27.3 C
Bengaluru
Monday, July 1, 2024

ಹೊಸ ವರ್ಷಕ್ಕೆ ಬೆಂಗಳೂರು ಪೊಲೀಸ್ ಇಲಾಖೆಯಿಂದ ಮುಂಜಾಗ್ರತೆ ಕ್ರಮ ಬಿಡುಗಡೆ..!

ಬೆಂಗಳೂರಿನ ಹೊಸ ವರ್ಷವನ್ನು 31-12-2023 ರಂದು ರಾತ್ರಿ ಹೇಗೆ ಆಚರಿಸುವ ಸಂದರ್ಭದಲ್ಲಿ ತೆಗೆದುಕೊಳ್ಳ ಬೇಕಾದ ಮುಂಜಾಗ್ರತೆ ಕ್ರಮಗಳನ್ನು ಬೆಂಗಳೂರಿನ ಪೊಲೀಸ್ ಇಲಾಖೆ(Bengaluru police department) ಬಿಡುಗಡೆ ಮಾಡಿದೆ.

31-12-2023 ರಂದು ಹೊಸ ವರ್ಷ ಆಚರಣೆ (New Year celebration)ಹಿನ್ನೆಲೆ ಬೆಂಗಳೂರು ನಗರ ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತರು ಜ್ಞಾಪನೆಯಲ್ಲಿ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಹೊಸ ವರ್ಷಾಚರಣೆಗೆ ನಗರದಲ್ಲಿ ಭದ್ರತಾ ಕ್ರಮಗಳನ್ನು ಯೋಜಿಸಿರುವ ಬೆಂಗಳೂರು ಪೊಲೀಸರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ.

ಬೆಂಗಳೂರು ಪೊಲೀಸರಿಂದ ಫುಲ್ ಹೈ ಅಲರ್ಟ್…!

* ಉಪ ಪೊಲೀಸ್ ಆಯುಕ್ತರುಗಳು ಹೊಸ ವರ್ಷಾಚರಣೆ ಬಂದೋಬಸ್ತ್ ಯೋಜನೆಯಲ್ಲಿ ಸೆಕ್ಟರ್‌ವೈಸ್ ಬಂದೋಬಸ್ತ್ ಮತ್ತು ಸೆಕ್ಟರ್ ಮೊಬೈಲ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಿ, ಅವುಗಳಿಗೆ ನಿಗದಿತ ಸಮಯ ಹಾಗೂ ನಿಗದಿತ ರೂಟ್ ಅನ್ನು ಕೊಟ್ಟು, ಸೆಕ್ಟರ್ ಪೆಟ್ರೋಲಿಂಗ್ ಅನ್ನು ವ್ಯವಸ್ಥಿತವಾಗಿ ಏರ್ಪಡಿಸಲು ಸೂಚಿಸಲಾಗಿದೆ.

* ಹೊಸ ವರ್ಷ ವಿರೋಧಿಸುವ ಸಂಘಟನೆಗಳ ಗುಪ್ತ ಮಾಹಿತಿ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು.

* ಮಾಲ್ ಗಳ ವ್ಯವಸ್ಥಾಪಕರಿಗೆ ಲಿಖಿತ ಸೂಚನೆ. ಮಾಲ್ ಒಳಬರುವ ವ್ಯಕ್ತಿಗಳ ವೈಯಕ್ತಿಕ ಶೋಧನೆ.

* ಮಾಲ್ ಗಳಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವ ಬಗ್ಗೆ, ಮಾಲ್ ಗಳಿಗೆ ಆಗಮಿಸುವ ವಾಹನಗಳ ಪರಿಶೀಲನೆ

* ಬಂದೋಬಸ್ತ್ ಗೆ ನೇಮಕ ಮಾಡಿದ ಎಲ್ಲಾ ಅಧಿಕಾರಿಗಳು ಸರ್ವೀಸ್ ರಿವಾಲ್ವಾರ್, ಹೆಲ್ಮೆಟ್ ಮತ್ತು ಲಾಠಿಗಳನ್ನು ಹೊಂದಿರತಕ್ಕದ್ದು.

* ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಕಿಸೆ ಕಳ್ಳತನ, ಸರ ಅಪಹರಣ ಇತ್ಯಾದಿಗಳು ನಡೆಯುವ ಸಾದ್ಯತೆ ಆದ್ದರಿಂದ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸುವುದು.

* ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜರ್ಸಿ ಹಾಗೂ ರೈನ್ ಕೋಟ್ ಹೊಂದಿರತಕ್ಕದ್ದು.

* ಕುಡಿದು ರಸ್ತೆಗಳಲ್ಲಿ ಗಲಾಟೆ ಮಾಡಿದರೆ ವಶಕ್ಕೆ ಪಡೆಯಲಾಗುವುದು.

* ಹೆಣ್ಣು ಮಕ್ಕಳನ್ನು ಚುಡಾಯಿಸುವವರ ವಿರುದ್ದ ಕಾನೂನು ಕ್ರಮ.

* ಸಂಚಾರ ಪೊಲೀಸರು, ಜಂಟಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಸಂಚಾರ ವ್ಯವಸ್ಥೆಯ ಪೂರ್ಣ ಉಸ್ತುವಾರಿ ವಹಿಸುವುದು.

Related News

spot_img

Revenue Alerts

spot_img

News

spot_img