ಬೆಂಗಳೂರು, ಆ. 15 : ಮೊದಲಿಗಿಂತಲೂ ಈಗ ಸಾಲ ಪಡೆಯುವುದು ಕಷ್ಟವೇನಲ್ಲ. ಯಾವಾಗ ಎಂದರೆ ಆಗ ಬ್ಯಾಂಕಿಗೆ ತೆರಳಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ದಾಖಲೆಗಳು ಸರಿಯಾಗಿದ್ದಲ್ಲಿ, ಹಾಗೆಯೇ ನಿಮ್ಮ ಆದಾಯದ ಬಗ್ಗೆ ಸಂಪೂರ್ಣ ಮಾಹಿತಿ ಬ್ಯಾಂಕ್ ಗೆ ತಿಳಿದ್ದರೆ, ಸುಲಭವಾಗಿ ಲೋನ್ ಸಿಗುತ್ತದೆ. ಆದರೆ, ಈಗ ಲೋನ್ ಪಡೆಯುವುದು ಇನ್ನೂ ಸುಲಭವಾಗಿದೆ. ಆನ್ ಲೈನ್ ನಲ್ಲಿ ಸಾಕಷ್ಟು ಆಪ್ ಗಳು ಬಂದಿದ್ದು, ಎಲ್ಲವೂ ಒಂದೇ ನಿಮಿಷದಲ್ಲಿ ಲೋನ್ ಕೊಡಿಸುತ್ತವೆ.
ಆದರೆ, ಅಂತಹ ಆಪ್ ಗಳಿಂದ ಬಹಳ ಕಷ್ಟವನ್ನೂ ಅನುಭವಿಸಬೇಕಾಗುತ್ತದೆ. ಈಗ ಸಿಕ್ಕಾಪಟ್ಟೆ ಫೇಕ್ ಆಪ್ ಗಳು ಹುಟ್ಟಿಕೊಂಡಿವೆ. ಇವುಗಳಿಂದ ಪಡೆದು ಬಹಳ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅಂತಹ ಆಪ್ ಗಳೀಮದ ಸಾಲ ಪಡೆದು ಪರದಾಡುವುದಕ್ಕಿಂತಲೂ, ಅವುಗಳನ್ನು ಗುರುತಿಸಿ ದೂರ ಇಡುವುದು ಬಹಳ ಒಳ್ಳೆಯದು. ವಂಚಿಸುವಂತಹ ಆಪ್ ಗಳನ್ನು ಗುರುತಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳೀಯೋಣ.
ಅಧಿಕೃತ ಹಣಕಾಸು ಸಂಸ್ಥೆಯಿಂದ ಮಾತ್ರವೇ ಸಾಲವನ್ನು ಪಡೆದುಕೊಳ್ಳಿ. ಆರ್‌ಬಿಐನಲ್ಲಿ ನೋಂದಾಯಿತಗೊಂಡಿರುವ ಹಣಕಾಸು ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆಯಿರಿ. ಬಳಿಕ ಅಂತಹ ಆಪ್ ಗಳಿಂದ ಸಾಲ ಪಡೆದುಕೊಳ್ಳಿ. ಇಲ್ಲದೇ ಹೋದಲ್ಲಿ ಸಾಲಕ್ಕಿಂತಲೂ ಬಡ್ಡಿಯನ್ನೇ ಹೆಚ್ಚು ಪಾವತಿಸಬೇಕಾದೀತು. ಇನ್ನು ಸಾಲ ಪಡೆಯುತ್ತಿರುವುದಕ್ಕೆ ಅಗ್ರಿಮೆಂಟ್ ಕೂಡ ಪಡೆಯಿರಿ. ಅಗ್ರಿಮೆಂಟ್ ಇಲ್ಲದೆ ಹೋದರೆ, ಎಷ್ಟು ಬಡ್ಡಿ ಬೀಳುತ್ತದೆ. ದಂಡ ಎಷ್ಟು ಕಟ್ಟಿಸಿಕೊಲಳುತ್ತಾರೆ ಎಂಬೆಲ್ಲಾ ಬಗ್ಗೆ ಮಾಹಿತಿ ಪಡೆಯಿರಿ.
ಇನ್ನು ಆಪ್ ಗಳಲ್ಲಿ ನಿಮ್ಮ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ವಿವರ ಕೇಳಿದರೆ ಎಚ್ಚರವಾಗಿರಿ. ಇನ್ನು ಆ್ಯಪ್ ಅನ್ನು ಇನ್ಸ್ಟಾಲ್ ಮಾಡುವಾಗ ನಿಮ್ಮ ವಯಕ್ತಿಕ ವಿಚಾರಗಳ ಪರ್ಮಿಷನ್ ಕೇಳಿದರೆ ಸ್ವಲ್ಪ ಎಚ್ಚರವಾಗಿರುವುದು ಸೂಕ್ತ. ಅಲ್ಲದೇ, ಆ ಆಪ್ ಯಾವ ಕಂಪನಿಯದ್ದು, ಅದರ ಆಫೀಸ್ ಎಲ್ಲಿದೆ ಎಂಬ ಬಗ್ಗೆ ಆದಷ್ಟು ಮಾಹಿತಿ ಪಡೆಯಿರಿ. ಕಂಪನಿಯ ಮಾಹಿತಿ ಇಲ್ಲದೇ ಯಾವುದೇ ಕಾರಣಕ್ಕೂ ಆಪ್ ಗಳ ಮೂಲಕ ಸಾಲ ಪಡೆಯಬೇಡಿ.