20 C
Bengaluru
Tuesday, July 9, 2024

‘ರಿಯಲ್ ಎಸ್ಟೇಟ್ ನಮ್ಮ ಉದ್ಯೋಗ’ ಎಂದ ಬೆಂಗಳೂರಿನ ಶಾಸಕರಿವರು!

ಹಿಂದೊಂದು ಕಾಲವಿತ್ತು. ನಾವು ರಾಜಕಾರಣಿಗಳು ಎಂದು ಹೇಳಿದರೆ ಜೀವನಕ್ಕೆ ಏನು ಮಾಡಿಕೊಂಡಿದ್ದೀರಿ ಎಂದು ಪ್ರಶ್ನೆ ಕೇಳಿಬರುತ್ತಿತ್ತು. ಕಾರಣ ರಾಜಕಾರಣಗಳು ಯಾವುದೇ ಲಾಭದಾಯಕ ಹುದ್ದೆಗಳಲ್ಲಿ ಇಲ್ಲದೆ ಕೇವಲ ಜನಸೇವೆಯನ್ನೇ ನಂಬಿಕೊಂಡು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಜನಪ್ರತಿನಿಧಿಗಳಿಗೆ ಬರುತ್ತಿದ್ದ ಗೌರವಧನದಲ್ಲಿಯೇ ಜೀವನ ನಡೆಸುತ್ತಿದ್ದರು. ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ ದೊಡ್ಡ ದೊಡ್ಡ ಉದ್ದಿಮೆಗಳಲ್ಲಿರುವ ಜನ ತಮ್ಮ ಸಾಮ್ರಾಜ್ಯಗಳನ್ನು ಉಳಿಸಿಕೊಳ್ಳಲು ರಾಜಕಾಣಕ್ಕೆ ಬರುವ ಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳು ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ತಮ್ಮ ನೂರಾರು ಕೋಟಿ ಆಸ್ತಿಯನ್ನು ಚುನಾವಣೆ ಸಂದರ್ಭದಲ್ಲಿ ಘೋಷಿಸಿಕೊಳ್ಳುತ್ತಾರೆ. ಹೀಗೆ ಅಧಿಕ ಆಸ್ತಿ ಘೋಷಿಸಿಕೊಂಡವರ ಪೈಕಿ ಬಹುತೇಕ ಜನ ರಿಯಲ್ ಎಸ್ಟೇಟ್‌ ಮೂಲದಿಂದ ಬಂದವರು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.

ಬೆಂಗಳೂರಿನಲ್ಲಿ ಒಟ್ಟಾರೆ 28 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಕೆಲವರು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಿಯಲ್ ಎಸ್ಟೇಟ್ ತಮ್ಮ ಉದ್ಯೋಗ ಎಂದು ಘೋಷಿಸಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇದಕ್ಕೆ ಕಾರಣಗಳು ಕೆರೆಗಳು ಮತ್ತು ರಾಜಕಾಲುವೆಗಳ ಒತ್ತವರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಬಿಬಿಎಂಪಿ ಅಥವಾ ಬಿಡಿಗೆ ಇಂತಹ ಒತ್ತುವರಿಗಳನ್ನು ತೆರವುಗೊಳಿಸಲು ಮುಂದಾದರೆ, ಅದಕ್ಕೆ ರಿಯಲ್ ಎಸ್ಟೇಟ್ ನಂಟು ಹೊಂದಿರುವ ಬೆಂಗಳೂರು ಮೂಲದ ಶಾಸಕರೇ ಅದಕ್ಕೆ ಅಡ್ಡಿ ಎಂಬುದು ಬಹಿರಂಗವಾಗಿದೆ. ಅದಕ್ಕೆ ಆ ಪಕ್ಷ, ಈ ಪಕ್ಷ ಎಂಬ ಭೇದವಿಲ್ಲ. ಉದ್ಯಮದ ಹಿತಾಸಕ್ತಿಗಳು ಬಂದಾಗ ಎಲ್ಲರೂ ಒಂದು ಎಂಬುದೂ ಸಹ ಕಳೆದ ಬೆಂಗಳೂರು ಪ್ರವಾಹ ಬಹಿರಂಗಪಡಿಸಿದೆ.

ರಿಯಲ್ ಎಸ್ಟೇಟ್ ನಮ್ಮ ಉದ್ಯೋಗ:
ಬೊಮ್ಮನಹಳ್ಳಿ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರು ಎರಡು ರಿಯಲ್ ಎಸ್ಟೇಟ್ ಸಂಸ್ಥೆಗಳ ನಿರ್ದೇಶಕ ಮತ್ತು ಪಾಲುದಾರ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಅವರು ತಮ್ಮ ಕಂಪನಿಗಳು ಬೆಂಗಳೂರು ನಗರ ವ್ಯಾಪ್ತಿಯ ಹೊರಗೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದ್ದಾರೆ.

ಇನ್ನೂ ಬೆಂಗಳೂರಿನ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಅವರು ರಾಜಕೀಯಕ್ಕೆ ಬರುವ ಮುನ್ನವೇ ‘ಲೇಔಟ್ ಕೃಷ್ಣಪ್ಪ’ ಎಂಬ ಹೆಸರು ಚಿರಪರಿಚಿತ. ಕೃಷ್ಣಪ್ಪ ಟವರು ಅಭಿವೃದ್ಧಿಪಡಿಸಿದ ಲೇಔಟ್‌ಗಳಲ್ಲಿ ಯಾವುದೇ ರೀತಿಯ ಅತಿಕ್ರಮಣಗಳು ಆಗಿಲ್ಲ ಎಂದು ತಿಳಿಸಿದ್ದಾರೆ.

ಅದೇ ರೀತಿ ತಮ್ಮ ಮುಖ್ಯ ವ್ಯವಹಾರ ರಿಯಲ್ ಎಸ್ಟೇಟ್ ಎಂದು ಹೇಳಿಕೊಂಡಿದ್ದ ಮತ್ತೊಬ್ಬ ಶಾಸಕರು ಎಂದರೆ ಚಿಕ್ಕಪೇಟೆಯ ಬಿಜೆಪಿ ಶಾಸಕರಾದ ಉದಯ್ ಬಿ.ಗರುಡಾಚಾರ್ ಅವರು. ರಿಯಲ್ ಎಸ್ಟೇಟ್ ಎಂಬುದು ಕಾನೂನುಬದ್ಧ ಉದ್ಯೋಗ, ಇದರಿಂದ ನಾನು ಜೀವನೋಪಾಯ ಕಂಡಿದ್ದೇವೆ. ವಿಭಿನ್ನವಾಗಿರುವ ರಾಜಕೀಯ ಜನರ ಸೇವೆಗಾಗಿ ಎಂದು ಶಾಸಕ ಉದಯ್ ಗರುಡಾಚಾರ್ ಸ್ಪಷ್ಟಪಡಿಸಿದ್ದರು.

ವಿವಿಧ ಮೂಲಗಳಿಂದ ದೊರೆತ ಅಂಕಿ ಅಂಶ ನೋಡಿದರೆ ಸರ್ಕಾರದಿಂದ ಒತ್ತುವರಿ ಜಾಗದ ಅರ್ಧದಷ್ಟು ಕೂಡ ರಕ್ಷಿಸಲಾಗಿಲ್ಲ ಎಂಬುದು ತಿಳಿಯುತ್ತದೆ. ಇದಕ್ಕೆ ಬೆಂಗಳೂರು ಪ್ರತಿನಿಧಿಸುವ ಅನೇಕ ಶಾಸಕರು ರಿಯಲ್‌ ಎಸ್ಟೇಟ್ ಉದ್ಯಮದಲ್ಲಿ ಪಾಲನ್ನು ಹೊಂದಿದ್ದಾರೆ. ಶಾಸಕ ಸತೀಶ್ ರೆಡ್ಡಿ ಅವರನ್ನು ಹೊರತುಪಡಿಸಿದರೆ ಬೇರಾವುದೇ ಶಾಸಕರು ತಮ್ಮ ರಿಯಲ್ ಎಸ್ಟೇಟ್ ಉದ್ಯೋಗ ಬಗ್ಗೆ ಅಧಿಕೃತಪಡಿಸಿಲ್ಲ. ಆದರೆ, ಶಾಸಕರು ರಿಯಲ್ ಎಸ್ಟೇಟ್ ಪಾಲುದಾರಿಕೆಯ ವಾಸ್ತವವನ್ನು ಮರೆಮಾಚಿಲ್ಲ. ಬೆಂಗಳೂರಿನ ಶಾಸಕರ ಪೈಕಿ 11 ಶಾಸಕರು ಕೆಲ ಉದ್ಯಮಗಳನ್ನು ತಮ್ಮ ವೃತ್ತಿ ಎಂದು ಘೋಷಿಸಿದ್ದು, ಅದರಲ್ಲಿ ರಿಯಲ್ ಎಸ್ಟೇಟ್ ಸಹ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

Related News

spot_img

Revenue Alerts

spot_img

News

spot_img