧಿಸಿದ ಸಮೀಕ್ಷೆಯನ್ನು ನಡೆಸಿದ್ದು, ಸಂಸ್ಥೆ ವರದಿಯನ್ನು ಬಿಡುಗಡೆ ಮಾಡಿದೆ. ಅತ್ಯಾಆಧುನಿಕ ರಿಟೇಲ್ ಮಳಿಗೆಗಳು, ಉತ್ತಮ ಖರೀದಿ ಅನುಭವ, ರುಚಿಕರವಾದ ಆಹಾರ ಸೇವನೆ ಹಾಗೂ ಮನರಂಜನೆಯನ್ನು ನೀಡುವಂತಹ ಸೌಕರ್ಯಗಳು ಇರುವ ದೇಶದ ಪ್ರಮುಖ 30 ಬೀದಿಗಳಲ್ಲಿ 7 ರಸ್ತೆಗಳು ಬೆಂಗಳೂರು ನಗರದಲ್ಲಿಯೇ ಇವೆ.

ಮೊದಲ ಸ್ಥಾನದಲ್ಲಿ ಎಂಜಿ ರಸ್ತೆ ರಸ್ತೆ ಇದ್ದರೆ, ಹೈದರಾಬಾದ್ನ ಸೋಮಾಜಿಗುಡ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮುಂಬೈನ ಲಿಂಕಿಂಗ್ ರಸ್ತೆ ಮೂರನೇ ಸ್ಥಾನ, ನಂತರದಲ್ಲಿ ದೆಹಲಿಯ ಸೌತ್ ಎಕ್ಸ್ಟೆನ್ಷನ್, ಕೋಲ್ಕತ್ತದ ಪಾರ್ಕ್ ಸ್ಟ್ರೀಟ್ ಮತ್ತು ಕಾಮಾಕ್ ಸ್ಟ್ರೀಟ್, ಚೆನ್ನೈನ ಅಣ್ಣಾನಗರ್, ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್, ನೊಯಿಡಾದ ಸೆಕ್ಟರ್18 ಮಾರ್ಕೆಟ್, ಪುನಃ ಬೆಂಗಳೂರಿನ ಬ್ರಿಗೇಡ್ ರಸ್ತೆ ಕೊನೆಯದಾಗಿ ಚರ್ಚ್ ಸ್ಟ್ರೀಟ್ ಇವಿಷ್ಟು ಬೀದಿಗಳು ಪ್ರಮುಖ 10 ಸ್ಥಾನವನ್ನು ಪಡೆದುಕೊಂಡಿವೆ.

Related News

spot_img

Revenue Alerts

spot_img

News

spot_img