ಬೆಂಗಳೂರು, ಜು. 28 : ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ಪ್ರತಿಯೊಂದರ ಬೆಲೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಬಾಡಿಗೆ ಮನೆಗಳ ಬೆಲೆ ಕೈಗೆಟುಕದ ರೀತಿಯಲ್ಲಿ ಬೆಳೆಯುತ್ತಿದೆ. ಸಾಮಾನ್ಯವಾಗಿ ಬಾಡಿಗೆ ಮನೆಯಲ್ಲಿ ಬಾಡಿಗೆಯನ್ನು ಪ್ರತಿ ವರ್ಷ ಶೇ.5 ರಿಂದ 10 ರಷ್ಟು ಬಾಡಿಗೆ ಹಣವನ್ನು ಹೆಚ್ಚಿಸಲಾಗುತ್ತದೆ. ಹೀಗಿರುವಾಗ ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮವೂ ಹೆಚ್ಚಾಗುತ್ತಿದ್ದು, ಬೇಡಿಕೆಯೂ ಅಧಿಕವಾಗಿದೆ.
ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 25ರಷ್ಟು ಅಧಿಕವಾಗಿದೆ. ಅದರಲ್ಲೂ ಪ್ರಮುಖ ನಗರಗಳಲ್ಲಿ ಮನೆ ಬಾಡಿಗೆ ಬೆಲೆ ದ್ವಿಗುಣಗೊಂಡಿದೆ. ಕೋರಮಂಗಲ, ಸರ್ಜಾಪುರ, ವೈಟ್ ಫೀಲ್ಡ್, ಮಾರತಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಮನೆ ಬಾಡಿಗೆ ದರ ಹೆಚ್ಚಾಗಿದೆ. ಈ ನಗರಗಳಲ್ಲಿ ಶೇ. 30 ರಿಂದ 40ರಷ್ಟು ಬಾಡಿಗೆ ಮನೆ ಮೇಲಿನ ದರಗಳು ಹೆಚ್ಚಾಗಿವೆ. 2 ಬಿಎಚ್ಕೆ ಮನೆಗಳಿಗೆ 25000 ರೂಪಾಯಿಗಳಿಂದ 32,400 ರೂ.ನಷ್ಟು ಬಾಡಿಗೆ ಬೆಲೆಯನ್ನು ನಿಗದಿಪಡಿಸಲಾಗಿದೆ.
ಉಳಿದ ನಗರಗಳಲ್ಲಿ 2ಬಿಎಚ್ ಕೆ ಮನೆಗಳಿಗೆ 15000 ದಿಂದ 22000 ರೂಪಾಯಿಯವರೆಗೂ ಇದೆ. ಇದರಿಂದ ಬೆಂಗಳೂರಿನಲ್ಲಿ ಜೀವನ ಮಾಡುವುದೇ ಕಷ್ಟ ಎಂದು ಹಲವರು ಹೇಳುತ್ತಿದ್ದಾರೆ. ಬೆಂಗಳೂರಿನ ಸ್ಲಂ ಏರಿಯಾಗಳು ಕೂಡ ಕಾಸ್ಟ್ಲಿ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಬೆಂಗಳೂರಿನ ಬಾಡಿಗೆಗಳು ಮೊದಲಿಗಿಂತಲೂ ಎರಡರಷ್ಟು ಹೆಚ್ಚಾಗಿದೆ. ಅದರಲ್ಲೂ ರಿಂಗ್ ರೋಡ್ ಹೊರವಲಯ, ಮಾನ್ಯತಾ ಟೆಕ್ ಪಾರ್ಕ್, ರಾಜಾಜಿನಗರ ಹಾಗೂ ವೈಟ್ ಫೀಲ್ಡ್ ನಲ್ಲಿ ಬಾಡಿಗೆ ಮನೆಯ ಬೆಲೆ ಹೆಚ್ಚಾಗುತ್ತಿದೆ.
ಇದರಿಂದ ಬಾಡಿಗೆ ಮನೆಯ್ನು ಹುಡುಕುವುದಕ್ಕೂ ಕಷ್ಟವಾಗುತ್ತದೆ. ಇದಕ್ಕಾಗಿ ಬ್ರೋಕರ್ ಗಳು ಹೊಸ ಮಾರ್ಗವನ್ನು ಹುಡುಕಿದ್ದಾರೆ. ಬಾಡಿಗೆ ಮನೆಯನ್ನು ಹುಡುಕುತ್ತಿರುವವರಿಗೆ ಹೊಸ ಪ್ಯಾಕೇಜ್ ಅನ್ನು ನೀಡಿದ್ದಾರೆ. ಹೌಸ್ ಹಂಟ್ ಎಂಬ ಪ್ಯಾಕೇಜ್ ಅನ್ನು ಬ್ರೋಕರ್ ಗಳು ಪರಿಚಯಿಸಿದ್ದು, 10,000 ದಿಂದ ಶುರುವಾಗುತ್ತದೆ. ಬ್ರೋಕರ್ ಗಳು ಬಾಡಿಗೆದಾರರಿಗೆ ಬಯಸುವಂತಹ 6 ಮನೆಗಳನ್ನು ತೋರಿಸುತ್ತಾರೆ. ಅದೂ ಕೂಡ ಅವರನ್ನು ತಮ್ಮ ಸ್ಥಳದಿಂದ ಕಾರ್ ನಲ್ಲಿ ಪಿಕ್ ಮಾಡಿ ಡ್ರಾಪ್ ಕೂಡ ಮಾಡುತ್ತಾರೆ. ನೋಡ ನೀವೂ ಬೆಂಗಳೂರಿನಲ್ಲಿ ಬಾಡಿಗೆ ಮನೆಯನ್ನು ಹುಡುಕುತ್ತಿದ್ದರೆ, ಈ ಆಫರ್ ನ ಸೌಲಭ್ಯ ಪಡೆಯಿರಿ.