ಬಿಲ್ವ ಪತ್ರೆ ಶಿವನಿಗೆ ತುಂಬಾ ಪ್ರಿಯ. ಬಿಲ್ವ ಪತ್ರೆ ಇಲ್ಲದೆ ಭೋಲೆನಾಥನ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಿಲ್ವ ಪತ್ರೆಯ ಗಿಡವನ್ನು ನೆಡುವುದರಿಂದ ಅನೇಕ ವಾಸ್ತು ದೋಷಗಳಿಂದ ಮುಕ್ತಿ ದೊರೆಯುತ್ತದೆ.ಬಿಲ್ವ ಪತ್ರೆ ಮರವನ್ನು ಶ್ರೀ ವೃಕ್ಷ ಎಂದೂ ಕರೆಯುತ್ತಾರೆ. ಈ ಮರವು ಮನೆಯ ಸಮೀಪದಲ್ಲಿ ಇದ್ದರೆ, ಅದು ಸಂಪತ್ತು ಮತ್ತು ಸಮೃದ್ಧಿಯ ಮೊತ್ತವನ್ನು ಹೆಚ್ಚಾಗಿಸುತ್ತದೆ ಎನ್ನುವ ನಂಬಿಕೆಯಿದೆ.
ಬಿಲ್ವದ ಎಲೆಗಳು ದೃಷ್ಟಿ ಹೆಚ್ಚಿಸಲು, ಹೊಟ್ಟೆಯ ಹುಳುಗಳನ್ನು ಕೊಲ್ಲಲು ಮತ್ತು ಕ್ಯಾನ್ಸರ್ ತಡೆಗಟ್ಟುವಲ್ಲಿ ಬಹಳ ಉಪಯುಕ್ತವಾಗಿವೆ.ಬಿಲ್ವ ವೃಕ್ಷದ ಬೇರನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ತಿಜೋರಿಯಲ್ಲಿಟ್ಟರೆ ಆ ವ್ಯಕ್ತಿಗೆ ಹಣದ ಕೊರತೆಯಿರುವುದಿಲ್ಲ.
ಬಿಲ್ವ ಪತ್ರೆಯಿಲ್ಲದೆ ಶಿವನ ಆರಾಧನೆಯು ಅಪೂರ್ಣ. ಶಿವನನ್ನು ಮೆಚ್ಚಿಸಲು ಬಿಲ್ವ ಪತ್ರೆಯನ್ನು ಅರ್ಪಿಸುವುದು ಉತ್ತಮ ಮಾರ್ಗವೆಂದು ನಂಬಲಾಗಿದೆ. ಅದೇ ರೀತಿ ಹಿಂದೂ ಧರ್ಮವನ್ನು ಹೊರತುಪಡಿಸಿ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಬಿಲ್ವ ಪತ್ರೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಬಿಲ್ವ ಪತ್ರೆಯ ಗಿಡವನ್ನು ನೆಟ್ಟರೆ ಮನೆಯ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.ಬಿಲ್ವ ಪತ್ರೆ ಶಿವನಿಗೆ ತುಂಬಾ ಪ್ರಿಯ. ಮತ್ತೊಂದೆಡೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಿಲ್ವ ಪತ್ರೆಯ ಗಿಡವನ್ನು ನೆಡುವುದರಿಂದ ಅನೇಕ ವಾಸ್ತು ದೋಷಗಳಿಂದ ಮುಕ್ತಿ ದೊರೆಯುತ್ತದೆ.
ಬಿಲ್ವ ಪತ್ರೆ ಗಿಡವನ್ನುಮನೆಯಲ್ಲಿ ನೆಡುವುದರ ಪ್ರಯೋಜನಗಳು
1.ಬಿಲ್ವ ಪತ್ರೆ ಗಿಡವನ್ನು ನೆಡುವುದರಿಂದ ವ್ಯಕ್ತಿಯ ಪಾಪ ಕಾರ್ಯಗಳು ನಾಶವಾಗುತ್ತದೆ
2.ಶಿವ ಪುರಾಣದ ಪ್ರಕಾರ ಶಿವಲಿಂಗದ ಮೇಲೆ ಬಿಲ್ವ ಪತ್ರೆ ಅರ್ಪಿಸುವುದರಿಂದ ನೀವು ಒಂದು ಕೋಟಿ ಕನ್ಯಾದಾನಕ್ಕೆ ಸಮಾನವಾದ ಫಲವನ್ನು ಪಡೆಯುತ್ತೀರಿ.
3.ಭಗವಾನ್ ಶಿವನ ಹೊರತಾಗಿ ರಾಮನ ಭಕ್ತ ಹನುಮಂತನನ್ನು ಮೆಚ್ಚಿಸಲು ಬಿಲ್ವ ಪತ್ರೆಯು ಉಪಯುಕ್ತವಾಗಿದೆ.
4.ಬಿಲ್ವ ಪತ್ರೆಯ ಗಿಡಗಳನ್ನು ನೆಟ್ಟ ಮನೆಯಲ್ಲಿ ಬಡತನವೆಂದೂ ಬರುವುದಿಲ್ಲವಂತೆ.
5. ಮನೆಯಲ್ಲಿ ಯಾವಾಗಲೂ ಸುಖ- ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
6.ಹಣವನ್ನು ಇಡುವ ಸ್ಥಳದಲ್ಲಿ ಬಿಲ್ವ ಪತ್ರೆಯನ್ನು ಇಡುವುದರಿಂದ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗುತ್ತದಂತೆ.
7.ಬಿಲ್ವ ಪತ್ರೆ ನಕಾರಾತ್ಮಕ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
8.ಬಿಲ್ವ ಪತ್ರೆಯ ಗಿಡವು ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.
9.ಮನೆಯಲ್ಲಿ ಬಿಲ್ವಪತ್ರೆಯನ್ನು ನೆಟ್ಟರೆ ಚಂದ್ರನ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಬಿಲ್ವ ಪತ್ರೆಯ ಗಿಡ ನೆಡುವ ನಿಯಮಗಳು
10.ಬಿಲ್ವ ಪತ್ರೆಯ ಗಿಡವನ್ನು ನೆಡಲು ಉತ್ತಮ ದಿಕ್ಕು ಉತ್ತರ-ದಕ್ಷಿಣವಾಗಿದೆ.
11.ಬಿಲ್ವ ಪತ್ರೆ ಮರ ಅಥವಾ ಗಿಡದ ಬಳಿ ಸ್ವಚ್ಛತೆ ಇರಬೇಕು.
12.ಚತುರ್ಥಿ, ಅಷ್ಟಮಿ, ನವಮಿ ಮತ್ತು ಅಮವಾಸ್ಯೆ ತಿಥಿಯಂದು ಬಿಲ್ವ ಪತ್ರೆಯಿಂದ ಪೂಜಿಸಬೇಕು.
13.ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿ ಬಿಲ್ವ ಪತ್ರೆ ಸಸ್ಯ ಅಥವಾ ಗಿಡಗಳನ್ನು ಮುಟ್ಟಬಾರದು.
ಇನ್ನು ಶಿವ ದೇವರ ಪೂಜೆಯ ಸಂದರ್ಭದಲ್ಲಿ ವಿಶೇಷವಾದ ವಸ್ತುಗಳನ್ನು ಅರ್ಪಣೆ ಮಾಡುತ್ತೇವೆ. ಅದರಲ್ಲಿ ಪ್ರಮುಖವಾದುದು ಎಂದರೆ ಬಿಲ್ವಪತ್ರೆ. ಸೋಮವಾರದಂದು ಸ್ನಾನ ಮಾಡಿ ದೇವರಿಗೆ ಜಲಾಭಿಷೇಕವನ್ನು ಮಾಡಬೇಕು. ಬಿಲ್ವಪತ್ರೆಯನ್ನು ಸಮರ್ಪಿಸಿದರೆ ಮಹಾಶಿವನು ಸಂತೃಪ್ತರಾಗಿ ಬೇಡಿದ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಎಂಬುದು ಭಕ್ತರ ನಂಬಿಕೆ.
ಮೂರು ಎಲೆಗಳ ಕಾಂಡವನ್ನು ಶಿವಲಿಂಗದ ಮೇಲೆ ಅರ್ಪಿಸಿ.ಬಿಲ್ವ ಪತ್ರೆಯಿಲ್ಲದೆ ಶಿವನ ಆರಾಧನೆಯು ಅಪೂರ್ಣ. ಬಿಲ್ವ ಪತ್ರೆಯಿಲ್ಲದೆ ಶಿವನ ಆರಾಧನೆಯು ಅಪೂರ್ಣ. ಬಿಲ್ವ ಪತ್ರೆಯ ಗಿಡವನ್ನು ನೆಟ್ಟರೆ ಮನೆಯ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.