26.4 C
Bengaluru
Monday, December 23, 2024

ಬೆಂಗಳೂರು: 6 ಲಕ್ಷ ‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ಭಾಗ್ಯ!

ಚುನಾವಣೆಗೆ ಮುನ್ನ ಕಂದಾಯ ಇಲಾಖೆ ಮೂಲಕ ಭರ್ಜರಿ ಆದಾಯ ಸಂಗ್ರಹಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ‘ಬಿ’ ಹೊಂದಿರುವ ಆಸ್ತಿಗಳಿಗೆ ‘ಎ’ ಖಾತಾ ಮಾಡಿಕೊಡಲು ನಿರ್ಧರಿಸಿದೆ. ಎರಡು ತಿಂಗಳುಗಳಲ್ಲಿ ರಾಜ್ಯದಾದ್ಯಂತ ಇರುವ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಪ್ರಮಾಣಪತ್ರ ನೀಡಲು ಮುಂದಾಗಿದೆ. ಇದರಿಂದಾಗಿ ಬೆಂಗಳೂರು ಒಂದರಲ್ಲೇ 6 ಲಕ್ಷಕ್ಕೂ ಅಧಿಕ ಬಿ ಖಾತಾ ಆಸ್ತಿ ಮಾಲೀಕರಿಗೆ ಅನುಕೂಲ.

ಇತ್ತೀಚೆಗಿನ ಮಾಹಿತಿ ಪ್ರಕಾರ, ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಮುಂದಿನ ಎರಡು ತಿಂಗಳುಗಳಲ್ಲಿ ‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ಪ್ರಮಾಣಪತ್ರ ವಿತರಿಸುವುದಾಗಿ ಘೋಷಣೆ ಮಾಡಿದ್ದಾರೆ. ‘ಬಿ’ ಖಾತಾ ಎಂದರೆ ಆಸ್ತಿಯ ದಾಖಲೆಗಳಲ್ಲಿ ಕೆಲವು ನ್ಯೂನತೆ ಅಥವಾ ಅಸಮರ್ಪಕ ಅಂಶಗಳನ್ನು ಸೂಚಿಸುತ್ತದೆ. ಅದೇ ಎ ಖಾತಾದಲ್ಲಿ, ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ವಹಿವಾಟಿಗೆ ಸೂಕ್ತವಾಗಿದೆ ಎಂದು ಪ್ರಮಾಣಪತ್ರ ನೀಡಲಾಗುತ್ತದೆ.

ಕಟ್ಟಡ ಬೈಲಾ ಉಲ್ಲಂಘನೆಯ ಪರಿಶೀಲನೆ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಸೇರಿದಂತೆ ರಾಜ್ಯದ ಹಲವು ಸ್ಥಳೀಯ ಆಡಳಿತಗಳು ದಾಖಲೆಗಳ ಅಸಮರ್ಪಕತೆ ಕಾರಣಕ್ಕೆ ಎ ಖಾತಾ ಪ್ರಮಾಣಪತ್ರ ವಿತರಣೆಯನ್ನು ಸ್ಥಗಿತಗೊಳಿಸಿದ್ದವು. ಬದಲಾಗಿ ಈ ಆಸ್ತಿಗಳನ್ನು ಬಿ ಖಾತಾ ಯಾದಿಯಲ್ಲಿ ನಮೂದಿಸಿ, ಅವುಗಳಿಗೆ ಬಿ ಖಾತಾ ಹಣೆಪಟ್ಟಿ ಕಟ್ಟಿದ್ದವು.

ಇತ್ತೀಚೆಗಿನ ಸಭೆಯಲ್ಲಿ, ರಾಜ್ಯದ 10 ನಗರ ಪಾಲಿಕೆಗಳಲ್ಲಿ ಬಿ ಖಾತಾ ಆಸ್ತಿಗಳ ಪರಿವರ್ತಿಸುವ ಪ್ರಕ್ರಿಯೆಯನ್ನು ಆರಂಭಿಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯು ಸುಗಮವಾಗಿ ನಡೆಯುವಂತಾಗಲು, ಅಧಿಕಾರಿಗಳು ಪರಿವರ್ತನೆ ವಿಧಾನದ ಕಾನೂನು ಪರಿಣಾಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಅದೇನೇ ಇದ್ದರೂ ಆಸ್ತಿಗಳ ಮಾಲೀಕರು ಕೆಲವು ಮಾನದಂಡಗಳನ್ನು ಪೂರೈಸಲೇಬೇಕು ಮತ್ತು ಸುಧಾರಣೆಗೆ ಸಂಬಂಧಿಸಿದ ಶುಲ್ಕವನ್ನು ಭರಿಸಬೇಕಾಗುತ್ತದೆ. ಬೆಂಗಳೂರು ಓಂದರಲ್ಲೇ 6 ಲಕ್ಷಕ್ಕೂ ಅಧಿಕ ಬಿ ಖಾತಾ ಮಾಲೀಕರಿದ್ದಾರೆ.

ಈ ನಡೆಯಿಂದಾಗಿ ಸುಧಾರಣಾ ಶುಲ್ಕದ ರೂಪದಲ್ಲಿ ಸರ್ಕಾರಕ್ಕೆ ಭಾರಿ ಆದಾಯವೂ ಹರಿದುಬರಲಿದೆ. ಬೃಹತ್ ಬೆಂಳೂರು ಮಹಾನಗರ ಪಾಲಿಕೆಯು ಈ ಬಾರಿಯ ತನ್ನ ಬಜೆಟ್‌ನಲ್ಲಿ, ಬಿ ಖಾತಾ ಪರಿವರ್ತನೆ ನಿಯಮದಿಂದಾಗಿ ಈ ವರ್ಷದಲ್ಲಿ 1,000 ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಇದೆ ಎಂದು ಹೇಳಿದೆ.

Related News

spot_img

Revenue Alerts

spot_img

News

spot_img