24.2 C
Bengaluru
Sunday, December 22, 2024

ಬೆಂಗಳೂರಿನ ರಿಯಲ್ ಎಸ್ಟೇಟ್ ಶೇ6 ರಷ್ಟು ಹೆಚ್ಚಳ: ಚ.ಅಡಿ ಬೆಲೆ ಎಷ್ಟಾಗಿದೆ ಗೊತ್ತಾ?

ನವದೆಹಲಿ: ಕೋವಿಡ್‌ನಿಂದ ಚೇತರಿಸಿಕೊಂಡಿರುವ ರಿಯಲ್ ಎಸ್ಟೇಟ್ ಉದ್ಯಮ ಮತ್ತೆ ಚೇತರಿಕೆ ಕಾಣಿಸುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ವಸತಿ ಮನೆಗಳು, ಕಮರ್ಷಿಯಲ್ ಮಳಿಗೆಗಳು, ಅಪಾರ್ಟ್‌ಮೆಂಟ್ ಹೀಗೆ ಬಾಡಿಗೆ ಮತ್ತು ಖರೀದಿ ದರಗಳಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಜನರು ಬಾಡಿಗೆ ಮನೆಗಳನ್ನು ಬದಲಾಯಿಸುವ ಬದಲು ಸ್ವಂತ ಮನೆ ಖರೀದಿಸುವ ಬಗ್ಗೆ ಆಸಕ್ತಿ ಹೊಂದುತ್ತಿದ್ದಾರೆ. ಇದೆಲ್ಲದರ ಪರಿಣಾಮ ಬೆಂಗಳೂರು ಸಹಿತ ದೇಶದ ಪ್ರಮುಖ ನಗರಗಳ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೊಸ ಬೆಳವಣಿಗೆ ಕಂಡುಬಂದಿದೆ.

CREDAI, Colliers India ಮತ್ತು Liases Foras ಜಂಟಿ ಸಂಸ್ಥೆಗಳು ನ.16ರಂದು ಈ ವರದಿ ನೀಡಿವೆ. ಈ ವರದಿ ಪ್ರಕಾರ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಅಂದರೆ ಆಸ್ತಿಗಳ ಖರೀದಿ ಮತ್ತು ಮಾರಾಟದ ಸರಾಸರಿಯಲ್ಲಿ ಶೇ 6ರಷ್ಟು ಬೆಳವಣಿಗೆ ಕಂಡಿದೆ.

ಬೆಂಗಳೂರು ನಗರ ವಿಸ್ತಾರಗೊಂಡಿದ್ದು, ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಭೂಮಿಗೆ ಬೆಲೆ ಇದೆಯಾದರೂ ಸಹ ನಗರದ ಸರಾಸರ ಭೂಮಿಯ ಬೆಲೆ ಪ್ರತಿ ಚದರ ಅಡಿಗೆ 8,035 ರೂ. ಇದೆ ಎಂದು ಕ್ರೆಡಾಯ್ ಮತ್ತು ಕೊಲಿಯರ್ ಇಂಡಿಯಾ ಹಾಗೂ ಲಿಯಾಸಿಸ್ ಫೋರಸ್ ಸಿದ್ಧಪಡಿಸಿದ ಸಮೀಕ್ಷಾ ವರದಿಯಲ್ಲಿ ತಿಳಿಸಿವೆ. ಇದು ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡವರ ಮನೋಸ್ಥೈರ್ಯವನ್ನು ಹೆಚ್ಚಳ ಮಾಡಿದೆ.

ದೇಶದ ವಿವಿಧ ನಗರಗಳ ವರದಿ:
ಅದೇ ರೀತಿ ದೆಹಲಿ- ಎನ್‌ಸಿಆರ್‌ನಲ್ಲಿನ ವಸತಿ ಬೆಲೆಗಳು ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಪ್ರತಿ ಚದರ ಅಡಿ ಸರಾಸರಿ 7,741 ರೂ.ನಂತೆ ಶೇ.14 ಪ್ರತಿಶತದಷ್ಟು ವಾರ್ಷಿಕ ಬೆಲೆ ಏರಿಕೆ ಕಂಡಿವೆ.

“ಸೆಪ್ಟೆಂಬರ್ 2020 ರಿಂದ ದೆಹಲಿ-ಎನ್‌ಸಿಆರ್‌ನಲ್ಲಿ ವಸತಿ ಬೆಲೆಗಳು ಏರಿಕೆ ಕಂಡಿವೆ. ದೆಹಲಿ ಎನ್‌ಸಿಆರ್ ಭಾರತದಾದ್ಯಂತ ವಸತಿ ಬೆಲೆಯಲ್ಲಿ ಶೇ. 14 ರಷ್ಟು ಹೆಚ್ಚಳವನ್ನು ಕಂಡಿದೆ. ಗಾಲ್ಫ್ ಕೋರ್ಸ್ ರಸ್ತೆಯು 21 ಪ್ರತಿಶತದಷ್ಟು ಹೆಚ್ಚಿನ ಬೆಲೆ ಏರಿಕೆಯನ್ನು ಕಂಡಿತು, ನಂತರ ಗಾಜಿಯಾಬಾದ್. 2022 ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ ನಗರದಲ್ಲಿ ಮಾರಾಟವಾಗದ ದಾಸ್ತಾನು ವರ್ಷಕ್ಕೆ ಶೇ 11 ರಷ್ಟು ಕಡಿಮೆಯಾಗಿದೆ.

ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಪ್ರಮುಖ ನಿರ್ಮಾಣ ಸಾಮಗ್ರಿಗಳ ಏರುತ್ತಿರುವ ದರಗಳಿಗೆ ಹೋಲಿಸಿದರೆ ಜುಲೈ-ಸೆಪ್ಟೆಂಬರ್ 2022 ರ ಅವಧಿಯಲ್ಲಿ ಎಂಟು ನಗರಗಳಲ್ಲಿ ವಸತಿ ಬೆಲೆಗಳು 6 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿಯು ವಿವರಿಸಿದೆ.

CREDAI ಭಾರತದಲ್ಲಿ ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಅತ್ಯುನ್ನತ ಸಂಸ್ಥೆಯಾಗಿದೆ. ಆದರೆ ಕೊಲಿಯರ್ಸ್ ಇಂಡಿಯಾ ರಿಯಲ್ ಎಸ್ಟೇಟ್ ಸಲಹೆಗಾರ ಮತ್ತು ಲಿಯಾಸಸ್ ಫೋರಸ್ ಡೇಟಾ ಸಂಶೋಧನಾ ಸಂಸ್ಥೆಯಾಗಿದೆ.

“2022 ರ ಆರಂಭದಿಂದಲೂ, ಕಳೆದ ವರ್ಷದಿಂದ ಕಂಡುಬರುವ ಹೆಚ್ಚಿದ ಬೇಡಿಕೆಯ ಹಿನ್ನೆಲೆಯಲ್ಲಿ ವಸತಿ ಬೆಲೆಗಳು ಏರಿಕೆಯಾಗುತ್ತಿವೆ, ಇದು ಇನ್ಪುಟ್ ಬೆಲೆಗಳ ಏರಿಕೆಯೊಂದಿಗೆ ಜೋಡಿಸಲ್ಪಟ್ಟಿದೆ” ಎಂದು ವರದಿ ಹೇಳಿದೆ.

ಅಂಕಿಅಂಶಗಳ ಪ್ರಕಾರ, ದೆಹಲಿಯ ನಂತರ, ಈ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕೋಲ್ಕತ್ತಾದಲ್ಲಿ ಸರಾಸರಿ ವಸತಿ ಬೆಲೆಗಳು ಪ್ರತಿ ಚದರ ಅಡಿಗೆ 6,594 ರೂ. ಇದ್ದು ಶೇ.12ರಷ್ಟು ಏರಿಕೆಯಾಗಿದೆ. ಗುಜರಾತಿನ ಅಹಮದಾಬಾದ್ ನಗರವು ಸರಾಸರಿ ಬೆಲೆಗಳಲ್ಲಿ ಶೇ 11 ರಷ್ಟು ಹೆಚ್ಚಳವನ್ನು ಕಂಡಿದ್ದುಮ ಪ್ರತಿ ಚದರ ಅಡಿಗೆ 6,077 ರೂ. ಆಗಿದೆ. ಪುಣೆಯಲ್ಲಿ ಪ್ರತಿ ಚದರ ಅಡಿಗೆ 8,013 ರೂ. ಇರುವ ಮೂಲಕ ಶೇ 9 ಏರಿಕೆ ಕಂಡಿದೆ.

ಹೈದರಾಬಾದ್‌ನಲ್ಲಿ ಸರಾಸರಿ ವಸತಿ ಬೆಲೆಗಳು ಪ್ರತಿ ಚದರ ಅಡಿಗೆ 9,266 ರೂ. ಇದ್ದು, ಶೇ 8 ರಷ್ಟು ಹೆಚ್ಚಾಗಿದೆ. ಚೆನ್ನೈ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ (MMR) ವಸತಿ ಬೆಲೆಗಳು ಕ್ರಮವಾಗಿ ಪ್ರತಿ ಚದರ ಅಡಿಗೆ 7,222 ರೂ. ಮತ್ತು ಪ್ರತಿ ಚದರ ಅಡಿ 19,485ರೂ. ನಲ್ಲಿ ಸ್ಥಿರವಾಗಿವೆ.

ವರದಿಯ ಪ್ರಕಾರ, ಮುಂಬೈ ಮೆಟ್ರೋ ಪಾಲಿಟನ್ ಪ್ರದೇಶದಲ್ಲಿ ಮಾರಾಟವಾಗದ ಆಸ್ತಿಗಳ ಪ್ರಮಾಣವೂ ಸಹ ಸತತ ಐದನೇ ತ್ರೈಮಾಸಿಕದಲ್ಲಿ ಗಮನಾರ್ಹವಾಗಿ ಕಂಡಿಬಂದಿದೆ. “ಈ ಪ್ರದೇಶದಲ್ಲಿ ಮಾರಾಟವಾಗದ ಆಸ್ತಿಗಳು ವರ್ಷಕ್ಕೆ ಶೇ 21 ಪ್ರತಿಶತ ಏರಿಕೆಯಾಗಿದೆ. ಆದರೆ ವಸತಿ ಬೆಲೆಗಳು ತ್ರೈಮಾಸಿಕ ಆಧಾರದ ಮೇಲೆ ಶೇಕಡಾ 1 ರಷ್ಟು ಸ್ವಲ್ಪಮಟ್ಟಿನ ಕುಸಿತ ಕಂಡಿವೆ. ಆದಾಗ್ಯೂ, ಪಶ್ಚಿಮದ ಉಪನಗರಗಳು (ದಹಿಸರ್‌ನ ಆಚೆಗೆ) 10 ಪ್ರತಿಶತ ವರ್ಷಕ್ಕೆ ಬೆಲೆಗಳಲ್ಲಿ ಹೆಚ್ಚಿನ ಏರಿಕೆಯನ್ನು ಕಂಡಿವೆ ಎಂದು ವರದಿ ಹೇಳಿದೆ.

ಸ್ವಂತ ಮನೆ ಹೊಂದುವ ಪ್ರಾಮುಖ್ಯತೆ:
ಕ್ರೆಡೈ ರಾಷ್ಟ್ರೀಯ ಅಧ್ಯಕ್ಷ ಹರ್ಷವರ್ಧನ್ ಪಟೋಡಿಯಾ ಮಾತನಾಡಿ, “ದೇಶದಾದ್ಯಂತ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಬೆಲೆಗಳ ವಿಷಯದಲ್ಲಿ ಕೆ-ಆಕಾರದ ಚೇತರಿಕೆಗೆ ಸಾಕ್ಷಿಯಾಗಿದೆ. ಸಾಂಕ್ರಾಮಿಕ ರೋಗವು ಬಾಡಿಗೆಗೆ ಬದಲಾಗಿ ಸ್ವಂತ ಮನೆಯನ್ನು ಹೊಂದುವ ಪ್ರಾಮುಖ್ಯತೆಯನ್ನು ಗ್ರಾಹಕರಲ್ಲಿ ಹೆಚ್ಚಳ ಮಾಡಿದೆ,” ಎಂದು ಹೇಳಿದ್ದಾರೆ.

ಕಾಲಿಯರ್ಸ್ ಇಂಡಿಯಾ ಸಿಇಒ ರಮೇಶ್ ನಾಯರ್ ಮಾತನಾಡಿ, “ಹಣದುಬ್ಬರ ಏರಿಕೆ ಮತ್ತು ಇನ್‌ಪುಟ್ ವೆಚ್ಚಗಳ ಹೆಚ್ಚಳವು ಭಾರತದಲ್ಲಿನ ವಸತಿ ಬೆಲೆಗಳ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ವಸತಿ ಚಟುವಟಿಕೆಗಳು ಪ್ರಬಲವಾಗಿ ಮುಂದುವರಿದರೂ, ಆರ್ಥಿಕ ಹಿಂಜರಿತದ ಒತ್ತಡಗಳು ಸಂಬಳ ಪಡೆಯುವ ವರ್ಗದ ಮೇಲೆ ಪ್ರಭಾವ ಬೀರಬಹುದು, ಅವರು ದೇಶದ ಪ್ರಮುಖ ನಗರಗಳಲ್ಲಿ ಮನೆ ಖರೀದಿಯಲ್ಲಿ ಗಮನಾರ್ಹ ಪಾಲನ್ನು ಹೊಂದಿದ್ದಾರೆ” ಎಂದು ಅವರು ಹೇಳಿದರು.

ವಸತಿ ಬೇಡಿಕೆಯ ಕುರಿತು, ಲಿಯಾಸಸ್ ಫೋರಸ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕಪೂರ್, ಈ ಕ್ಯಾಲೆಂಡರ್ ವರ್ಷದ ಮುಕ್ಕಾಲು ಭಾಗದ ಒಟ್ಟು ಮಾರಾಟವು ಹಿಂದಿನ ವರ್ಷಕ್ಕಿಂತ 16 ಪ್ರತಿಶತ ಹೆಚ್ಚಾಗಿದೆ ಎಂದು ಹೇಳಿದರು.

Related News

spot_img

Revenue Alerts

spot_img

News

spot_img