ಬೆಂಗಳೂರು, ಏ. 19 : ಬೆಂಗಳೂರಿನಲ್ಲಿ ಬರೋಬ್ಬರಿ ಒಂದೂವರೆ ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಭಾರತದ ಮೂಲೆ ಮೂಲೆಗಳಿಂದಲೂ ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರೇ ಹೆಚ್ಚು. ಆದರೆ, ಕೋವಿಡ್ ಸಂದರ್ಭದಲ್ಲಿ ಎಲ್ಲರೂ ವರ್ಕ್ ಫ್ರಮ್ ಹೋಮ್ ಸಿಕ್ಕ ಕಾರಣ, ಎಲ್ಲರೂ ಕೊರೊನಾಗೆ ಹೆದರಿ ತಮ್ಮ ತಮ್ಮ ಊರು ಸೇರಿಕೊಂಡರು. ಊರಿನಲ್ಲಿ ಕೆಲಸ ಮಾಡುತ್ತಾ, ಕೊರೊನಾದಿಂದ ಪಾರಾಗುವ ಜೊತೆಗೆ ಬಾಡಿಗೆ ಹಣವನ್ನೂ ಉಳಿಸುವ ಪ್ರಯತ್ನ ಮಾಡಿದ್ದರು. ಆದರೆ, ಈಗ ಕಳೆದ ವರ್ಷಾರಂಭದಿಂದ ಎಲ್ಲರೂ ಕೆಚೇರಿಗೆ ಹೋಗಬೇಕಾಗಿದ್ದು, ಪ್ರತಿಯೊಬ್ಬರೂ ಬೆಂಗಳೂರಿಗೆ ಬರಲು ಶುರು ಮಾಡಿದ್ದಾರೆ.
ಬೆಂಗಳೂರಿನ ಬಾಡಿಗೆಗಳು ಮೊದಲಿಗಿಂತಲೂ ಎರಡರಷ್ಟು ಹೆಚ್ಚಾಗಿದೆ. ಅದರಲ್ಲೂ ರಿಂಗ್ ರೋಡ್ ಹೊರವಲಯ, ಮಾನ್ಯತಾ ಟೆಕ್ ಪಾರ್ಕ್, ರಾಜಾಜಿನಗರ ಹಾಗೂ ವೈಟ್ ಫೀಲ್ಡ್ ನಲ್ಲಿ ಬಾಡಿಗೆ ಮನೆಯ ಬೆಲೆ ಹೆಚ್ಚಾಗುತ್ತಿದೆ. ಬೆಂಗಳುರಿನಲ್ಲಿ 350ಕ್ಕೂ ಅಧಿಕ ಕಂಪನಿಗಳು ಇದ್ದು, ಸುಮಾರು ಒಂದೂವರೆ ಮಿಲಿಯನ್ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಬಾಡಿಗೆ ಮನೆಗಳು ಬೇಕು ಎಂದು ಈಗ ಎಲ್ಲರೂ ಬಾಡಿಗೆ ಮನೆಗಳನ್ನು ಹುಡುಕು ಹುಡುಕಿ ಸಾಕಾಗಿದ್ದಾರೆ.
ಚಿಕ್ಕ ಚಿಕ್ಕ ಡಬಲ್ ಬೆಡ್ ರೂಮ್ ಬಾಡಿಗೆ ಮನೆಗಳಿಗೂ 50,000 ಬಾಡಿಗೆಯನ್ನು ಕೇಳುತ್ತಿದ್ದಾರಂತೆ. ಈಗ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೆಲೆ ಗಗನಕ್ಕೇರಿದೆ. ಎರಡು ವರ್ಷಕ್ಕೂ ಅಧಿಕ ಸಮಯದಿಂದ ಖಾಲಿ ಬಿದ್ದ ಮನೆ ಮಾಲೀಕರು ಈಗ ತಮ್ಮ ಬಾಡಿಗೆಯನ್ನು ಹೆಚ್ಚಿಸಿದ್ದಾರೆ. ಶೇ. 40 ರಷ್ಟು ಮನೆ ಬಾಡಿಗೆಯನ್ನು ಹೆಚ್ಚಿಸಿದ್ದಾರೆ. ಐಟಿ ಹಬ್ ಹಾಗೂ ಟೆಕ್ ಪಾರ್ಕ್ ಗಳ ಸುತ್ತ ಮುತ್ತ 2-3 ಕಿಲೋ ಮೀಟರ್ ದೂರದವರೆಗೂ ಮನೆ ಬಾಡಿಗೆಯ ಬೆಲೆಗಳು ಗಗನಕ್ಕೇರಿವೆ. 10,000 ಸಾವಿರ ರೂಪಾಯಿಗಿಂತ ಕಡಿಮೆ ಪುಟ್ಟ ರೂಮ್ ಕೂಡ ಸಿಗುತ್ತಿಲ್ಲ.
ಈ ಬಗ್ಗೆ ಅನಾರಕ್ ನಿಂದ ವರದಿಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ ಎರಡರಿಂದ ಮೂರು ಲಕ್ಷ ಮನೆಗಳು ಖಾಲಿ ಇವೆಯಂತೆ. ಅಪಾರ್ಟ್ ಮೆಂಟ್ ಗಳು, ಮನೆಗಳು ಖಾಲಿ ಬಿದ್ದಿವೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಈ ವರದಿಯ ಪ್ರಕಾರ, ಬೆಂಗಳೂರಿನ ಬಾಡಿಗೆ ಏರಿಕೆ ಕಂಡಿದ್ದು, ವೈಟ್‌ಫೀಲ್ಡ್‌ನಲ್ಲಿ ಶೇ. 18 ರಷ್ಟು, ರಾಜಾಜಿನಗರದಲ್ಲಿ ಶೇ. 16 ರಷ್ಟು ಹಾಗೂ ವರ್ತೂರಿನಲ್ಲಿ ಶೇ. 10 ರಷ್ಟು ಬಾಡಿಗೆ ಬೆಲೆ ಹೆಚ್ಚಳವಾಗಿದೆ.