23.9 C
Bengaluru
Sunday, December 22, 2024

ಪೋಸ್ಟ್ ಆಫೀಸ್ ನ ಪ್ರೀಮಿಯಂ ಉಳಿತಾಯ ಖಾತೆಯ ಪ್ರಯೋಜನಗಳು

ಬೆಂಗಳೂರು, ಫೆ. 07 : ಒಂದು ಸಲ ಆಸ್ಪತ್ರೆಗೆ ಹೋದರೆ, ಜೇಬು ಖಾಲಿಯಾಗುವ ತನಕ ಹೊರಗೆ ಬರುವ ಮಾತೇ ಇಲ್ಲ. ದುಡಿದ ಹಣವನ್ನೆಲ್ಲಾ ಆಸ್ಪತ್ರೆಗೆ ಕಟ್ಟ ಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಲ್ಳುವ ಸಲುವಾಗಿಯೇ ಈಗ ಎಲ್ಲರೂ ಆರೋಗ್ಯ ವಿಮೆಯನ್ನು ಮಾಡಿಸುತ್ತಾರೆ. ಇನ್ನು ಕಂಪನಿಗಳು ಕೂಡ ತಮ್ಮ ಉದ್ಯೋಗಿ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ವಿಮೆಯನ್ನು ಮಾಡಿಸುತ್ತದೆ. ಉದ್ಯೋಗಿಯ ಸಂಬಳದಲ್ಲೇ ಇದಕ್ಕೆ ಹಣವನ್ನು ಕಡಿತಗೊಳಿಸುತ್ತದೆ. ಆರೋಗ್ಯ ವಿಮೆ ಈಗ ಪ್ರತಿಯೊಂದು ಕುಟುಂಬದ ಆಪ್ತಮಿತ್ರನಾಗಿದ್ದಾನೆ ಎಂದರೆ ತಪ್ಪಾಗುವುದಿಲ್ಲ. ಆರೋಗ್ಯ ವಿಮೆನ್ನು ಮಾಡಿಸುವುದು ಸಾಕಷ್ಟು ರೀತಿಯಲ್ಲಿ ಸಹಕಾರಿಯಾಗಿದೆ.

ಹಾಗಾದರೆ, ಆರೋಗ್ಯ ವಿಮೆಯನ್ನು ಮಾಡಿಸುವ ಮುನ್ನ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ನೋಡೋಣ ಬನ್ನಿ.

ಕೋ-ಪೇ ನಿಯಮದ ಬಗ್ಗೆ ತಿಳಿಯಿರಿ: ನೀವು ಹೊಸದಾಗಿ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳುತ್ತಿದ್ದೀರಾ ಎಂದರೆ ಸಾಧ್ಯವಾದಷ್ಟು ಕೋ-ಪೇ ನಿಯಮ ಇಲ್ಲದ ಇನ್ಶುರೆನ್ಸ್ ಅನ್ನು ಆರಿಸಿಕೊಳ್ಳಿ. ಕೋ-ಪೇ ನಿಯಮ ಇರುವ ಇನ್ಶುರೆನ್ಸ್ ಅನ್ನು ಖರೀದಿಸಿದರೆ, ಕ್ಲೇಮ್ ಮಾಡುವಾಗ ಮತ್ತೆ ನೀವು ಹಣ ಕಟ್ಟಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಬಿಲ್ ಕಟ್ಟುವಾಗ ಕಂಪನಿಯ ಜೊತೆಗೆ ನಾವೂ ಕೂಡ ಹಣವನ್ನು ಕಟ್ಟಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಬಿಲ್ ಒಂದು ಲಕ್ಷವಾಗಿದ್ದರೆ, ನೀವು ಇಪ್ಪತ್ತು ಸಾವಿರ ರೂಪಾಯಿಯನ್ನು ಕಟ್ಟಬೇಕಾಗುತ್ತದೆ. ಉಳಿದದ್ದನ್ನು ಕಂಪನಿ ಕಟ್ಟುತ್ತದೆ.

 

ಜೋನಲ್‌ ಕೋ-ಪೇ ನಿಯಮ: ಇದನ್ನು ನಿರ್ದಿಷ್ಟ ವಲಯದಿಂದ ಹೊರಗೆ ಚಿಕಿತ್ಸೆ ಯನ್ನು ಪಡೆಯುವುದಾದರೆ, ಸಹಪಾವತಿ ಮಾಡಬೇಕು. ಈ ನಿಯಮ ಹೇಗೆ ಎಂದರೆ, ನೀವು ಈಗ ಬೆಂಗಳುರಿನ ವ್ಯಾಪ್ತಿಗೆ ಇನ್ಶುರೆನ್ಸ್‌ ಅನ್ನು ಪಡೆದಿದ್ದರೆ, ನೀವು ಮೈಸೂರು ಅಥವಾ ಹಾಸನದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ವಿಮೆ ಕ್ಲೈಮ್‌ ಆಗುವುದಿಲ್ಲ. ಶೇ.30 ರಷ್ಟು ಮೊತ್ತವನ್ನು ನೀವು ಕಟ್ಟಬೇಕಾಗುತ್ತದೆ.

ಪರಿಗಣಿಸದ ಅಂಶಗಳು: ಆರೋಗ್ಯ ವಿಮೆಯನ್ನು ಪಡೆಯುವಾಗ ಕೆಲವು ಇನ್ಶುರೆನ್ಸ್‌ ವ್ಯಾಪ್ತಿಗೆ ಒಳಪಡುವುದಿಲ್ಲ. ಅಂದರೆ, ಮದ್ಯಪಾನ, ಡ್ರಗ್ಸ್‌, ಧೂಮಪಾನ ಸೇವಿಸುವುದರಿಂದ ಬರುವ ಕೆಲ ಆರೋಗ್ಯ ಸಮಸ್ಯೆಗಳಿಗೆ ಇನ್ಶುರೆನ್ಸ್‌ ಕವರ್‌ ಆಗುವುದಿಲ್ಲ. ಇನ್ನು ಅಪಘಾತ ಸಂಭವಿಸಿ ಕಾಸ್ಮೆಟಿಕ್‌, ಡೆಂಟಲ್‌ ಚಿಕಿತ್ಸೆಗೆ ಇನ್ಶುರೆನ್ಸ್‌ ಇರುತ್ತದೆ. ಆದರೆ, ಉಳಿದ ಸಂದರ್ಭದಲ್ಲಿ ಕಾಸ್ಮೆಟಿಕ್‌ ಸರ್ಜರಿ ಹಾಗೂ ಡೆಂಟಲ್‌ ಗೆ ವಿಮೆ ಕ್ಲೈಮ್‌ ಮಾಡಲು ಸಾಧ್ಯ ಇರುವುದಿಲ್ಲ. ಇದರೊಂದಿಗೆ ಹುಟ್ಟಿನಿಂದ ಬಂದ ಖಾಯಿಲೆಗಳಿಗೆ, ಯುದ್ಧ ಅಥವಾ ಕ್ರೀಡೆಯಿಂದಾದ ಗಾಯಗಳಿಗೆ ಇನ್ಶುರೆನ್ಸ್‌ ಕ್ಲೈಮ್‌ ಮಾಡಲು ಸಾಧ್ಯವಾಗದು. ಈ ಬಗ್ಗೆಯೂ ನೀವು ಗಮನದಲ್ಲಿಟ್ಟುಕೊಂಡು ಆರೋಗ್ಯ ವಿಮೆಯನ್ನು ಪಡೆಯಬೇಕು.

ವೈಟಿಂಗ್‌ ಪೀರಿಯಡ್:‌ ಆರೋಗ್ಯ ವಿಮೆಯಲ್ಲಿ ಕೆಲ ಚಿಕಿತ್ಸೆಗಳಿಗೆ ಕಾಲಮಿತಿಯನ್ನು ನಿಗದಿ ಪಡಿಸಲಾಗುತ್ತದೆ. ಇನ್ಶುರೆನ್ಸ್ ಪಡೆದ ಮೇಲೆ ನಿಮಗೆ ಅಸ್ತಮಾ ಇರುವುದು ತಿಳಿದರೆ, ತಕ್ಷಣಕ್ಕೆ ಕ್ಲೈಮ್‌ ಮಾಡುವುದು ಅಸಾಧ್ಯ. ಕೆಲ ದಿನಗಳ ಕಾಲ ಇದಕ್ಕಾಗಿ ವೈಟ್‌ ಮಾಡಬೇಕಾಗುತ್ತದೆ.

ಮಿತಿ ಇಲ್ಲದ ವಿಮೆ: ಮಿತಿ ಇಲ್ಲದ ವಿಮೆ ಎಂದರೆ, ಆಸ್ಪತ್ರೆಯಲ್ಲಿ ನರ್ಸಿಂಗ್‌ ಚಾರ್ಜ್‌, ರೂಮ್‌ ಬಾಡಿಗೆ, ಡಾಕ್ಟರ್‌ ಫೀಸ್‌, ಆಂಬ್ಯೂಲೆನ್ಸ್‌ ಶುಲ್ಕವನ್ನು ಇಂತಿಷ್ಟು ಎಂದು ವಿಮಾ ಕಂಪನಿಗಳು ನೀಡುತ್ತವೆ. ಆದರೆ, ಮೊತ್ತ ಹೆಚ್ಚಾದರೆ, ಕವರೇಜ್‌ ಸಿಗುವುದಿಲ್ಲ. ಹಾಗಾಗಿ ಆರೋಗ್ಯ ವಿಮೆಯನ್ನು ಪಡೆಯುವ ಮುನ್ನ ಇದರ ಬಗ್ಗೆಯೂ ಗಮನಿಸಿ.

ನಗದು ರಹಿತ ಕ್ಲೇಮ್:‌ ಇನ್ಶುರೆನ್ಸ್‌ ಕಂಪನಿಗಳು ಕೆಲ ಆಸ್ಪತ್ರೆಗಳಲ್ಲಿ ಮೊದಲು ಹಣವನ್ನು ಪಾವತಿಸಿ ನಂತರ ನಾವು ಆರೋಗ್ಯ ವಿಮೆಯನ್ನು ಕ್ಲೈಮ್‌ ಮಾಡಿಕೊಳ್ಳಬಹುದು. ಅದೇ, ಇನ್ಶುರೆನ್ಸ್‌ ಕಂಪನಿಗಳು ಒಡಂಬಡಿಕೆ ಮಾಡಿಕೊಂಡಿರುವ ಆಸ್ಪತ್ರೆಗಳಲ್ಲಿ ದಾಖಲಾದರೆ, ಯಾವುದೇ ಹಣವನ್ನು ಕಟ್ಟುವಂತಿರುವುದಿಲ್ಲ.

Related News

spot_img

Revenue Alerts

spot_img

News

spot_img