26.9 C
Bengaluru
Friday, July 5, 2024

ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ರಕ್ಷಿಸಿದ ಸಿಸಿಬಿ ಮಹಿಳಾ ಸಂರಕ್ಷಣಾ ದಳ

ಬೆಂಗಳೂರು, ಮಾ. 06 : ಭಿಕ್ಷಾಟನೆಯಲ್ಲಿ ತೊಡಗಿದ್ದವರನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ 14ತಂಡಗಳು ರಕ್ಷಣೆ ಮಾಡಿವೆ. ಬೆಂಗಳೂರು ನಗರದ ವಿವಿಧೆಡೆ ಒಟ್ಟು 55 ಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದರು. ಇವರನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ತಂಡಗಳು ರಕ್ಷಿಸಿವೆ.

ಕಳೆದ ತಿಂಗಳು ಭಿಕ್ಷಾಟನೆಯನ್ನು ಬೆಂಗಳೂರಿನಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ 14 ತಂಡಗಳನ್ನು ರಚಿಸಲಾಗಿತ್ತು. ಇದಕ್ಕಾಗಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ತಂಡಗಳನ್ನು ಸಿದ್ಧಗೊಳಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಸಿಪಿಒ ಅವರು ನೇತೃತ್ವವನ್ನು ವಹಿಸಿಕೊಂಡಿದ್ದರು. ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ನೋಡಲ್ ಸಂಸ್ಥೆಗಳು, ಮಕ್ಕಳ ಪಾಲನಾ ಸಂಸ್ಥೆಗಳು, ಚೈಲ್ಡ್ಲೈ.ನ್ ತಂಡ, ಆಫ್ಸಾ ಚೈಲ್ಡ್ಲೈುನ್ ತಂಡ, ಬೆಂಗಳೂರು ನಗರ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಎಸ್ಜೆ ಪಿಯು ತಂಡ ಹಾಗೂ ಕೇಂದ್ರ ಅಪರಾಧ ಪತ್ತೆ ದಳ ಸೇರಿ ಒಟ್ಟು 14 ತಂಡಗಳನ್ನು ರಚನೆ ಮಾಡಲಕಾಗಿತ್ತು.

ದಿನಾಂಕ 22-02-2023 ರಂದು ಬೆಳಿಗ್ಗೆ 09.00 ಗಂಟೆಯಿಂದ ಸಂಜೆ 06.00 ಗಂಟೆ ವರೆಗೆ ಏಕಕಾಲದಲ್ಲಿ ಬೆಂಗಳೂರು ನಗರದಲ್ಲಿ ಎಲ್ಲಾ ವಲಯದಲ್ಲೂ ರಕ್ಷಣಾ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ, ಕೇಂದ್ರ ಮತ್ತು ವೈಟ್ ಫೀಲ್ಡ್ ವಿಭಾಗಗಲ್ಲಿ ರಕ್ಷಣಾ ಕಾರ್ಯಚರಣೆಯನ್ನು ನಡೆಸಲಾಗಿತ್ತು. ಎಲ್ಲಾ ವಿಭಾಗಗಳಲ್ಲೂ 14 ತಂಡಗಳನ್ನು ರಚಿಸಿ ಏಕ ಕಾಲದಲ್ಲಿ ಎಲ್ಲಾ ವಲಯದ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು. ಭಿಕ್ಷಾಟಣೆಯಲ್ಲಿ ತೊಡಗಿದ್ದ 3 ಹುಡುಗರು, 5 ಹುಡುಗಿಯರು, 17 ತಾಯಂದಿರು, 18 ಮಕ್ಕಳು, ಐವರು ಹೆಂಗಸರು ಹಾಗೂ 07 ಜನ ಗಂಡಸರನ್ನು ರಕ್ಷಣೆ ಮಾಡಲಾಗಿದೆ. ಒಟ್ಟು 55 ಜನರನ್ನು ಈ ದಾಳಿಯಲ್ಲಿ ರಕ್ಷಣೆ ಮಾಡಲಾಗಿದೆ.

ಭಿಕ್ಷಾಟನೆಗೆ ದೂಡುವ ಸಲುವಾಗಿ ಮಹಿಳೆ ಹಾಗೂ ಮಕ್ಕಳನ್ನು ಕಳ್ಳಸಾಗಣೆ ಮಾಡಲಾಗುತ್ತದೆ ಎಂದು ಹೇಳಳಾಗಿದೆ. ಕೆಲ ಮಹಿಳೆಯರನ್ನು ಬಾಡಿಗೆ ಹಾಗೂ ಕಳ್ಳ ಸಾಗಾಣಿಕೆ ಮೂಲಕ ಮಕ್ಕಳನ್ನು ತಂದಿರಬಹುದು ಎಂದು ಹೇಳಲಾಗಿದೆ. ಮಕ್ಕಳಿಗೆ ನಿದ್ದೆ ಬರುವ ಔಷಧಿ ನೀಡಿ ಮಲಗಿಸಿ ಮಹಿಳೆಯರ ಕೈಗೆ ಕೊಟ್ಟು ಭಿಕ್ಷಾಟನೆ ಮಾಡಿಸುತ್ತಿದ್ದರು. ಮಹಿಳೆ ಮತ್ತು ಮಕ್ಕಳನ್ನು ಸಿ.ಡಬ್ಲ್ಯೂ.ಸಿ, ಡಿ.ಸಿ.ಪಿ.ಓ ಸ್ವಾಧಾರ ಕೇಂದ್ರಗಳಿಗೆ ಒಪ್ಪಿಸಿ ವಶಕ್ಕೆ ಪಡೆಯಲಾಗಿದೆ.

Related News

spot_img

Revenue Alerts

spot_img

News

spot_img